28ರಂದು ವೀರಭದ್ರೇಶ್ವರ ದೇವರ ನೂತನ ರಥದ ಪುರಪ್ರವೇಶದ ಮೆರವಣಿಗೆ
ಬ್ಯಾಡಗಿ 24: ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಸದ್ಭಕ್ತರ ಸಹಕಾರದೊಂದಿಗೆ ನಿರ್ಮಾಣಗೊಂಡಿರುವ ವೀರಭದ್ರೇಶ್ವರ ದೇವರ ನೂತನ ರಥದ (ಗಡ್ಡಿ ತೇರು) ಪುರ್ರವೇಶದ ಮೆರವಣಿಗೆಯು ಇದೇ ದಿ.28ರಂದು ಜರುಗಲಿದೆ.ಅಂದು ಸಂಜೆ ಪ್ರಸಿದ್ದ ಮಹಿಳಾ ವೀರಗಾಸೆ ನೃತ್ಯ, ಡೊಳ್ಳಿನ ಮೇಳ, ನಂದಿಕೋಲು ಕುಣಿತ ಮತ್ತು ಸಕಲ ವಾದ್ಯಮೇಳಗಳ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೂತನ ಗಡ್ಡಿ ತೇರಿನ ಮೆರವಣಿಗೆಯು ಪುರ್ರವೇಶದೊಂದಿಗೆ ಸಂಚರಿಸಿ ವೀರಭದ್ರೇಶ್ವರ ದೇವಸ್ಥಾನ ತಲುಪುವುದು.ಏಪ್ರಿಲ್ 2ರಂದು ಶನಿವಾರ ಬೆಳಿಗ್ಗೆ 8ಗಂಟೆಗೆ ಗಣಹೋಮವು ನಡೆಯಲಿದೆ. ಏಪ್ರಿಲ್ 3ರಂದು ರವಿವಾರ ಬೆಳಿಗ್ಗೆ 8ಗಂಟೆಗೆ ನೆಗಳೂರ ಸಂಸ್ಥಾನ ಹಿರೇಮಠದ ಶ್ರೀಗುರು ಶಾಂತೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ನೂತನ ಗಡ್ಡಿತೇರಿಗೆ ಜೀವಕಳೆ ತುಂಬಿ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವ ಸದ್ಭಕ್ತರು ಆಗಮಿಸಿ ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಸಮಿತಿಯವರು ಪ್ರಕಟಣೆಯ ಮೂಲಕ ಕೋರಿದ್ದಾರೆ.