ರಾಣೆಬೆನ್ನೂರ

27 ರಂದು ತಾಲೂಕ ಕುರುಬ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ

27 ರಂದು ತಾಲೂಕ ಕುರುಬ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ

27 ರಂದು ತಾಲೂಕ ಕುರುಬ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ 

ರಾಣೇಬೆನ್ನೂರು 24:ಇಲ್ಲಿನ ಹಲಗೇರಿ ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಅಕ್ಟೋಬರ್ 27,2024ರಂದು ರವಿವಾರ ಮುಂಜಾನೆ 10,ಗಂಟೆಗೆ ತಾಲೂಕ ಕುರುಬ ನೌಕರರ ಸಮಾವೇಶ ಹಾಗೂ ತಾಲೂಕ ಮಟ್ಟದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ, ಮತ್ತು ಸಾಧಕರ ಅಭಿನಂದನಾ ಸನ್ಮಾನ ಸಮಾರಂಭವು ನಡೆಯಲಿದೆ. ಎಂದು ಸಂಘದ ಅಧ್ಯಕ್ಷ ಸುಭಾಶಚಂದ್ರ ಕುರುಬರ ಅವರು ತಿಳಿಸಿದ್ದಾರೆ. 

ತಾಲೂಕ ಕುರುಬ ನೌಕರರ ಸಂಘವು ತನ್ನ 17ನೇ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪ್ರದೇಶ ಕುರುಬರ ಸಂಘ ಕುರುಬ ಸಮಾಜದ ವಿವಿಧ ಸಂಘಟನೆಗಳು, ಭಕ್ತ ಶ್ರೇಷ್ಠ ಕನಕದಾಸರ 537ನೇ ಜಯಂತೋತ್ಸವದ ನಿಮಿತ್ತ ಆಯೋಜಿಸಿದೆ. 

ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸುವರು. 

ಶಾಸಕ ಪ್ರಕಾಶ್ ಕೆ.ಕೋಳಿವಾಡ, ಅವರು ಸಮಾರಂಭ ಉದ್ಘಾಟಿಸುವರು. 

ಸಂಘದ ಅಧ್ಯಕ್ಷ ಸುಭಾಶಚಂದ್ರ ಡಿ ಕುರುಬರ ಅಧ್ಯಕ್ಷತೆ ವಹಿಸುವರು. 

ಮಾಜಿ ಸಚಿವ ಆರ್‌. ಶಂಕರ್ ಅವರು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಗೌರವಿಸುವರು. 

ಮುಖ್ಯ ಅತಿಥಿಗಳಾಗಿ, ಸುಪ್ರಿಡೆಂಟ್‌ ಇಂಜಿನಿಯರ್ ನಾಗಪ್ಪ ಬೆಳಕೇರಿ, ಇನ್ಸೈಟ್ ಸಂಸ್ಥಾಪಕ ವಿಜಯಕುಮಾರ್ ಜಿ,ಬಿ, ಕೃಷಿ ಉಪನಿರ್ದೇಶಕ ಕರಿಯಲ್ಲಪ್ಪ ಕೊರಚರ, ಡಾಕ್ಟರ್ ಪ್ರವೀಣ್ ಕುಮಾರ ಖನ್ನೂರ, ಅಬಕಾರಿ ನೀರೀಕ್ಷಕ ಹನುಮಂತಪ್ಪ ಪಟಾತ, ದಿಳ್ಳೆಪ್ಪ ಅಣ್ಣೇರ, 

ಎಂ.ಡಿ. ದ್ಯಾಮಣ್ಣನವರ,, ಪ್ರಭಾಕರ್ ಶಿಗ್ಲಿ, ಷಣ್ಮುಖಪ್ಪ ಕಂಬಳಿ, ಏನ್‌. ಎಂ. ಚೌಡಣ್ಣನವರ, ಶಿವಪ್ಪ ಮೆಡ್ಲೇರಿ, ಕೆ. ಸಿದ್ದಪ್ಪ, ಭರಮಪ್ಪ ಪೂಜಾರ, ಸೇರಿದಂತೆ ಮತ್ತಿತರ ಗಣ್ಯರು, ಸಮಾಜದ ಮುಖಂಡರು ಪಾಲ್ಗೊಳ್ಳುವರು. 


ಸುದ್ದಿ ಓದಿ