ಗುಳೇಗುಡ್ಡ

ಸತ್ಯಾಗ್ರಹ ಸ್ಥಳಕ್ಕೆ ಅಧಿಕಾರಿಗಳು, ಸಂಸದರ ಭೇಟಿ- ಸೌಹಾರ್ಧಯುತವಾಗಿ ಸಮಸ್ಯೆ ಬಗೆಹರಿಸುವುದಾಗಿ ಸಂಸದರ ಭರವಸೆ

ಸತ್ಯಾಗ್ರಹ ಸ್ಥಳಕ್ಕೆ ಅಧಿಕಾರಿಗಳು, ಸಂಸದರ ಭೇಟಿ- ಸೌಹಾರ್ಧಯುತವಾಗಿ ಸಮಸ್ಯೆ ಬಗೆಹರಿಸುವುದಾಗಿ ಸಂಸದರ ಭರವಸೆ
ಗುಳೇದಗುಡ್ಡದಲ್ಲಿ ಗದ್ದುಗೆ ರಕ್ಷಣೆಗಾಗಿ ನಡೆದಿರುವ ಸತ್ಯಾಗ್ರಹ ಸ್ಥಳಕ್ಕೆ ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಸಂಸದಸರು

ಗುಳೇದಗುಡ್ಡ 03: ಇಲ್ಲಿನ ಮುರಘಾಮಠದ ಲಿಂ. 6 ನೇ ಶ್ರೀಶಾಂತವೀರ ಶ್ರೀಗಳ ಜೀವಂತ ಸಮಾಧಿ ಗದ್ದುಗೆ  ರಕ್ಷಣೆಯ ವಿಷಯವಾಗಿ ನಡೆಯುತ್ತಿರುವ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಬಾಗಲಕೋಟೆಯಿಂದ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ, ಬಾದಾಮಿಯ ಸಹಾಯಕ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಿವಾನಂದ ಜಾಡರ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ  ಭೇಟಿ ನೀಡಿ, ಶ್ರೀಗಳಿಂದ ಮಾಹಿತಿ ಪಡೆದು ಪಕ್ಕದ ಜಾಗೆಯನ್ನು ಪುನ: ಅಳತೆ ಮಾಡಿದರು. 

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ್ ಮಾತನಾಡಿ, ಇಲ್ಲಿನ ರಸ್ತೆ ಅಗಲೀಕರಣ ವಿಚಾರವಾಗಿ ಪುರಾತನ ಗದ್ದುಗೆ ಸ್ಥಳಾಂತರ ಮಾಡುವ ಸಂದರ್ಭ ಒದಗಿ ಬಂದಾಗ ಇಲ್ಲಿನ ಎಲ್ಲ ಭಕ್ತ ಸಮೂಹ ಗದ್ದುಗೆ ಇಲ್ಲಿಯೇ ಉಳಿಯಬೇಕೆಂದು ಹಾಗೂ ತಮ್ಮ ಭಾವನೆಗೆ ಗೌರವ ಸಿಗಬೇಕು ಎನ್ನುವ ಉದ್ದೇಶದಿಂದ ಹೋರಾಟ ಮಾಡುತ್ತಿದ್ದಾರೆ. ಅಧಿಕಾರಿಗಳೂ ಕುಲಂಕುಶವಾಗಿ ವಿಚಾರ ಮಾಡುತ್ತಿದ್ದಾರೆ. ಅವರಿಗೂ ಸಹ ತಕ್ಷಣ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿಲ್ಲ. ಅವರೂ ಸಹ ತಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ನಾನೂ ಮಾತನಾಡುತ್ತೇನೆ. ಒಟ್ಟಿನಲ್ಲಿ ಸೌಹಾರ್ಧಯುತವಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಂಸದರು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಮುರಘಾಮಠ ಶ್ರೀಗಳು, ಭಕ್ತರು ಹಾಜರಿದ್ದರು. 

ಸುದ್ದಿ ಓದಿ