ಓದ್ಯೋಗಿಕ ವಲಯದಲ್ಲಿ ಧ್ವನಿಯು ಅರ್ಥವ್ಯವಸ್ಥೆಯ ಮುಖ್ಯ ಸಾಧನೆ
ಬೆಂಗಳೂರಿನ ಗೋಲ್ಡ್ನ ವೈಸ್ ಸಂಸ್ಥೆಯ ನಿರ್ದೇಶಕ ಮಿಮಿಕ್ರಿ ಮಹೇಶ ಅಭಿಮತ: ಕೌಶಲ್ಯ ಬೆಳವಣಿಗೆ, ಧ್ವನಿ ಸಂಸ್ಕರಣ ಕಾರ್ಯಗಾರ
ಶೇಡಬಾಳ 06: ಧ್ವನಿಯು ಶಬ್ದದ ಪರಿಕಲ್ಪನೆಯಾಗಿದ್ದು ಅರ್ಥವು ಕಂಪಿಸುವ ಚಲನೆಗಳ ಮೂಲಕ ಕಿವಿಯನ್ನು ತಲುಪಿ ಸಂವೇದನೆಯಿಂದ ಹರಡುತ್ತದೆ. ಓದ್ಯೋಗಿಕ ವಲಯದಲ್ಲಿ ಧ್ವನಿಯು ಅರ್ಥವ್ಯವಸ್ಥೆಯ ಮುಖ್ಯ ಸಾಧನೆಯಾಗಿದೆ ಎಂದು ಬೆಂಗಳೂರಿನ ಗೋಲ್ಡ್ನ ವೈಸ್ ಸಂಸ್ಥೆಯ ನಿರ್ದೇಶಕ ಮಿಮಿಕ್ರಿ ಮಹೇಶ ಹೇಳಿದರು.
ಅವರು ಗುರುವಾರ ದಿ. 6ರಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಸಂಘದ ಆಶ್ರಯದಲ್ಲಿ ನಡೆದ "ಕೌಶಲ್ಯ ಬೆಳವಣಿಗೆ ಹಾಗೂ ಧ್ವನಿ ಸಂಸ್ಕರಣ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಧ್ವನಿ ಕೌಶಲ್ಯದ ಕುರಿತು ವಿವರವಾಗಿ ಮಾಹಿತಿಯನ್ನು ಹೇಳಿದ ಅವರು ಇವತ್ತು ವಾಣಿಜ್ಯ ಕೇಂದ್ರದಲ್ಲಿ ಲಕ್ಷಾಂತರ ಧ್ವನಿ ಕಲಾವಿದರು ಟಿವಿ, ಸಿನಿಮಾ, ವೆಬ್ಸಿರಿಸ್, ರೆಡಿಯೋ ಮುಂತಾದ ವಲಯಗಳಲ್ಲಿ ಧ್ವನಿ ಕಲಾವಿದರ ಅವಶ್ಯಕತೆ ಇದ್ದು ವಿದ್ಯಾರ್ಥಿನಿಯರು ಹೆಚ್ಚೆಚ್ಚು ರೀತಿಯಲ್ಲಿ ಈ ಉದ್ಯಮದಲ್ಲಿ ಪ್ರವೇಶಾತಿಯನ್ನು ಪಡೆದುಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲರಾಗಬಹುದೆಂದರು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ.ಪಾಟೀಲರವರು ಸಂಕೀರ್ಣದ ಬದುಕಿನಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರತಿಭೆಯಿಂದ ಓದಿನ ಜೊತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಬದುಕನ್ನು ನಡೆಸುವಂತೆ ಆಗಬೇಕು ಅಂದಾಗ ಮಾತ್ರ ಕಲಿತಿರುವ ಶಿಕ್ಷಣ ಯೋಗ್ಯ ರೀತಿಯಲ್ಲಿ ಸದುಪಯೋಗವಾಗುತ್ತದೆ ಎಂದರು.
ಕಾರ್ಯಗಾರದಲ್ಲಿ ಇನ್ನೊರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಕಾಗವಾಡದ ಧ್ವನಿ ಸಂಸ್ಕರಣಾ ಕಲಾವಿದ ಅಜೀತ ವಿವೇಕಿಯವರು ಮಾತನಾಡಿ ಮನುಷ್ಯರು ಧ್ವನಿಯನ್ನು ಬಳಕೆ ಮಾಡುವುದರಲ್ಲಿ ಕರಗತರಾಗಿರುತ್ತಾರೆ. ಆದರೆ ಸೂಕ್ತವಾದ ಸಂದರ್ಭದಲ್ಲಿ ಧ್ವನಿಯ ಏರಿಳಿತಗಳನ್ನು ಅರಿಯಬೇಕಾದರೆ ಇಂತಹ ಕಾರ್ಯಗಾರಗಳು ಸೂಕ್ತವಾಗಿವೆ. ಹಾಗಾಗಿ ಇವತ್ತಿನ ಚಲನಚಿತ್ರ ಉದ್ಯಮ ಅನೇಕ ಧ್ವನಿ ಕಲಾವಿದರನ್ನು ನೀರೀಕ್ಷಿಸುತ್ತಿದೆ. ವಿದ್ಯಾರ್ಥಿಗಳು ಇದರ ಒಲವನ್ನು ರೂಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಡನೆ ಪ್ರಶ್ನೋತ್ತರವನ್ನು ನಡೆಸಿದರು. ಕಾರಾ್ಯಗಾರದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವ್ಹಿ.ಎಸ್.ತುಗಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕೌಶಲ್ಯವನ್ನು ಹೆಚ್ಚಿಸುವಲ್ಲಿ ಪಠ್ಯದ ಜೊತೆಗೆ ಈ ರೀತಿಯ ಕಾರಾ್ಯಗಾರಗಳು ಮಹಾವಿದ್ಯಾಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಾ ಬಂದಿವೆ. ಧ್ವನಿ ಸಂಸ್ಕರಣಾ ಕಾರಾ್ಯಗಾರವು ತುಂಬಾ ಉಪಯುಕ್ತವಾದ ಕಾರ್ಯಗಾರವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ವಿದ್ಯಾರ್ಥಿನಿಯರ ಸಂಘದ ಕಾರಾ್ಯಧ್ಯಕ್ಷ ಡಾ. ಡಿ.ಡಿ.ನಗರಕರ ಅವರು ವಿದ್ಯಾರ್ಥಿನಿಯರಿಗೆ ಹೊಸ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಮಹಾವಿದ್ಯಾಲಯದ ಆದರ್ಶ ವಿದ್ಯಾರ್ಥಿ ಮತ್ತು ಆದರ್ಶ ವಿದ್ಯಾರ್ಥಿನಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೀತಿ ಕುರಬರ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಉಪ-ಪ್ರಾಚಾರ್ಯ ಡಾ.ಎಸ್.ಎ.ಕರ್ಕಿ ಸ್ವಾಗತಿಸಿದರು. ಡಾ.ಎಸ್.ಪಿ.ತಳವಾರ ವಂದಿಸಿದರು. ಪ್ರೊ. ಎಸ್.ಡಿ.ಮಗದುಮ್ಮ ನಿರೂಪಿಸಿದರು.