ಹೊಸ ಅವಿಷ್ಕಾರಗಳು ಮಾನವ ವಿಕಾಸದ ಮೈಲುಗಲ್ಲು: ರಾಮಕೃಷ್ಣ ಸದಲಗಿ
ತಾಲೂಕಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ನಾಟಕ, ವಿಚಾರಗೋಷ್ಠಿ, ವಸ್ತು ಪ್ರದರ್ಶನ
ಧಾರವಾಡ ಗ್ರಾಮೀಣ 10: ವಿಜ್ಞಾನ ಮನುಷ್ಯನ ನಿತ್ಯಜೀವನದ ಅವಿಭಾಜ್ಯ ಅಂಗವಾಗಿದೆ ನಾವು ಪಾರಿಭಾಷಿಕ ಪದಗಳನ್ನು ಸಾಮಾನ್ಯ ಪದಗಳಲ್ಲಿ ಬಳಸಿ ಎಲ್ಲರಿಗೂ ಅರ್ಥವಾಗುವಂತೆ ಮಾಡುವುದೆ ಈ ಸ್ಪರ್ಧೆಯ ಉದ್ದೇಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಅಭಿಪ್ರಾಯಪಟ್ಟರು.
ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಗ್ರಾಮೀಣ ಕಛೇರಿಯಲ್ಲಿ ಜಿಲ್ಲಾ ಪಂಚಾಯತಧಾರವಾಡ ಶಾಲಾ ಶಿಕ್ಷಣ ಇಲಾಖೆಯ ಡಯಟ್ ಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಧಾರವಾಡಇವರ ಸಂಯುಕ್ತಾಶ್ರದಲ್ಲಿ 2024-25ನೇ ಸಾಲಿನ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ, ವಿಜ್ಞಾನ ವಿಚಾರಗೋಷ್ಠಿ ಹಾಗೂ ವಿಜ್ಞಾನ ನಾಟಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು. ವಿಜ್ಞಾನಿಗಳು ಸಂಶೋಧಿಸಿರುವ ವಸ್ತುಗಳು ಜನರಿಗೆ ಅನುಕೂಲವಾಗಿವೆ. ಹೊಸ ಅವಿಷ್ಕಾರಗಳು ಮಾನವ ವಿಕಾಸದ ಮೈಲುಗಲ್ಲು. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ, ಶಾಬ್ದಿಕ ಅರ್ಥ ,ಜ್ಞಾನ ಹೆಚ್ಚಿಸಲು ಇಲಾಖೆ ವಿಜ್ಞಾನ ನಾಟಕ ಹಾಗೂ ವಸ್ತು ಸ್ರ್ಧೆಏರಿ್ಪಡಸುತ್ತಿದೆ. ವಿಜೇತರಾದ ಮಕ್ಕಳನ್ನು ಜಿಲ್ಲಾ ಮಟ್ಟಕ್ಕೆಆಯ್ಕೆ ಮಾಡಲಾಗುವುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್. ಕೆ. ಎಫ್ ಮಾತನಾಡುತ್ತಾ ಭಾರತ ವಿಜ್ಞಾನದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ವಿಜ್ಞಾನ ಎಂಬ ಪದವೇ ವಿಶಿಷ್ಟ ಹಾಗೂ ಅದ್ಬುತಜಗತ್ತಿನ ಆಗು-ಹೋಗುಗಳ ನಿರ್ಣಾಯಕವದು. ಈಕಾರಣದಿಂದ ಮಕ್ಕಳಲ್ಲಿ ಕ್ರಿಯಾತ್ಮಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧೆ ಏರಿ್ಡಸಲಾಗಿತ್ತು ಎಂದರು.
ನೋಡಲ್ ಅಧಿಕಾರಿಗಳು ಹಾಗೂ ಪ್ರೌಢಶಾಲಾ ಬಿ.ಆರ್.ಪಿ ಎಸ್ ವಿ ಸಂತಿ ಮಾತನಾಡುತ್ತಾರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರಚಟುವಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ . ಜಾಗತೀಕರಣದ ಸಂಭ್ರಮದಲ್ಲಿತಂತ್ರಜ್ಞಾನದ ವಿಜಯ ಪತಾಕೆ ಹಿಡಿದು ನಿಂತವರು ಭಾರತೀಯರು, ತಾಂತ್ರಿಕ ಶಿಕ್ಷಣದಲ್ಲಿಂದು ಜಗತ್ತು ಬೆರಗಾಗುವಂತೆ ಮುನ್ನಡೆದವರು ನಾವು ಎಂದರು.
ಸಾರ್ವಜನಿಕರಿಗೆ ಉಪಯೋಗವಾಗುವ ವಿಸ್ಮಯ ವಸ್ತುವುಳ್ಳ ವಸ್ತು ್ರದರ್ಶನತೀರ್ುಗಾರರನ್ನು ಆಕರ್ಷಿಸಿದವು. ಅದರಲ್ಲೂಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಿವಿಧ ವಿಭಾಗದಲ್ಲಿ ಪಡೆದಿರುವುದು ಉತ್ತಮ ಬೆಳವಣಿಗೆ ಎಂದು ತೀರ್ುಗಾರರು ಹೇಳಿದರು.
