ಧಾರವಾಡ - ಹುಬ್ಬಳ್ಳಿ

ಟಗರು ಸಿದ್ದರಾಮಯ್ಯ ಅವರನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ: ಸಚಿವ ಬಿ.ಜಡ್ ಜಮೀರ ಅಹ್ಮದ ಖಾನ

ಟಗರು ಸಿದ್ದರಾಮಯ್ಯ ಅವರನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ:  ಸಚಿವ ಬಿ.ಜಡ್ ಜಮೀರ ಅಹ್ಮದ ಖಾನ

ಧಾರವಾಡ 2: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಶಾಸಕರ ಬೆಂಬಲ ಇದ್ದು ಟಗರು ಸಿದ್ದರಾಮಯ್ಯ ಅವರನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಮನೆ ಇಲ್ಲದ ಬಡವರಿಗೆ ಸೂರು ಕಟ್ಟಿಕೊಡಲು ಹಾಗೂ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ಕೊಡಲು ಸಿದ್ದ ಎಂದು ವಸತಿ, ವಕ್ಪ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ  ಸಚಿವ ಬಿ.ಜಡ್ ಜಮೀರ ಅಹ್ಮದ ಖಾನ ಹೇಳಿದರು.  

ಅವರು ಇಂದು ನವಲಗುಂದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಅವರ ನಿವಾಸದಲ್ಲಿ ನವಲಗುಂದ ಅಂಜುಮನ ಸಂಸ್ಥೆಗೆ ಆಯ್ಕೆಯಾದ ನೂತನ ಸದಸ್ಯರುಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಈಗಾಗಲೇ ನವಲಗುಂದ ನಗರದಲ್ಲಿ ಆಶ್ರಯ ನಿವೇಶನ ನಿರ್ಮಿಸಲು 41 ಎಕರೆ ಜಮೀನು ಖರೀದಿಸಿದ್ದು ಈ ವರ್ಷ ಸರ್ಕಾರದಿಂದ 32 ಎಕರೆ ಜಮೀನು ಖರೀದಿಸಲು 5.50 ಕೋಟಿ ಬಿಡುಗಡೆ ಮಾಡಿದ್ದೇನೆ. ನವಲಗುಂದ ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಲ್ಲಿ 1 ಸಾವಿರ ಮನೆಗಳನ್ನು ನೀಡಲಾಗಿದೆ, ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನವಲಗುಂದ ನಗರಕ್ಕೆ 1 ಸಾವಿರ ಮನೆ ಹಾಗೂ ಅಣ್ಣಿಗೇರಿಗೆ 500 ಮನೆ ಮಂಜೂರು ಮಾಡಲು ಭರವಸಿ ನೀಡಿದರು.  

ನವಲಗುಂದ ಹಾಗೂ ಅಣ್ಣಿಗೇರಿಯಲ್ಲಿ ಎನ್‌.ಹೆಚ್‌. ಕೋನರಡ್ಡಿ ಅವರು ನಿರ್ಮಿಸಿದ ಆಶ್ರಯ ಬಡಾವಣೆ ಅಭಿವೃದ್ಧಿ ಪಡಿಸಲು 3 ಕೋಟಿ ಅನುದಾನ ಹಾಗೂ ವಿವಿಧ ಗ್ರಾಮಗಳಿಗೆ ಜೈನ ಮಂದಿರ, ಮಸೀದಿ, ಶಾದಿಮಹಲ್ಗಳಿಗೆ ಅನುದಾನ ಬಿಡುಗಡೆ ಮಾಡಲು ಎಲ್ಲರೂ ಮನವಿ ಸಲ್ಲಿಸಿದಾಗ ಅವರುಗಳಿಗೆ ಸ್ಪಂಧಿಸಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು.  

