ಇಂಡಿ

ಅ.23ರಂದು ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಅ.23ರಂದು ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಇಂಡಿ: ವಿಜಯಪುರದ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಇಂಡಿ ತಾಲೂಕಾ ಶಾಖೆಯ ಉದ್ಘಾಟನೆ, ಪದಗ್ರಹಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.23ರಂದು ಭಾನುವಾರ ಮಧ್ಯಾಹ್ನ 2:00 ಘಂಟೆಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯೆ ಮತ್ತು ಸಾಂಸ್ಕೃತಿಕ ವೇದಿಕೆಯ ಇಂಡಿ ತಾಲೂಕಾ ಅಧ್ಯಕ್ಷ ಡಾ. ಕಾಂತು ಇಂಡಿ ತಿಳಿಸಿದರು. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾಹಿತ್ಯೆದ ತವರು ನಾಡಾಗಿರುವ ಇಂಡಿ ನಗರದಲ್ಲಿ ಸಾಗಿತ್ಯೆ ಕ್ಷೇತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ಭಾಗದ ಹಲವರು ಚಿಂತಿಸಿ ಈ ವೇದಿಕೆ ಪ್ರಾರಂಭದ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. 

ಅಂದು ನಡೆಯುವ ಕಾರ‌್ಯಕ್ರಮದ ಪಾವನ ಸಾನಿಧ್ಯವನ್ನು ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ವಹಿಸಲಿದ್ದು, ಕಾರ‌್ಯಕ್ರಮವನ್ನು ಶಾಸಕ ಯಶವಂತ್ರಾಯಗೌಡ ಪಾಟೀಲರು ಉದ್ಘಾಟಿಸಲಿದ್ದಾರೆ. ನೇತೃತ್ವವನ್ನು ವಿಜಯಪುರ ಬಂಜಾರಾ ಕ್ರಾಂತಿದಳದ ಅಧ್ಯಕ್ಷ ಶಂಕರ ಗಂಗು ಚವ್ಹಾಣ ವಹಿಸಲಿದ್ದಾರೆ. ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ. ಕಾಂತು ಇಂಡಿ ಆಶಯ ನುಡಿಗಳನ್ನಾಡಳಿದ್ದು, ಮಂಜುನಾಥ ಜುಮಗೊಂಡ ಅವರು ಉಪನ್ಯಾಸ ನೀಡಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಅನೀಲ ಪತಂಗಿ, ಗಂಗಾಬಾಯಿ ಗಲಗಲಿ, ಎಂ.ಸಿ. ಗಿರಣಿವಡ್ಡರ್, ವಿಜಯಲಕ್ಷ್ಮೀ ದೇಸಾಯಿ, ಎಂ.ಪಿ. ಬಿರಾದಾರ, ಜಿ.ಎಸ್‌. ಬೇವನೂರ, ಅರ್ಜುನ ಲಮಾಣಿ, ಕವಿತಾ ರಾಂಪೂರ, ಪಿ.ಎಸ್‌. ಹೊಸಮನಿ ಭಾಗವಹಿಸಲಿದ್ದಾರೆ ಎಂದು ಇಂಡಿ ತಿಳಿಸಿದರು. 

ಈ ಸಂದರ್ಭದಲ್ಲಿ ಎಂ.ಪಿ. ಬಿರಾದಾರ, ರಾಘವೇಂದ್ರ ಕುಲಕರ್ಣಿ, ನಿಜಣ್ಣ ಕಾಳೆ, ಸದಾನಂದ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು. 

ಸುದ್ದಿ ಓದಿ