ಶಿಕ್ಷಣಕ್ಕಾಗಿ ಬೇರೆ ಪ್ರದೇಶಕ್ಕೆ ಹೋಗುವ ಅಗತ್ಯವಿಲ್ಲ, ರೈಟ್ ಅಕಾಡೆಮಿ ನಮ್ಮೊಂದಿಗಿದೆ: ಪಾಟೀಲ
ರಾಣೇಬೆನ್ನೂರು 14: ನಾಗಶಾಂತಿ ಉನ್ನತ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು, ಬಡವರಿಗೆ, ಮಧ್ಯಮ ವರ್ಗದವರಿಗೆ ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ, ಕೈಗೆಟಕುವ ದರದಲ್ಲಿ ಶಿಕ್ಷಣ ನೀಡುವ ಏಕೈಕ ಉದ್ದೇಶ ಹೊಂದಿದೆ ಎಂದು ಶಿಕ್ಷಣ ಸಂಸ್ಥೆಯ ಸ್ಥಾಪಕ ಬಸವರಾಜ ಎನ್. ಪಾಟೀಲ್ ಹೇಳಿದರು.
ಅವರು ಶನಿವಾರ, ಕಾಲೇಜು ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ತಮ್ಮ ಶಿಕ್ಷಣ ಸಂಸ್ಥೆ, ವಾಣಿಜ್ಯ ನಗರದಲ್ಲಿ ಪ್ರಾರಂಭಿಸಲಾಗಿದ್ದು, ಅದರ ಪರಿಪೂರ್ಣ ಬೆಳವಣಿಗೆಗಾಗಿ ಹೊಸ ಯೋಜನೆಯೊಂದನ್ನೂ ಜಾರಿಗೆ ತರಲಾಗಿದೆ. ಅದುವೇ ರೈಟ್ ಅಕಾಡೆಮಿ ಸ್ನೇಹಿತರ ಬಳಗವು ಈ ಭಾಗದ ವಿದ್ಯಾರ್ಥಿಗಳಿಗೆ, ಅನೇಕ ರೀತಿಯ ತರಬೇತಿ ಕಾರ್ಯಗಾರಗಳನ್ನು ಉಚಿತವಾಗಿ ಆಯೋಜಿಸಲಾಗಿದೆ. ಭವಿಷ್ಯದಲ್ಲಿ ಅವರು ದೂರದ ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಉಡುಪಿ ಕಡೆಗೆ ತೆರಳಿ ಲಕ್ಷಾಂತರ ಹಣ, ವ್ಯಯ ಮಾಡುವ ಅಗತ್ಯವಿಲ್ಲ. ಅಂತಹ ತರಬೇತಿಯನ್ನು ಪ್ರತಿ ಹಂತದಲ್ಲಿಯೂ ರೈಟ್ ಅಕಾಡೆಮಿ ನುರಿತ ಉಪನ್ಯಾಸಕರು, ವಿಷಯ ತಜ್ಞರು ನೀಡಿ, ಪರಿಪೂರ್ಣ ಶಿಕ್ಷಣ ನೀಡಲು ಮುಂದಾಗಿದ್ದಾರೆ ಎಂದರು. ಗಣೇಶ್ ಪಂಡಿತ್ ಜೀವಶಾಸ್ತ್ರ, ಉಮೇಶ್ ಬೆಳ್ಳೊಡಿ ಗಣಿತಶಾಸ್ತ್ರ, ಬಸವರಾಜ ಸುರಕೋಡ್ ಭೌತಶಾಸ್ತ್ರ ಮತ್ತು ರವಿಕುಮಾರ್ ಟಿ. ಆರ್, ರಾಸಾಯನಶಾಸ್ತ್ರ ಇವರುಗಳು ನುರಿತ ತಜ್ಞರಾಗಿ, ಹತ್ತಾರು ವರ್ಷಗಳ ಸೇವೆಯಲ್ಲಿ ಅನುಭವಿಗಳಾಗಿದ್ದಾರೆ ಅಂಥವರು ನಮ್ಮೊಂದಿಗೆ ಸೇವಾ ಮನೋಭಾವನೆಯಿಂದ ಕೈಜೋಡಿಸಿದ್ದಾರೆ ಎಂದರು. ಆಡಳಿತ ಮಂಡಳಿ ಯಾವುದೇ ಹಣ ಗಳಿಸುವ ಉದ್ದೇಶದಿಂದ ಸಂಸ್ಥೆ ಪ್ರಾರಂಭಿಸಿಲ್ಲ, ತಂದೆ ತಾಯಿಯವರ ಆಸೆಯಂತೆ ಶೀಕ್ಷಣ ಸೇವೆ ಕೊಡಲು ಮುಂದಾಗಿದ್ದೇವೆ. ರೈಟ್ ಅಕಾಡೆಮಿ ಮೂಲಕ ಭವಿಷ್ಯದ ಜನಗಳಲ್ಲಿ ತಮ್ಮ ಸಂಸ್ಥೆ ರಾಜ್ಯದಲ್ಲಿಯೇ ಅತ್ಯುತ್ತಮ ಅಂಕ ಗಳಿಸುವ ಶಿಕ್ಷಣ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಗಣೇಶ್ ಪಂಡಿತ್ ಮಾತನಾಡಿ, ಸ್ನೇಹಿತರ ಬಳಗ ನಮ್ಮದು, ಹತ್ತಾರು ವರ್ಷಗಳಿಂದ ದೂರದ ಊರುಗಳ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದೇವೆ, ನಮ್ಮದೇ ಆದ ರೈಟ್ ಅಕಾಡೆಮಿ ಕಟ್ಟಿಕೊಂಡು ಇದೀಗ ಮತ್ತಷ್ಟು ಸಾಧನೆ ಮಾಡಲು, ಮತ್ತು ಈ ಭಾಗದ ಜನಸಾಮಾನ್ಯರಿಗೆ, ಉಚಿತದ ಜೊತೆಗೆ, ಅತ್ಯಲ್ಪ ದರದಲ್ಲಿ ಶಿಕ್ಷಣ ನೀಡುವ ಉದ್ದೇಶ ಹೊಂದಿದ್ದೇವೆ ಸಾರ್ವಜನಿಕರು ಕೈ ಜೋಡಿಸಲು ಹಾಗೂ ಸಾಧನೆ ಮಾಡುವ ಆಕಾಂಕ್ಷಿಗಳು ಯಾವುದೇ, ತೊಂದರೆ ತಾಪತ್ರಯ ವಿಲ್ಲದೆ ಶಿಕ್ಷಣದಲ್ಲಿ ಸಾಧನೆ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ರಾಜೇಶ್ವರಿ ಪಾಟೀಲ್, ರಾಕೇಶ್ ಪಾಟೀಲ್,ರವಿಕುಮಾರ್, ರೂಪಾ, ವರ್ಷಾ, ಪ್ರಿಯಾ. ವಿದ್ಯಾ ಪಾಟೀಲ್, ಸಹನಾ, ಸುಜಾತಾ, ಸೇರಿದಂತೆ, ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು ಉಪಸ್ಥಿತರಿದ್ದರು.