ಈ ಸಂದರ್ಭದಲ್ಲಿ ನವಲಗುಂದ ಅಂಜುಮನ್ ಸಂಸ್ಥೆಗೆ ನೂತನವಾಗಿ ಆಯ್ಕೆಯಾದ ಸೈಯ್ಯದ ಅಮನುಲ್ಲಾ ಎಸ್‌. ಖಾಜಿ, ಅಲ್ಲಾಭಕ್ಷ ಖಾಜಿ, ಬಾಬರ ದಫೇದಾರ, ರಿಯಾಜಅಹ್ಮದ ನಾಶಿಪುಡಿ, ಅಲ್ಲಾಸಾಬ ಕಲ್ಲಕುಟ್ರಿ, ಅಶ್ಫಕಅಲಿ ಚಾಹುಸೇನ್, ಖಾಜೇಸಾಬ ಮುಲ್ಲಾ ಹಂಚಿನಾಳ, ಅನ್ವರಹುಸೇನ ಮೂಲಿಮನಿ, ಡಾ: ಶಾದಬ ಅಹ್ಮದ ನಿಂಬಾಳ್ಕರ, ಖಾಸೀಮಸಾಬ ಅಲ್ಲಿಬಾಯಿ, ಶಬ್ಬೀರ ಧಾರವಾಡ, ಖ್ವಾಜಾಹುಸೇನ ಖಾಗದಗಾರ, ಅಬ್ದುಲಸುಬಾನಿ ಬೇಪಾರಿ, ಸಿರಾಜುದ್ದೀನ ಧಾರವಾಡ, ಮಹಮ್ಮದರಫೀಕ ಅಣ್ಣಿಗೇರಿ, ಅಖೀಲಅಹ್ಮದ ಮಕಾನದಾರ, ಮೈನುದ್ದೀನ ಧಾರವಾಡ, ಸೈಯ್ಯದಬಾಷಾ ಹುಗ್ಗಿ, ಹುಸೇನಸಾಬ ದೋಣಿಬಾಯಿ, ಅಬ್ದುಲಖಾದರ ಕುನ್ನಿಬಾಯಿ, ಚಾಂದಸಾಬ ಅಣ್ಣಿಗೇರಿ ಅವರುಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಶುಭ ಹಾರೈಸಲಾಯಿತು.  

ಈ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ, ಹು-ಧಾ ಮಹಾನಗರ ಅಧ್ಯಕ್ಷರಾದ ಅಲ್ತಾಫ ಹಳ್ಳೂರ, ಮಾಜಿ ಸಂಸದರಾದ ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಮಾಜಿ ಸದಸ್ಯರಾದ ಅಲ್ತಾಫ ಕಿತ್ತೂರ, ಧಾರವಾಡ ಅಂಜುಮನ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ನವಲಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಕಿಮ್ಸ್‌ ನಾಮನಿರ್ದೇಶಿತ ಸದಸ್ಯ ಎಂ.ಎಸ್‌. ರೋಣದ, ಉಸ್ಮಾನ ಬಬರ್ಚಿ, ಮುಖಂಡರುಗಳಾದ ಸೈಫುದ್ದೀನ ಅವರಾದಿ, ಅರುಣಕುಮಾರ ಮಜ್ಜಗಿ, ಎಂ.ಎಂ. ಮುಲ್ಲಾ, ಬಾಶುಸಾಬ ನವಲಗುಂದ, ಶಾಂತವ್ವ ಗುಜ್ಜಳ, ಹಸನಸಾಬ ಲೋಕಾಪುರ, ಶಿವಾನಂದ ಭೂಮಣ್ಣವರ, ಎಸ್‌ಎ. ಸದರಬಾಯಿ, ಮಕ್ತುಮಸಾಬ ಖುದ್ದಣ್ಣವರ, ರಬ್ಬಾನಿ ಖಾಜಿ, ರೆಹಮಾನಸಾಬ ನದಾಫ, ಹೆಚ್‌.ಎ. ಗಾಡಗೋಳಿ, ಇರ್ಫಾನ ದೊಡ್ಡಮನಿ, ಹಸನಸಾಬ ಗಡ್ಡದ, ಆಸೀಫ ಯಲಿಗಾರ, ನವಲಗುಂದ ಹಾಗೂ ಅಣ್ಣಿಗೇರಿ ಪುರಸಭೆಯ ಸದಸ್ಯರುಗಳು, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ತಿತರಿದ್ದರು. 


ಸುದ್ದಿ ಓದಿ