ಭಾವ ಪುಷ್ಪಗಳನ್ನು ಅರ್ಪಿಸಿವುದರಿಂದ ದೇವರನ್ನು ಸಂತೃಪ್ತಿಗೊಳಿಸಲು ಸಾಧ್ಯ
ಅಥಣಿ 22: ಬಾಹ್ಯ ಪುಷ್ಪಗಳನ್ನು ಅರ್ಪಿಸುವುದರೊಂದಿಗೆ ಭಾವ ಪುಷ್ಪಗಳನ್ನು ಅರ್ಪಿಸಿಸುವುದರಿಂದ ದೇವರನ್ನು ಸಂತೃಪ್ತಿಗೊಳಿಸಲು ಸಾಧ್ಯ ಎಂದು ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ಅವರು ಅಥಣಿಯಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರಾಕೃತವಾಗಿ ಸಿಗುವಂತಹ ಪತ್ರ, ಪುಷ್ಪ, ಫಲಗಳನ್ನು ದೇವರ ಪೂಜೆಯ ಸಂದರ್ಭದಲ್ಲಿ ಅರ್ಪಿಸಿ ಪೂಜೆ ಮಾಡುತ್ತೇವೆ, ಪತ್ರಗಳಲ್ಲಿ ಪ್ರಮುಖವಾಗಿ ತುಳಸಿ ಪತ್ರವನ್ನಿಟ್ಟು ಪೂಜಿಸುತ್ತೇವೆ, ತುಳಸಿಯಲ್ಲಿ ಲಕ್ಷ್ಮಿದೇವಿಯ ಸಾನಿಧ್ಯವಿರುವುದರಿಂದ ಪೂಜೆಮಾಡುವಾಗ ತುಳಸಿ ದಳವನ್ನು ಅರಅರ್ಪಿಸುತ್ತೇವೆ ಜೊತೆಗೆ ಎಲ್ಲತರಹದ ಸುಗಂಧ ಯುಕ್ತವಾದ ಹೂವುಗಳನ್ನು ಅರ್ಪಿಸಿತ್ತೇವೆ.
ಈ ಎಲ್ಲ ಪುಷ್ಪಗಳೊಂದಿಗೆ ದೇವರಿಗೆ ಸಮರ್ಿಸುವ ಮೊದಲ ಭಾವ ಪುಷ್ಪವೇ ಅಹಿಂಸೆ ಪುಷ್ಪ, ದೇವರನ್ನು ಪೂಜಿಸುವಾಗ ಮನಸ್ಸಿನಲ್ಲಿ ಮತ್ತೊಬ್ಬರನ್ನು ನೋಯಿಸುವ ಭಾವವಿಟ್ಟುಕೊಂಡು ಪೂಜಿಸಿದಲ್ಲಿ ಪೂಜೆಗೆ ಅರ್ಥವೇ ಇಲ್ಲ, ಭಗವಂತ ಸ್ವತಃ ಮಂದಹಾಸಪ್ರಿಯ ಆತನನ್ನು ಪೂಜಿಸುವಾಗ ಮತ್ತೊಬ್ಬರಿಗೆ ಕೆಡುಕುಮಾಡುವ ಮಾನಸಿಕತೆ ಇಟ್ಟುಕೊಂಡಲ್ಲಿ ಆತನಿಗೆ ನಮ್ಮ ಪೂಜೆಯೇ ತಲುಪುವುದಿಲ್ಲ, ಮತ್ತೊಬ್ಬರಿಗೆ ನೋವಾಗದಂತೆ ಮಾತನಾಡುವುದು, ಹಿರಿಯರಲ್ಲಿ ಗೌರವ, ಸಮಾನರಲ್ಲಿ ಪ್ರೀತಿ, ಚಿಕ್ಕವರಲ್ಲಿ ದಯೆ ಸಲುಗೆ ಇಟ್ಟುಕೊಂಡು ನಡೆಯುವಂತಹ ಭಾವವನ್ನಿಟ್ಟುಕೊಂಡು ಪೂಜಿಸಿದಲ್ಲಿ ಭಗವಂತನಿಗೆ ಅಹಿಂಸಾ ಪುಷ್ಪವನ್ನು ಅರ್ಿಸಿದಂತಾಗುತ್ತದೆ.
