ಒನಕೆ ಓಬವ್ವ ಜಯಂತ್ಯೋತ್ಸವ
ರಾಣೇಬೆನ್ನೂರ: ನ 11ತಾಲ್ಲೂಕಾಡಳಿತ ರಾಣೇಬೆನ್ನೂರು ಮತ್ತು ಛಲವಾದಿ ಮಹಾಸಭಾ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಸ್ಥೆಯು, ಇಂದು ರಾಣೇಬೆನ್ನೂರು ತಾಲ್ಲೂಕ ಕಚೇರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತೋತ್ಸವವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಆಚರಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ತಾಲ್ಲೂಕ ಶಿರಸ್ತೇದಾರರಾದ ವೀಣಾ ಕಲ್ಲಮ್ಮನವರ ಹಾಗೂ ಚಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷ ಬಸವರಾಜ ಸಾವಕ್ಕನವರ, ಸಮಾಜದ ಹಿರಿಯ ಮುಖಂಡರಾದ ಕುಬೇರ್ಪ ಆಟವಾಳಗಿ ಅಂಬೇಡ್ಕರ್ ಸೇವಾ ಸಂಸ್ಥೆ ಮತ್ತು ಎಸ್ ಎಫ್ ಐ ಅಧ್ಯಕ್ಷ ಶ್ರೀಧರ್ ಚಲವಾದಿ ಹಾಗೂ ಸಂಸ್ಥೆಯ ಕಾರ್ಯಕರ್ತರು ಚಲವಾದಿ ಸಮಾಜದ ಮಹಿಳೆಯರು ಯುವಕರು ಹಿರಿಯ ಮುಖಂಡರು ಸೇರಿದಂತೆ ತಾಲ್ಲೂಕಾಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.