ವಿನೂತನ ಘಟನೆಗೆ ಸಾಕ್ಷಿಯಾದ ಜುಗೂಳ ಕೆಎಸ್ಎಸ್ ಪ್ರೌಢ ಶಾಲೆ..
ಗುರುಪೂರ್ಣಿಮೆ ದಿನದಂದು ಕಲಿತ ಶಾಲೆಗೆ ಸ್ಮಾರ್ಟ ಟಿವ್ಹಿ ನೀಡಿದ ಹಳೆ ವಿದ್ಯಾರ್ಥಿಗಳು..!
ಕಾಗವಾಡ 23: ತಾಲೂಕಿನ ಜುಗೂಳ ಗ್ರಾಮದ ಕರ್ನಾಟಕ ಶಿಕ್ಷಣ ಸಮಿತಿಯ ಪ್ರೌಢಶಾಲೆಗೆ ನಿನ್ನೆ ಸೋಮವಾರ ದಿ. 22 ರಂದು ಗುರು ಪೂರ್ಣಿಮೆಯ ದಿನದಂದು ಸನ್ 1997-98 ನೇ ಸಾಲಿನ ಹಳೆ ವಿದ್ಯಾರ್ಥಿಗಳು ಸುಮಾರು 47 ಸಾವಿರ ಮೌಲ್ಯದ ಸ್ಮಾರ್ಟ ಟಿವ್ಹಿ ನೀಡುವ ಮೂಲಕ ಕಲಿತ ಶಾಲೆಗೆ ಗೌರವ ತೋರಿ, ಈಗ ಅಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲು ಮಾಡಿಕೊಟ್ಟಿದ್ದಾರೆ.
ಆಧುನಿಯ ಶಿಕ್ಷಣ ಪದ್ಧತಿಯಲ್ಲಿ ಸ್ಮಾರ್ಟ ಕ್ಲಾಸ್ಗಳ ಅವಶ್ಯಕತೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ತಾವು ಕಲಿತಿರುವ ಶಾಲೆಯ ವಿದ್ಯಾರ್ಥಿಗಳು ಸ್ಮಾರ್ಟ ಕ್ಲಾಸ್ಗಳ ಮುಖಾಂತರ ಶಿಕ್ಷಣ ಪಡೆಯಲಿ ಎಂಬ ಸದುದ್ದೇಶದಿಂದ ಗುರು ಪೂರ್ಣಿಮೆಯ ನಿಮಿತ್ಯವಾಗಿ ಎಲ್ಜಿ-55 ಇಂಚಿನ ಸ್ಮಾರ್ಟ ಟಿವ್ಹಿಯನ್ನು ಶಾಲೆಗೆ ಕಾಣಿಕೆಯಾಗಿ ನೀಡಿದ್ದು, ತಾವು ಕಲಿತ ಶಾಲೆಯಲ್ಲಿ ಈಗ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲು ಮಾಡಿಕೊಟ್ಟಿದ್ದಾರೆ.
ಗುರು ಪೂರ್ಣಿಮೆಯ ನಿಮಿತ್ಯವಾಗಿ ನಡೆದ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಸಿಯೊಂದನ್ನು ನೆಟ್ಟು, ಸ್ಮಾರ್ಟ ಟಿವ್ಹಿಯನ್ನು ಶಾಲೆಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಶಾಲೆಯ ಮುಖ್ಯೋದ್ಯಾಪಕರಾದ ಎಂ.ಸಿ. ಹೂಗಾರ ಮಾತನಾಡಿ, 1997-98 ನೇ ಸಾಲಿನ ಹಳೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದಿಂದ ಧನ್ಯವಾದ ತಿಳಿಸಿದ್ದಾರೆ.
ಕೆಎಸ್ಎಸ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಲಾಸ ಕಡೋಲೆ, ಮುಖ್ಯೋದ್ಯಾಪಕರಾದ ಎಂ.ಸಿ. ಹೂಗಾರ 1997-98 ನೇ ಸಾಲಿನ ಹಳೆ ವಿದ್ಯಾರ್ಥಿಗಳಾದ ರಾಯಗೌಡಾ ಪಾಟೀಲ, ನೀತಿನ ಪಾಟೀಲ, ದಯಾನಂದ ಅಮ್ಮಣಿಗೆ, ಸಂಭವ ಭೋಸಗೆ, ನೀತಿನ ಪಾಂಗರೆ, ಶಿವಾನಂದ ಪಾಟೀಲ, ಆನಂದ ಮಾಸೂಲೆ, ಅಜೀತ ಘಟಗೆ, ಪ್ರಮೋದ ಖೋತ, ಭಗವಂತ ಖವಟಕೊಪ್ಪ, ಸುನೀಲ ಕಾಂಬಳೆ, ರಾಜು ವಾಂಟೆ, ಅನಿತಾ ವಾಂಟೆ, ಸವೀತಾ ಲೆಂಡೆ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮುಖಂಡರು, ಶಿಕ್ಷಕ-ಶಿಕ್ಷಕಿಯರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.