ಶಿಗ್ಗಾವ್

ನೂತನವಾಗಿ ವಕೀಲ ಡಾ. ಮಲ್ಲೇಶಪ್ಪ, ಉಪಾಧ್ಯಕ್ಷ ಮಾಳಗಿಗೆ ಸನ್ಮಾನ

ನೂತನವಾಗಿ ವಕೀಲ ಡಾ. ಮಲ್ಲೇಶಪ್ಪ, ಉಪಾಧ್ಯಕ್ಷ ಮಾಳಗಿಗೆ ಸನ್ಮಾನ

 ಶಿಗ್ಗಾವಿ : ಪಟ್ಟಣದ  ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಬಾಬು ಜಗಜೀವನರಾಮ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾಗಿ ಆಯ್ಕೆಯಾದ ದಲಿತ ಮುಖಂಡ ಡಿ.ಎಸ್‌.ಮಾಳಗಿ ಹಾಗೂ  ನೂತನವಾಗಿ ವಕೀಲ ವೃತ್ತಿ ಆರಂಭಿಸಿದ ಡಾ. ಮಲ್ಲೇಶಪ್ಪ ಹರಿಜನ ಇರ್ವರನ್ನು  ತಾಲೂಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 

 ಡಿ.ಎಸ್‌.ಎಸ್ ತಾಲೂಕ ಅಧ್ಯಕ್ಷ ಹನುಮಂತಪ್ಪ ಮಾದರ, ಸಮಾಜದ ಹಿರಿಯರಾದ ಕರೆಯಪ್ಪ ಕಟ್ಟಿಮನಿ, ನಿಂಗಪ್ಪ ಹರಿಜನ ಯಲ್ಲಪ್ಪ ದೊಡ್ಡಮನಿ, ನೀಲಪ್ಪ ಕೆಳಗೇರಿ, ಮಂಜುನಾಥ ತಿಮ್ಮಾಪೂರ, ಸಂಜೀವ ಕುಮಾರ ತಳಗೇರಿ, ಸಂತೋಷ ಕಟ್ಟಿಮನಿ, ಭರಮಪ್ಪ ಮೂಲಿಮನಿ, ನೀಲಪ್ಪ ಅತ್ತಿಗೇರಿ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು, ಗಣ್ಯರುಹಾಗೂ ಬಸವರಾಜ ನಾರಾಯಣಪೂರ, ವಿಶ್ವನಾಥ ಹರವಿ ಉಪಸ್ಥಿತರಿದ್ದರು. 


ಸುದ್ದಿ ಓದಿ