ಇಂಡಿ

ನೂಲಿಯ ಚಂದಯ್ಯನವರ ಜಯಂತಿ

ನೂಲಿಯ ಚಂದಯ್ಯನವರ ಜಯಂತಿ
ಇಂಡಿ: ತಾಲೂಕಾ ಆಡಳಿತ ವತಿಯಿಂದ ನೂಲಿಯ ಚಂದಯ್ಯನವರ ಜಯಂತಿ ಅಂಗವಾಗಿ ಬಿ.ಎ. ರಾವೂರ ಮಾತನಾಡಿದರು.

ಇಂಡಿ: 12ನೇ ಶತಮಾನದ ಕಾಯಕಯೋಗಿ ನೂಲಿಯ ಚಂದಯ್ಯನವರು ಶ್ರೇಷ್ಟ ಅನುಭಾವಿ ಶರಣರು. ಸಾಹಿತ್ಯಕ್ಕೆ ಅಪಾರ ಗೌರವ ಕೊಟ್ಟವರು ಲಿಂಗಪೂಜೆಯೇ ಜಂಗಮ ಸೇವೆ ಎಂದು ತಿಳಿದು ಆಚರಿಸಿದವರು. 770 ಅಮರಗಣಂಗಳಲ್ಲಿ 16 ಜನ ಷೋಡಶ ವೀರರು ಅದರಲ್ಲಿ ಇವರೂ ಒಬ್ಬರು ಎಂದು ಕಂದಾಯ ನೀರೀಕ್ಷಕ ಬಿ.ಎ. ರಾವೂರ ಹೇಳಿದರು. 

ಶುಕ್ರವಾರ ತಾಲೂಕಾ ಆಡಳಿತ ವತಿಯಿಂದ ನೂಲಿಯ ಚಂದಯ್ಯನವರ ಜಯಂತಿ ಅಂಗವಾಗಿ ಅವರು ಮಾತನಾಡಿದರು.  

ಅಂದಿನ ಅನುಭವ ಮಂಟಪದಲ್ಲಿ ನೂಲಿಯ ಚಂದಯ್ಯನವರು ಪ್ರಮುಖರಲ್ಲಿ ಒಬ್ಬರು ಇಂತಹ ಮಹಾತ್ಮರ ನೆನೆಯುವುದೇ ನಮ್ಮೆಲರ ಸೌಭಾಗ್ಯ ಎಂದರು. 

ಈ ಸಂದರ್ಭದಲ್ಲಿ ಕೆ. ರಾಮಣ್ಣ, ಸಿದ್ದರಾಮ ಮುಜಗೊಂಡ, ಸಂಕೇತ ಪಾಟೀಲ, ಪಿ.ಎಸ್‌. ಪೂಜಾರಿ, ಪ್ರಭು ಹಾಗಾರ, ಸಂತೋಷ ಹೋಟಗಾರ, ಪಿ.ಎಸ್‌. ಚವಡಿಹಾಳ ಇದ್ದರು. 

ಸುದ್ದಿ ಓದಿ