ಕಾಗವಾಡ

ಪಂಚ್ ಗ್ಯಾರಂಟಿಗಳನ್ನು ನಿಲ್ಲುಸುವ ಪ್ರಶ್ನೆಯೇ ಇಲ್ಲ: ಶಾಸಕ ಕಾಗೆ

ಪಂಚ್ ಗ್ಯಾರಂಟಿಗಳನ್ನು ನಿಲ್ಲುಸುವ ಪ್ರಶ್ನೆಯೇ ಇಲ್ಲ: ಶಾಸಕ ಕಾಗೆ

ಕಾಗವಾಡದಲ್ಲಿ ಗ್ಯಾರಂಟಿ ಅನುಷ್ಠಾನ ಕಚೇರಿಗೆ ಚಾಲನೆ 

ಕಾಗವಾಡ 09: ರಾಜ್ಯದ ಕಾಂಗ್ರೆಸ್ ಸರ್ಕಾರ ಪಂಚ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಮುಂಬರುವ 20 ವರ್ಷಗಳೂ ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರಲಿದ್ದು, ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.  

ಅವರು ಸೋಮವಾರ ದಿ. 8ರಂದು ಕಾಗವಾಡ ಪಟ್ಟಣದಲ್ಲಿ ರಾಜ್ಯ ಸರ್ಕಾರದ ಪಂಚ್ ಗ್ಯಾರಂಟಿ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕಾಗಿ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡುತ್ತಿದ್ದರು. ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆವರೆಗೆ ಮಾತ್ರ ಸೀಮಿತವಾಗಿರುತ್ತವೆ. ನಂತರ ಅವುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ವಿರೋಧ ಪಕ್ಷದವರು ಆರೋಪಿಸುತ್ತಿರುವುದು ಶುದ್ಧ ಸುಳ್ಳು. ರಾಜ್ಯದಲ್ಲಿ ಮುಂದಿನ 5 ವರ್ಷ ನಮ್ಮ ಕಾಂಗ್ರೆಸ್ ಸರ್ಕಾರವೇ ಇರಲಿದೆ. ಇದಲ್ಲದೇ ಮುಂದಿನನ 20 ವರ್ಷಗಳವರೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಇರಲಿದ್ದು, ಗ್ಯಾರಂಟಿ ಯೋಜನೆಗಳು ಸಹ ಮುಂದಿನ 20 ವರ್ಷಗಳವರೆಗೂ ಇರಲಿವೆ. ನಮ್ಮ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯು ಶೇ. 98.88 ರಷ್ಟು ಅನುಷ್ಠಾನಗೊಂಡಿದೆ ಎಂದರು.  

ಇನ್ನು ನೂತನವಾಗಿ ಕಾಗವಾಡ ತಾಲೂಕಿನಲ್ಲಿ ಆಯ್ಕೆಗೊಂಡಿರುವ 36 ಅಂಗನವಾಡಿ ಕಾರ್ಯಕರ್ತೆಯರಿಗೆ ಹಕ್ಕು ಪತ್ರಗಳನ್ನು ವಿತರಿಸಿದರು. 

ತಹಶೀಲ್ದಾರ ರಾಜೇಶ ಬುರ್ಲಿ, ತಾ.ಪಂ. ಎಇಒ ಈರಣ್ಣಾ ವಾಲಿ, ಸಿಡಿಪಿಓ ಸಂಜೀವಕುಮಾರ ಸದಲಗಿ, ಪ.ಪಂ. ಮುಖ್ಯಾಧಿಕಾರಿ ಕೆ.ಕೆ. ಗಾವಡೆ, ಮುಖಂಡರಾದ ರಮೇಶ ಚೌಗಲಾ, ಜ್ಯೋತಿಕುಮಾರ ಪಾಟೀಲ, ಕಾಕಾ ಪಾಟೀಲ, ಚಿದಾನಂದ ಅವಟಿ, ಸೌರಭ ಪಾಟೀಲ, ಸುಭಾಶ ಪಾಟೀಲ, ಉಮೇಶ ಪಾಟೀಲ, ಭೀಮು ಅಕಿವಾಟೆ, ರಾಜೇಂದ್ರ ಚೌಗುಲಾ, ಪ್ರಕಾಶ ಹೆಮಗೀರೆ, ಗ್ಯಾರಂಟಿ ಯೋಜನೆಗಳ ಸಮರ​‍್ಕ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿಜಯ ಅಕಿವಾಟೆ, ಅಮರ ಪಾಟೀಲ, ಮಹಾಂತೇಶ ಬಡಿಗೇರ, ಅಕ್ಷಯ ಪಾಟೀಲ, ಅರವಿಂದ ನರೋಟಿ, ಸತೀಶ ಯರಂಡೋಲೆ, ಮುರುಗೇಶ ಕುಂಬಾರ, ಮಹಾದೇವಿ ಮಾಕಣ್ಣವರ, ಗುರುಪಾದ ಮಗದುಮ್, ವಿದ್ಯಾನಂದ ತೇಲಿ, ರಾವಸಾಬ ಪಾಟೀಲ, ಪ್ರಕಾಶ ಗಾಣಿಗೇರ, ಅಜೀತ್ ಕಟಗೇರಿ, ಸತೀಶ ಬಿರಾದಾರ, ರೋಹಿತ ಚನ್ನಬಸಯ್ಯ, ರೋಹಿತ ಬಸನಾಯ್ಕ, ಅಣ್ಣಾಸಾಬ ಖೋತ ಸೇರಿದಂತೆ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಗಣ್ಯರು, ಗ್ರಾಮಸ್ಥರು ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