ಇಂಡಿ

ಡಿ.5ರಂದು ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವ

ಡಿ.5ರಂದು ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವ

ಇಂಡಿ: ಡಿ. 5 ರಿಂದ 7 ರವರೆಗೆ ಪಟ್ಟಣದ ಆರಾಧ್ಯದೈವ ಶಾಂತೇಶ್ವರ ದೇವರ ಜಾತ್ರಾ ಮಹೋತ್ಸವ ನಡೆಯಲಿದೆ. ಡಿ. 5ರಂದು ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವರಾಧ್ಯೆ ಶಿವಾಚಾರ್ಯರ ಅಡ್ಡ ಪಲ್ಲಕ್ಕಿ ಉತ್ಸವ, ಹಾಗೂ ಸುಮಂಗಲೆಯರಿಂದ ಕುಂಭ ಮೆರವಣಿಗೆ, ಸಕಲ ವಾಧ್ಯ ವೈಭೋಗಳಿಂದ ಶ್ರೀಶಾಂತೇಶ್ವರ ದೇವಸ್ಥಾನಕ್ಕೆ ಬಂದು ತಲುಪಿದ ನಂತರ  ಧರ್ಮಸಭೆ ಹಾಗೂ ಸಾಮೂಹಿಕ ವಿವಾಹ ಜರಗುವುದು. 

ಅಲ್ಲದೆ ರಾತ್ರಿ 9-00  ಘಂಟೆಗೆ ಹರದೇಶಿ, ನಾಗೇಶಿ ಡಪ್ಪಿನ ಪದ, ಮಂಗಳವಾರ ಡಿ,6ರಂದು ಅಕ್ಕಿಪೂಜೆ ಡಾ.ಸಂತೋಷ ಸಾರ್ವಭೌಮ ಬಗಲಿಯವರಿಂದ ಹಾಗೂ ನಂದಿಕೋಲ ಪ್ರದಕ್ಷಿಣೆ, ನಂತರ ಬೆಳಿಗ್ಗೆ 9-00 ಯಿಂದ 4-00 ಗಂಟೆಯವರೆಗೆ ಗೀಗೀ ಪದಗಳು ಹರದೇಶಿ, ನಾಗೇ ಪದಗಳು, ಡಿ.7ರಂದು ಬೆಳಗಿನ 4-00 ಗಂಟೆಗೆ ಮಂಗಳಾರತಿ ದಿ.ದಾದಾಗೌಡ ಪಾಟೀಲ ಮನೆತನದವರಿಂದ ನಂತರ ಬೆಳಗಿನ 6-00 ಗಂಟೆಗೆ ಕಳ್ಳಿಮಠದಿಂದ ತಂಗಿದ ನಂದಿಕೋಲ ಹಾಗೂ ಬಾಸಿಂಗ್ ಪುರವಂತರು ದೇವರ ಪಲ್ಲಕ್ಕಿ. ಕೀಲಗೊಂಬೆ ಕುಣಿತ ವಿವಿಧ ವಾದ್ಯ ವೈಭೋಗಗಳೊಂದಿಗೆ ಮೆರವಣಿಗೆ ನಂತರ ದೇವರ ಮುಖ್ಯ ದ್ವಾರದ ಮುಂದೆ ಭಕ್ತರಿಂದ ಸಿಡಿಗಾಯಿ ಅರೆ​‍್ಣ, ಮಧ್ಯಾಹ್ನ ಜಂಗೀ ನಿಕಾಲಿ ಕುಸ್ತಿ ಪುರಸಭೆ ವತಿಯಿಂದ ಜರಗುವವು. 

ಅಂದು ರಾತ್ರಿ 7-00 ಗಂಟೆಗೆ ದೇವರ ಪಲ್ಲಕ್ಕಿ ಪೀರ ಮಂಜಲೇಖಾನ್ ಗಂಧ ಗಲೀಪ್, ಕರ​‍್ೂರ ಅರೆ​‍್ಣ ನಂತರ ದೇವರು ಹಳ್ಳದ ಪಾದಗಟ್ಟಿಗೆ ತಲುಪುವವು.   

ಅಂದು ರಾತ್ರಿ 10 ಗಂಟೆಗೆ ಚಿತ್ರ ವಿಚಿತ್ರ ಮದ್ದು ಸುಡುವುದು. ಭಕ್ತಾದಿಗಳು ಶಾಂತೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾಗಬೇಕು ಎಂದು ಸದ್ಗುರು ಶಾಂತೇಶ್ವರ  ದೇವರ ಹಿರೇಇಂಡಿ ಹನುಮಂತ ದೆವರ ಟ್ರಸ್ಟ, ಶ್ರೀಶಾಂತೇಶ್ವರ ಸೌರ್ಹಾರ್ದ ಪತ್ತಿನ ಸಹಕಾರಿ ನಿ, ಇಂಡಿಯ ಅಧ್ಯಕ್ಷ ಕಾಸುಗೌಡ ಬಿರಾದಾರ ಪ್ರಕಟಣೆಗೆ ತಿಳಿಸಿದ್ದಾರೆ. 


. 


ಸುದ್ದಿ ಓದಿ