ಕಾಗವಾಡ

ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ರಾಜು ಕಾಗೆ

ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ರಾಜು ಕಾಗೆ

ಕಾಗವಾಡ,19: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧದ ಮೂಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಶಾಸಕ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಹೇಳಿದ್ದಾರೆ. 

ಆವರಣದಲ್ಲಿ ಎಸ್‌ಡಿಎಫ್‌ಆರ್ ಯೋಜನೆಯಡಿ ಕೆರೆ ಆವರಣ ಮತ್ತು ಕೆರೆ ಅಭಿವೃದ್ಧಿಗಾಗಿ ರೂ. 1 ಕೋಟಿ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಮಾತನಾಡುತ್ತಿದ್ದರು.  

ವಿರೋಧ ಪಕ್ಷಗಳ ಸಂಚಿನ ಪರಿಣಾಮ ಕೆಲ ಖಾಸಗಿ ವ್ಯಕ್ತಿಗಳು ಮುಖ್ಯಮಂತ್ರಿ ವಿರುದ್ಧ ಖಾಸಗಿ ದೂರು ನೀಡಿದ್ದು, ಅವರ ದೂರಿಗೆ ಪ್ರತಿಯಾಗಿ ರಾಜ್ಯಪಾಲರು ಪ್ರಾಸಿಕೇಶನ್‌ಗೆ ಅನುಮತಿ ನೀಡಿರುವುದು ಕೂಡಾ ಸಂವಿಧಾನ ಬಾಹಿರವಾಗಿದೆ. ಇದೇ ಆಗಸ್ಟ 22 ರ ಗುರುವಾರದಂದು ಬೆಂಗಳೂರಿನಲ್ಲಿ ಇದೇ ವಿಷಯ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆ ಕೂಡ ಕರೆಯಲಾಗಿದ್ದು, ಅಲ್ಲಿ ಚರ್ಚಿಸಿ, ಮುಂದಿನ ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುವುದು ಎಂದರು. 

ಮಂಗಸೂಳಿ ಗ್ರಾಮದ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿಯ ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆ ಮತ್ತು ಆವರಣದ ಅಭಿವೃದ್ಧಿಗಾಗಿ 1 ಕೋಟಿ ರೂ. ಅನುದಾನದ ಕಾಮಗಾರಿಗೆ ಮಂಜೂರಾತಿ ದೊರಕಿದ್ದು, ಸುಪ್ರಸಿದ್ಧ ಮಲ್ಲಯ್ಯ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತರು ಭೇಟ್ಟಿ ಕೊಡುತ್ತಾರೆ. ಅವರ ಅನಕೂಲಕ್ಕಾಗಿ ಕೆರೆ ಆವರಣ ಪ್ರದೇಶವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಯೋಜನೆ ಸಿದ್ಧವಾಗಿದೆ ಎಂದರು. 

ಈ ಸಮಯದಲ್ಲಿ ಮಂಗಸೂಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಾಳು ಭಜಂತ್ರಿ, ಮುಖಂಡರಾದ ಅಮರ ಪಾಟೀಲ, ಸಚೀನ ಪಾಟೀಲ, ಶರದ ಪಾಟೀಲ, ರವಿ ಮಾಳಿ, ಪುಂಡಲೀಕ ಪಾಟೀಲ, ಶಂಕರ ದೊಡ್ಡನ್ನವರ, ಸಂಜಯ ತಳವಳಕರ, ರವಿ ಪಾಟೀಲ, ರಾಜು ಕಟವಾಡೆ, ಧನಾಜಿ ಪಾಟೀಲ, ಮುಕುಂದ ಪೂಜಾರಿ, ಪಿಡಿಓ ಸಂಜಯ ಸೂರ್ಯವಂಶಿ, ಸಣ್ಣ ನೀರಾವರಿ ಇಲಾಖೆಯ ಎಇಇ ಪ್ರವೀಣ ಪಾಟೀಲ, ಸಾಗರ ಪವಾರ, ಗುತ್ತಿಗೆದಾರರಾದ ಎಸ್‌.ಎಸ್‌. ಮದನ್ನವರ, ಪ್ರಶಾಂತ ಮದನ್ನವರ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