ಗುರುವಿನ ಮಾರ್ಗದರ್ಶವಿಲ್ಲದ ಜೀವನವಿಲ್ಲ: ನಾಗರಾಜಾನಂದ ಸ್ವಾಮಿಜಿ
ರಾಣಿಬೆನ್ನೂರ:02: ಗುರುವಿನ ಮಾರ್ಗದರ್ಶವಿಲ್ಲದ ಜೀವನವಿಲ್ಲ, ಸುಂದರ ಬದುಕು ರೂಪಿಸಿಕೊಳ್ಳಲು ತಾಯಿ ಸ್ವರೂಪವಾದ ಗುರು ಬೇಕು, ಆತನ ಕಾರುಣ್ಯದಿಂದ ಮಾತ್ರ ಬದುಕು ಬೆಳಕಾಗಲು ಸಾಧ್ಯ ಎಂದು ಗುರು ನಾಗರಾಜಾನಂದ ಸ್ವಾಮಿಜಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಖಂಡೇರಾಯನಹಳ್ಳಿಯ ಶ್ರೀಸಿದ್ಧಾಶ್ರಮದಲ್ಲಿ ಶನಿವಾರ ರಾತ್ರಿ ಗುರು ಪೂರ್ಣಿಮೆಯ ಅಂಗವಾಗಿ ಶ್ರೀಮಠದ ಭಕ್ತರ ವತಿಯಿಂದ ನಡೆದ ಗುರುವಂದನಾ ಕಾರ‌್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಾದ ನೀಡಿದ ಅವರು, ಗುರು ಎಂದರೆ ಅಜ್ಞಾನದಿಂದ ಸುಜ್ಞಾನದಡೆಗೆ ಜನರನ್ನು ಕೊಂಡೊಯ್ಯುವುದೇ ಆಗಿದೆ ಎಂದು ನುಡಿದರು.
ತಾಯಿ ಸ್ವರೂಪಿಯಾದ ಗುರು ಕರುಣೆ ಇಲ್ಲದೆ ಯಾವ ಮಾನವನು ಸದ್ಗತಿಯನ್ನು ಹೊಂದಲು ಸಾಧ್ಯವಿಲ್ಲ. ಅಂತಪ್ಪ ಗುರುವಿನ ಮಾರ್ಗದರ್ಶನ ಪಡೆದು ಶಾಸ್ವತ ಸುಖವನ್ನು ಪಡಯಬೇಕು. ಇಂದು ಆಧುನಿಕ ಜಗತ್ತಿನಲ್ಲಿ ಅತೀಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಮನುಷ್ಯನ ಮನಸ್ಸಿಗೆ ನೆಮ್ಮದಿ ಸಿಗದಂತಾಗಿದೆ. ಸಂಸ್ಕಾರ ಗರ್ಭಧಾರಣೆಯಿಂದ ಹಿಡಿದು ಭೂಗರ್ಭಕ್ಕೆ ಹೋಗುವತನಕ ಇರಬೇಕು. ಪ್ರಾಣಿಪಕ್ಷಿಗಳಲ್ಲಿ ನಾವು ಸಂಸ್ಕಾರವನ್ನು ಕಾಣುತ್ತೇವೆ. ಆದರೆ ಅರಿವಿನ ಜನ್ಮತಾಳಿದ ಮನುಷ್ಯ ಸಂಸ್ಕಾರದಿಂದ ವಂಚಿತನಾಗಬಾರದು. ಎಂದು ಶ್ರೀಗಳು ನುಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಗುರು ನಾಗರಾಜಾನಂದ ಸ್ವಾಮೀಜಿಗಳವರಿಗೆ ಪೇಟ ತೊಡಿಸಿ ಪಾದ ಪೂಜೆ ಹಾಗೂ ವಿವಿಧ ಹೂವುಗಳ ಮಳೆಗರೆದು ಮತ್ತು ಫಲ ಪುಷ್ಪ ಹಾಗೂ ಮಹಾಮಂಗಳಾರತಿಯೊಂದಿಗೆ ಗುರು ನಮನ ಸಲ್ಲಿಸಿದರು. ಇದಕ್ಕೂ ಮುನ್ನ ಬೆಳಿಗ್ಗೆ 4 ಗಂಟೆಗೆ ಶ್ರೀಸಿದ್ಧಾರೂಢ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ವಿವಿಧ ಹೂವುಗಳಿಂದ ಅಲಂಕಾರ ಧಾರ್ಮಿಕ ವಿವಿಧ ಪೂಜಾ ವಿಧಾನಗಳನ್ನು ಭಕ್ತರು ಭಾವಪೂರ್ಣ ಭಕ್ತಿಯಿಂದ ನಡೆಸಿದರು.
ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ, ಫಕ್ಕೀರ್ಪ ಗೌಡ್ರ, ಜನಾರ್ಧನ ಕಡೂರ, ಡಾಕೇಶ ಲಮಾಣಿಣಿ, ಶಿವಣ್ಣ ಬಣಕಾರ, ಗುರುಶಾಂತ ಬಾಗಿಲದವರ, ಗೋಪಾಲ ಕೊಡ್ಲೇರ, ಗುಡ್ಡಪ್ಪ ಹೆಡಿಯಾಲ, ಮೈಲಾರೆಪ್ಪ ಸೋಮಲಾಪುರ, ಬಸವರಾಜ ಕಮಲಾಪುರ, ಬೀರೇಶ ಹರಿಹರ, ಆಕಾಶ ಗೌಡ್ರ, ಶಾಂತಮ್ಮ ಬಾಗಿಲದವರ, ಗಂಗಮಾಳವ್ವ ಹೆಡಿಯಾಲ, ಮಂಜುಳಾ ಗೌಡ್ರ, ಸುಮಾ ಚನ್ನಗೌಡ್ರ, ಶಾಂತಾ ಹೊಸಕುರಬರ, ಪ್ರಕಾಶ ಚನ್ನಗೌಡ್ರ ಸೇರಿದಂತೆ ನೂರಾರು ಮಹಿಳೆಯರು ಮತ್ತು ಮಕ್ಕಳು ಇದ್ದರು.