ನೂತನ ಎಸ್ಡಿಎಮ್ಸಿ ಪದಾಧಿಕಾರಿಗಳಿಗೆ ಸನ್ಮಾನ
ಲೋಕದರ್ಶನ ವರದಿ
ಗೋಕಾಕ 26: ನೂತನ ಎಸ್ಡಿಎಮ್ಸಿ ಅಧ್ಯಕ್ಷ-ಉಪಾಧ್ಯಕ್ಷ ಹಾಗು ಸದಸ್ಯರ ಸತ್ಕಾರ ಸಮಾರಂಭ ಹಾಗೂ 8ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಶುಕ್ರವಾರದಂದು ಜರುಗಿತು.
ಶಾಸಕ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ನಾಲ್ಕು ಸರಕಾರಿ ಪ್ರಾಥಮಿಕ ಶಾಲೆಗಳ ನೂತನ ಎಸ್ಡಿಎಮ್ಸಿ ಅಧ್ಯಕ್ಷ-ಉಪಾಧ್ಯಕ್ಷ ಹಾಗೂ ಸದಸ್ಯರಾಗಿ ಆಯ್ಕೆಯಾದರು.
ಸರಕಾರಿ ಹಿರಿಯ ಪ್ರಾಥಮಿಕ ಉಪ್ಪಾರಟ್ಟಿಯ ನೂತನ ಎಸ್ಡಿಎಮ್ಸಿ ಅಧ್ಯಕ್ಷ ಸಿದ್ರಾಮ ಕಪರಟ್ಟಿ, ಉಪಾಧ್ಯಕ್ಷ ರಾಮಪ್ಪ ಮುರ್ಕಿಭಾಂವಿ ಮತ್ತು ಸದಸ್ಯರು, ಸರಕಾರಿ ಪ್ರಾಥಮಿಕ ಶಾಲೆ ಬಸವನಗರ ತೋಟ ಶಾಲೆಯ ನೂತನ ಎಸ್ಡಿಎಮ್ಸಿ ಅಧ್ಯಕ್ಷ ಗಿರೇಪ್ಪ ಬಂಢಿ, ಉಪಾಧ್ಯಕ್ಷ ದುರ್ಗಪ್ಪ ನಂದಿ ಮತ್ತು ಸದಸ್ಯರು, ಸರಕಾರಿ ಪ್ರಾಥಮಿಕ ಶಾಲೆ ಆಡಿನವರ ತೋಟದ ನೂತನ ಎಸ್ಡಿಎಮ್ಸಿ ಅಧ್ಯಕ್ಷ ಪರಸಪ್ಪ ತಿಗಡಿ, ಉಪಾಧ್ಯಕ್ಷ ಭೀಮಪ್ಪ ಆಡಿನ ಮತ್ತು ಸದಸ್ಯರು, ಸರಕಾರಿ ಪ್ರಾಥಮಿಕ ಶಾಲೆ ಗೂದಿಗೊಪ್ಪ ತೋಟದ ಶಾಲೆಯ ನೂತನ ಎಸ್ಡಿಎಮ್ಸಿ ಅಧ್ಯಕ್ಷ ಪಾಂಡುರಂಗ ಕೊಳವಿ, ಉಪಾಧ್ಯಕ್ಷ ಹನಮಂತ ಬೂದಿಗೊಪ್ಪ ಮತ್ತು ಸದಸ್ಯರನ್ನು ಉಪ್ಪಾರಹಟ್ಟಿಯ ಗ್ರಾಪಂ ಸದಸ್ಯರು ಸತ್ಕರಿಸಿದರು.
ಗ್ರಾಮ ಪಂಚಾಯತ ಸದಸ್ಯರಾದ ಹನಮಂತ ದುರ್ಗನ್ನವರ, ಮಹಾದೇವ ಚೂನನ್ನಚರ, ಸಿದ್ದಪ್ಪ ಆಡಿನ, ರಾಮಸಿದ್ಧ ಮಜ್ಜಗಿ, ರಂಗಪ್ಪ ನಂದಿ, ಕರೇಪ್ಪ ಕೊಳವಿ, ಸಿದ್ದಪ್ಪ ಬೂದಿಗೊಪ್ಪ, ಯಮನಪ್ಪ ಬನಾಜ, ತಿಪ್ಪಣ್ಣ ಕಡಕೋಳ, ದಶರಥ ಕಿಚಡಿ, ಲಕ್ಕಪ್ಪ ಮೆಳವಂಕಿ, ಬಾಳಯ್ಯ ಅಗ್ಗನ್ನವರ, ಹನಮಂತ ಕಿಚಡಿ, ಮಹಾದೇವ ಭಂಡಿ, ರಮೇಶ ತಿಗಡಿ, ಸುಭಾಶ ಬಂಢಿ, ಮುಖ್ಯೋಪಾಧ್ಯಾಯ ಆರ್ ಎಮ್ ಅಗಳನ್ನವರ ಹಾಗೂ ಶಿಕ್ಷಕರು ಇದ್ದರು.