ಇಂಡಿ

ಸಮುದಾಯದ ಜನರಿಂದ ಅಧಿಕಾರಿಗಳನ್ನು ತೀವ್ರ ತರಾಟೆ

ಸಮುದಾಯದ ಜನರಿಂದ ಅಧಿಕಾರಿಗಳನ್ನು ತೀವ್ರ ತರಾಟೆ
ಇಂಡಿ: ತಳವಾರ, ಪರಿವಾರ ಸಮುದಾಯದ ಜನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂಡಿ: ಅರ್ಜಿ ಸ್ವೀಕರಿಸಲ್ಲ, ಸ್ಥಾನಿಕ ಚೌಕಾಸಿ ಮಾಡಲ್ಲ, ಕಛೇರಿಯಲ್ಲಿ ಕುಳಿತುಕೊಂಡೇ ಜಾತಿ ನಿರ್ಧಾರ ಮಾಡುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ‌್ಯಕ್ರಮದಲ್ಲಿ ಕಂಡು ಬಂತು. 

ಬಹುದಿನಗಳ ಬೇಡಿಕೆಯಾದ ತಳವಾರ, ಪರಿವಾರ ಸಮುದಾಯದ ಜನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಳವಾರ ಸಮಾಜವನ್ನು ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದಗಳೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಸಹ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸುತ್ತೋಲೆ ಹೊರಡಿಸಿದೆ. ಆದರೆ ಅಧಿಕಾರಿಗಳು ಮಾತ್ರ ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದರು. 

ತಳವಾರ ಸಮುದಯದ ಅರ್ಜಿಗಳನ್ನು ಸಕಾರಣ ನೀಡದೆ ತಿರಸ್ಕರಿಸಲಾಗುತ್ತಿದೆ. ರಾಜ್ಯದಲ್ಲಿ ಇರುವುದ ಓಂದೇ ತಳವಾರ, ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದವೇ ಈ ತಳವಾರ. ಇದನ್ನು ಅರಿಯಬೇಕು ಹಾಗೊಂದು ವೇಳೆ ಅಲ್ಲ ಎನ್ನುದಾದರೆ ಅದಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕೆಂದು ಒತ್ತಾಯಿಸಿದರು. 

ತಳವಾರ ಸಮಾಜದ ಆಕ್ರೋಶಕ್ಕೆ ಮಣಿದ ಅಧಿಕಾರಿಗಳು ಸಾಂಕೇತಿಕವಾಗಿ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಿ ಇನ್ನುಳಿದ ಅರ್ಜಿಗಳನ್ನು ನಾಡಕಚೇರಿಗೆ ತರುವಂತೆ ತಿಳಿಸಿದರು. 

ಡಾ. ಸುರೇಶ, ಸೋಮು ಜಮಾದಾರ, ಹಣಮಂತ ಜಮಾದಾರ, ಮಹೇಶ ಯಂಕಂಚಿ, ಶಿವಶರಣ ಜಮಾದಾರ, ಶ್ರೀಕಾಂತ ವಾಲಿಕಾರ, ಆನಂದ ವಾಲಿಕಾರ, ಸುರೇಶ ತಳವಾರ, ಸಾಯಬಣ್ಣ ವಾಲಿಕಾರ, ಕೊಟೆಪ್ಪ ನಾಲ್ವರ, ಭೀಂಣ್ಣ ತಾವರಖೇಡ ಸೇರಿದಂತೆ ಅನೇಕರು ಇದ್ದರು. 

. 


ಸುದ್ದಿ ಓದಿ