ಎರಡನೇಯ ಭಾವ ಪುಷ್ಪವೇ ಇಂದ್ರಿಯ ನಿಗ್ರಹ, ಭೋಗಾಸಕ್ತಿ ಹೆಚ್ಚಾದಷ್ಟು ಮನುಷ್ಯನ ಶಾರೀರಿಕ ಹಾಗೂ ಬೌದ್ಧಿಕ ಶಕ್ತಿ ಕ್ಷೀಣವಾಗುತ್ತ ಹೋಗುತ್ತದೆ. ಯಾವುದೇ ಆಸೆಗಳನ್ನು ಹಿತ ಮಿತವಾಗಿ ಭೋಗಿಸಬೇಕು, ಆಹಾರವನ್ನು ಕಂಡಕಂಡಲ್ಲಿ ಸೇವಿಸಿ, ಕಂಡಕಂಡಲ್ಲಿ ಕುಳಿತು, ಕಂಡಕಂಡಹಾಗೆ ಸೇವಿಸುವುದರಿಂದ ನಮ್ಮ ದೇಹದ ಮೇಲಷ್ಟೇ ಅಲ್ಲ ನಮ್ಮ ಮನಸ್ಸು ಇಂದ್ರಿಯಗಳ ಮೇಲೂ ಸಹ ದುಷ್ಪರಿಣಾಮಗಳಾಗುತ್ತವೆ, ಸಾತ್ವಿಕ ಆಹಾರ ಸರಿಯಾದ ಸಮಯ, ಸ್ಥಳಗಳಲ್ಲಿ ಸೇವಿಸಿದಲ್ಲಿ ಆಹಾರದ ಪರಿಣಾಮ ನಮ್ಮ ಇಂದ್ರಿಯಗಳನ್ನು ನಾವು ಹಿಡಿತದಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ಇದು ಕೇವಲ ಆಹಾರಕ್ಕಷ್ಟೇ ಅಲ್ಲ ನಮ್ಮ ಆಸೆಗಳನ್ನೂ ಸಹ ಕಡಿವಾಣದಲ್ಲಿಟ್ಟುಕೊಂಡು ಕಾರ್ಯಗಳನ್ನು ಮಾಡಬೇಕು, ಇಂದ್ರಿಯ ನಿಗ್ರಹದಿಂದ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ, ಶಕ್ತಿಯಾಗಿ ಬೆಳೆದು ನಿಲ್ಲಲು ಸಾಧ್ಯ ಎಂದ ಅವರು ಇಂದ್ರಿಯ ನಿಗ್ರಹದಿಂದ ಭಗವಂತನಲ್ಲಿ ಏಕಾಗ್ರತೆ ಮೂಡುವುದರೊಂದಿಗೆ ನಾವು ಸದಾ ಜಾಗೃತರಾಗಿರುತ್ತೇವೆ ಎಂದರು.
ಮೂರನೇ ಪುಷ್ಪವೇ ದಯಾ ಪುಷ್ಪ ಇದರಲ್ಲಿ ಹಿರಿಯರಿಗೆ ಸೇವೆ, ಸಮಾನರಿಗೆ ಸಹಕಾರ, ಚಿಕ್ಕವರಿಗೆ ಉಪಕಾರ ಮಾಡುವಂತಹ ದಯಾಭಾವವನ್ನಿಟ್ಟುಕೊಂಡು ಸುತ್ತಮುತ್ತ ಇರುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುವ ದಯಾ ಭಾವದ ಪೂಜೆ ಭಗವಂತನಿಗೆ ತಲುಪುತ್ತದೆ.
