ಇಂಡಿ

ಅಂಬಾಭವಾನಿ ದೇವಿ ಮೂರ್ತಿಗೆ ಚಿನ್ನದ ಕೀರೀಟ ಅರ್ಪಣೆ

ಅಂಬಾಭವಾನಿ ದೇವಿ ಮೂರ್ತಿಗೆ ಚಿನ್ನದ ಕೀರೀಟ ಅರ್ಪಣೆ
ಇಂಡಿ: ಪಟ್ಟಣದ ಅಂಬಾಭವಾನಿ ದೇವಿ ಮೂರ್ತಿಗೆ ಚಿನ್ನದ ಕೀರೀಟ ಅರ​‍್ಿಸಲಾಯಿತು..

ಇಂಡಿ: ಪಟ್ಟಣದ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಸಕಲ ಪೂಜಾ ಕಾರ್ಯಕ್ರಮದೊಂದಿಗೆ  ಅಂಬಾಭವಾನಿ ಮೂರ್ತಿಗೆ 26 ತೊಲಿಯ ಬಂಗಾರದ ಕೀರೀಟ ಅರ್ಪಿಸಲಾಯಿತು.  

ಭಕ್ತಾದಿಗಳಿಂದ ಸಂಗ್ರಹಿಸಿದ ಹಣದಿಂದ ಇಂಡಿಯ ವಿಜಯಕುಮಾರ ಮಹೇಂದ್ರಕರ ಮತ್ತು ದಾವಣಗೆರೆಯ ಮಂಜುನಾಥ ಜಾಧವ ಇವರು ಅಂದಾಜು 14 ಲಕ್ಷ ಮೌಲ್ಯದ ಕೀರೀಟ ತಯಾರಿಸಿದ್ದಾರೆ. 

ಮಹಾರಾಷ್ಟ್ರದ ಸೂರತ್‌ದ ರಾಜೇಶ ಚಂದ್ರಕಾಂತ ಮಹೇಂದ್ರಕರ, ಇಂಡಿಯ ಭಾವಸಾರ ಸಮಾಜದ ಅಧ್ಯಕ್ಷ ಅರುಣ ಕೋಳೆಕರ, ಉಪಾಧ್ಯಕ್ಷ ನಾಗನಾಥ ಹಂಚಾಟೆ, ಬಾಪು ಮಹೇಂದ್ರಕರ, ಬಾಳು ಕಠಾರೆ, ವಿಜಯ ಕಠಾರೆ, ವಿಜಯ ಪತಂಗೆ, ಗಣಪತಿ ಮಹೇಂದ್ರಕರ, ಸುನೀಲ ಸುಲಾಖೆ, ಪಿಂಟು ಕೋಳೆಕರ, ಅರ್ಚಕ ಶಿವಾನಂದ ಪೂಜಾರಿ, ಸಂಕೇತ ಮಹೇಂದ್ರಕರ, ಬಾಲಾಜಿ ಇಪ್ಪಾ ಕಾಯಲ್, ವಿನೋದ ಮಹೇಂದ್ರಕರ, ಸುಮನ ಪತಂಗೆ, ಉಮಾ ಪಟ್ಟದಕಲ್ಲ, ವಿದ್ಯಾ ಪಾಟೀಲ ಮತ್ತಿತರಿದ್ದರು.  


ಸುದ್ದಿ ಓದಿ