ನ್ಯೂ ಪಬ್ಲಿಕ್ ಸ್ಕೂಲ್: ಸಂಸ್ಕೃತಿ ಪ್ರತಿಬಿಂಬಿಸಿದ ಕೃಷ್ಣ ಜನ್ಮಾಷ್ಟಮಿ
ರಾಣೇಬೆನ್ನೂರು :ಸೆ 7- ಭಾರತೀಯ ಇತಿಹಾಸ ಪರಂಪರೆಯಲ್ಲಿ ನಮ್ಮ ಸಂಸ್ಕೃತಿ ಆಚಾರ, ವಿಚಾರ, ಮತ್ತು ಧರ್ಮದ ಆಚರಣೆಗಳು ಸನಾತನ ಧರ್ಮಗಳ ಪೂರಕವಾಗಿ ಸದಾಕಾಲ ಜನ ಜಾಗೃತಿಗೊಳಿಸುವಂತಿದೆ ಎಂದು ಹರಿಹರ ಗಿರಿಯಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕಿ ಎಚ್ ವಿನೋದಮ್ಮ ಹೇಳಿದರು.
ಅವರು ಬುಧವಾರ ಇಲ್ಲಿನ ಮಾರುತಿ ನಗರದ ನ್ಯೂ ಪಬ್ಲಿಕ್ ಶಾಲಾ ಸಭಾಭದಲ್ಲಿ ಆಯೋಜಿಸಲಾಗಿದ್ದ, ಶ್ರೀ ಕೃಷ್ಣ ಜನ್ಮಾಷ್ಟಮಿ ಮಕ್ಕಳ ವೇಷ ಭೂಷಣ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಬಾಲ ಮಕ್ಕಳಲ್ಲಿ ನಮ್ಮ ಸನಾತನ ಸಂಸ್ಕೃತಿಯ, ಇತಿಹಾಸ ಪುರುಷರು ಹಾಗೂ ಸಾಧನೆ ಮಾಡಿದ ರಾಜಕೀಯರ ಸಂಸ್ಕಾರವನ್ನು ಇಂದಿನ ಮಕ್ಕಳಿಗೆ ಪರಿಚಯಿಸಬೇಕಾದರೆ ಅಗತ್ಯವಿದೆ ಎಂದರು. ಭಾರತದ ಸಂಸ್ಕೃತಿ ವಿಶ್ವದ ಎಲ್ಲಾ ರಾಷ್ಟ್ರಗಳಿಗಿಂತಲೂ ವಿಶೇಷತೆಯಿಂದ ಕೂಡಿದೆ ನಮ್ಮ ಪರಂಪರೆಯಲ್ಲಿ ಕೃಷ್ಣ ಮತ್ತು ರಾಧೆ ಅಗ್ರಗಣ್ಯರಾಗಿದ್ದಾರೆ ಅವರ ಲೀಲೆಗಳು ಧರ್ಮದ ತಳಹದಿಯಲ್ಲಿ ನಿರ್ಮಾಣಗೊಂಡಿವೆ ಎಂದು ವಿವರಿಸಿದ ವಿನೋದಮ್ಮ ಅವರು ಪಾಲಕರು ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ರೂಪಿಸುವ ಹೊಣೆ ಹೊತ್ತಾಗ ಮಾತ್ರ, ಸಂಸ್ಕೃತಿಯೊಂದಿಗೆ ಬೆಳೆಯಲು ಸಾಧ್ಯವಾಗುವುದು ಎಂದರು.
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ನ್ಯಾಯವಾದಿ, ಏಕಾಂತ ಮುದಿಗೌಡ್ರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಾಲೆಯ ನೂರಾರು ಮಕ್ಕಳು ಭಾಗವಹಿಸಿದ್ದರು ವಿಜೇತರಿಗೆ ಪ್ರೋತ್ಸಾಹದಾಯಕವಾಗಿ ಬಹುಮಾನಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಆಂಗ್ಲ ಭಾಷಾ ತಜ್ಞ ವೀಣಾ ಜೋಷಿ, ಆಡಳಿತಾಧಿಕಾರಿ ಸೌಮ್ಯಶ್ರೀ ಕೆ.ಜೆ. ದಿನೇಶ್ ಹೆಚ್.ಆರ್, ಮುಖ್ಯೋಪಾಧ್ಯಾಯ ವಂದನಾ ಬಾನಾವಳಿಕರ, ಶಿಕ್ಷಕರಾದ, ಸವಿತಾ ಮಡಿವಾಳರ, ಮಂಜುಳಾ ಬಣಕಾರ್, ನಾಗರತ್ನ ಹುಲ್ಲತ್ತಿ, ಗಾಯಿತ್ರಿ ಭರತ್ ಎಂ, ಚೈತ್ರ ಕಲ್ಮಠ, ರೂಪಾ ಶಿರಗೇರಿ, ಪೂಜಾ ಆಟವಾಳಗಿ,ಪ್ರವೀಣ್ ಮಡಿವಾಳರ, ಅಭಿಷೇಕ್ ಕುಪ್ಪೇಲೂರ್, ಸಬೀನಾ ಬಡಿಗೇರ್, ಸೀಮಾ ಮಕರಿ, ಮೀನಾಕ್ಷಿ ಬಡಿಗೇರ್ ಸೇರಿದಂತೆ ಮತ್ತಿತರ ಗಣ್ಯರು ಆಡಳಿತ ಮಂಡಳಿ ಸದಸ್ಯರು ಮಕ್ಕಳ ಪಾಲಕರು ಉಪಸ್ಥಿತರಿದ್ದರು.