ಮುಖ್ಯೋಪಾಧ್ಯಾಯರು, ತಾಲೂಕಿನ ವಿವಿಧ ಶಾಲೆಗಳ ವಿಜ್ಞಾನ ಹಾಗೂ ಗಣಿತ ಶಿಕ್ಷಕರು, ಬಿಆರ್ಪಿ ಮಾಲತೇಶ ನಿಂಬಕ್ಕನವರ, ಅರುಣ ನವಲೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಎಸ್.ವ್ಹಿ ಸಂತಿ ಸ್ವಾಗತಿಸಿದರು. ರಾಘವೇಂದ್ರ ಬಡಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು,ಕೊನೆಯಲ್ಲಿ ನರಸಿಂಹ ಮೂರ್ತಿ ರಾಜೂರ ವಂದಿಸಿದರು.
ವಿಜ್ಞಾನ ವಿಚಾರಗೋಷ್ಠಿಯಲ್ಲಿ ಪ್ರಥಮ ಸ್ಥಾನ ಶೇಯಸ್ ಆರ್, ಆದರ್ಶ ವಿದ್ಯಾಲಯ ಧಾರವಾಡ, ದ್ವಿತೀಯ ಸ್ಥಾನ ತಮ್ಮಣ್ಣ ಬಡಿಗೇರ, ನೇಹರು ಪ್ರೌಢ ಶಾಲೆ, ಹೆಬ್ಬಳ್ಳಿ ಹಾಗೂ ತೃತೀಯ ಸ್ಥಾನವನ್ನು .ಯಶೋಧಾ ಗುರಕ್ಕನವರ ಸರ್ಕಾರಿ ಪ್ರೌಢಶಾಲೆ ಹೊಲ್ತಿಕೊಟಿ, ಪಡೆದುಕೊಂಡರು. ಈ ಸ್ಪರ್ಧೆಗೆ ನಿರ್ಣಾಯಕರಾಗಿ ಸವಿತಾ ಶೇಗಾವಿ,ಪ್ರಜೆಂಟೆಷನ್ ಪ್ರೌಢ ಶಾಲೆ,ಧಾರವಾಡ ಹಾಗೂ ವೀಣಾ ಇಟಗಿ ಸರಕಾರಿ ಪ್ರೌಢಶಾಲೆ, ಮದಾರಮಡ್ಡಿ ಧಾರವಾಡ ರವರು ಕಾರ್ಯನಿರ್ವಹಿಸಿದರು.
ವಿಜ್ಞಾನ ನಾಟಕ ಸ್ಪರ್ಧೆಯಲಿ ಸರ್ಕಾರಿ ಪ್ರೌಢಶಾಲೆ, ಯಾದವಾಡ, ದ್ವಿತೀಯ ಸ್ಥಾನ ಶಾಂತೆಶ್ವರ ಪ್ರೌಢ ಶಾಲೆ,ಅಮ್ಮಿನಭಾವಿ ಹಾಗೂ ತೃತೀಯ ಸ್ಥಾನವನ್ನು ಜಯಕೀರ್ತಿ ಪ್ರೌಢಶಾಲೆ, ಗರಗ ಪಡೆದುಕೊಂಡರು. ಈ ಸ್ಪರ್ಧೆಗೆ ನಿರ್ಣಾಯಕರಾಗಿ ಪ್ರಮೋದ ವ್ಹಿ ಸರಕಾರಿ ಪ್ರೌಢ ಶಾಲೆ,ಮನಗುಂಡಿ, ಹಾಗೂ ಶ್ರೀ ಎಂ ಬಿ ಹುಬ್ಬಳ್ಳಿ, ಸರಕಾರಿ ಪ್ರೌಢ ಶಾಲೆ,ಅಳ್ನಾವರ ರವರು ಕಾರ್ಯನಿರ್ವಹಿಸಿದರು.
ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಸುಮಾರು 35ಕ್ಕೂ ಹೆಚ್ಚು ಮಾದರಿ ಗಳನ್ನು ವಿವಿಧ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು. ವೈಯಕ್ತಿಕ ಸ್ಪರ್ಧೆಯಲ್ಲಿ : ತೃಪ್ತಿ ಹಳ್ಳೂರು, ಶೃತಿ ಕೊಲಕಾರ, ಸಂಜನಾ ಕರೂರ, ಆದರ್ಶ ವಿದ್ಯಾಲಯ ಧಾರವಾಡ, ಗುಂಪು ವಿಭಾಗ : ಅಭಿಷೇಕ ಚೌವ್ಹಾಣ ಮತ್ತು ವೈಷ್ಣವಿ, ಅಟಲ್ ಬಿಹಾರಿ ವಸತಿ ಪ್ರೌ.ಶಾಲೆ ಬಸವರಾಜ ಹುಚ್ಚಣ್ಣವರ ಮತ್ತು ವಿರುಪಾಕ್ಷ ಹುಚ್ಚಣ್ಣವರ ಸ.ಪ್ರೌ.ಶಾಲೆ ಚಿಕ್ಕಮಲ್ಲಿಗವಾಡ ದೇವಕ್ಕ ಬೆಂಗೇರಿ ಮತ್ತು ಕಾವ್ಯಾ ಬಡಿಗೇರ, ಸ.ಪ್ರೌ.ಶಾಲೆ, ಶಿವಳ್ಳಿ ಈ ಸ್ಪರ್ಧೆಗೆ ನಿರ್ಣಾಯಕರಾಗಿ ಕೆ.ಎಫ್ ಜಾವೂರ, ಮುತವಾಡ, ಕೊಳಿವಾಡ ಮತ್ತು ಪ್ರಕಾಶ ಕಾರ್ಯನಿರ್ವಹಿಸಿದರು.