ನಾಲ್ಕನೆಯ ಪುಷ್ಪವೇ ಕ್ಷಮಾ ಪುಷ್ಪ ಪೃಥ್ವಿಯ ಮೇಲೆ ನಾವು ಎಷ್ಟು ಅಪರಾಧಗಳನ್ನು ಮಾಡಿದರೂ ಸಹ ಅವಳು ಮಾನವರನ್ನು ಕ್ಷಮಿಸಿ ಹೇಗೆ ಸಲುಹುತ್ತಾಳೆಯೋ ಹಾಗೆ ನಾವೂ ಸಹ ಕ್ಷಣ ಕ್ಷಣಕ್ಕೂ ಸಿಟ್ಟು ಮಾಡಿಕೊಳ್ಳದೆ ಅಲ್ಪ ಸ್ವಲ್ಪ ತಪ್ಪುಗಳಿಗೆ ಮನಸ್ಸನ್ನು ವ್ಯಗ್ರ ಮಾಡಿಕೊಳ್ಳದೆ ಕ್ಷಮಾಗುಣವನ್ನು ಬೆಳೆಸಿಕೊಂಡು ಸ್ವಚ್ಛ ಮನಸ್ಸಿನಿಂದ ಭಗವಂತನ ಪೂಜೆ ಮಾಡಬೇಕು ಎಂದರು.
ಪಾರ್ಥಿವ ಪುಷ್ಪಗಳ ಸುಗಂಧಗಳನ್ನು ಭಗವಂತನಿಗೆ ಅರ್ಿಸುವುದರೊಂದಿಗೆ ಚೈತನ್ಯಯುಕ್ತವಾದ ಭಾವ ಪುಷ್ಪಗಳನ್ನು ಭಗವಂತನಿಗೆ ಅರ್ಿಸಿ ಆತನಿಗೆ ನಮ್ಮನ್ನು ನಾವು ಸಮರಅರ್ಪಿಸಿಕೊಳ್ಳಬೇಕು ದೇವರು ಎಷ್ಟು ಸರ್ವೋತ್ತಮನೋ ಅಷ್ಟೇ ಸರ್ವ ಶ್ರೇಷ್ಠವಾದ ಭಾವ ಪುಷ್ಪಗಳನ್ನು ನೀಡೋಣ ಎಂದರು.
ಶ್ರೀನಿವಾಸಾಚಾರ್ಯ ಬಿಳ್ಳೂರ ನಿರೂಪಿಸಿ ವಂದಿಸಿದರು. ಮಠಾಧಿಕಾರಿ ಎಂ.ಜಿ.ಜೋಶಿ, ಪಂ.ರಾಮಾಚಾರ್ಯ ಕಟಗೇರಿ, ಪಂ.ಜಯರಾಮಾಚಾರ್ಯ ಮದನಪಲ್ಲಿ, ಪಂ.ಬಿಂದುಮಾಧವ ಜೋಶಿ,. ಡಾ.ಗುರುರಾಜಾಚಾರ್ಯ ಗುಡಿ, ರಾಜು ಪಾಟೀಲ, ಸುಧೀಂದ್ರ ಬಾದರಾಯಣಿ, ಎಸ್.ವಿ.ಜೋಶಿ. ಶ್ರೀರಾಮ ಕಟ್ಟಿ, ಸುಹಾಸ ದಾತಾರ ಹಾಗೂ ವಿಪ್ರಬಾಂಧವರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಬೆಳಿಗ್ಗೆ ಸುರೇಶ ಜೋಶಿ ಅವರ ಮನೆಯಲ್ಲಿ ಮೂಲರಾಮದೇವರ ಸಂಸ್ಥಾನ ಪೂಜೆ ಜರುಗಿತು. ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮುದ್ರಾಧಾರಣೆ ಹಾಗೂ ತೀರ್ಥಪ್ರಸಾದ ನಡೆಯಿತು.