ಇಂಡಿ

ನೂತನ ಅಧ್ಯಕ್ಷ- ಉಪಾಧ್ಯಕ್ಷ ಪದಗ್ರಹಣ ಸಮಾರಂಭ

ನೂತನ ಅಧ್ಯಕ್ಷ- ಉಪಾಧ್ಯಕ್ಷ ಪದಗ್ರಹಣ ಸಮಾರಂಭ


ಇಂಡಿ: ಸ್ಥಳೀಯ ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಬನ್ನೆಮ್ಮ ಹದರಿ ಹಾಗೂ ಉಪಾಧ್ಯಕ್ಷ  ಇಸ್ಮಾಯಿಲ್ ಅರಬ ಅವರ  ಪದಗ್ರಹಣ ಸಮಾರಂಭ ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆಯಿತು. 

ಅಧ್ಯಕ್ಷೆ ಬನ್ನೆಮ್ಮ ಹದರಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಪಟ್ಟಣದ ಸಮಸ್ಯೆಗಳ ನಿವಾರಣೆಗೆ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಭೇದ ಭಾವವಿಲ್ಲದೆ ಕೆಲಸ ಮಾಡೋಣ. ಎಲ್ಲರೂ ಸೇರಿ ಆಡಳಿತಕ್ಕೆ ಸಹಕಾರ ನೀಡುವಂತೆ ಕೋರಿದರು. 

ಪದಗ್ರಹಣದಲ್ಲಿ ಸಮಾರಂಭದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿದ,  ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ, ಬಿಜೆಪಿ ಮುಖಂಡ ಶಿವಯೋಗೆಪ್ಪ ನೇದಲಗಿ, ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡಬೇಡಿ. ಎಲ್ಲ ಸದಸ್ಯರು ಅಭಿವೃದ್ಧಿಯತ್ತ ಗಮನಹರಿಸಬೇಕು. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಬೇಕಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಟ್ಟಣದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವದಕ್ಕೆ ಮೊದಲು ಆದ್ಯತೆ ನೀಡಬೇಕು. ಪಟ್ಟಣದಲ್ಲಿ ಮನೆರಹಿತ ಕುಟುಂಬಗಳಿದ್ದು, ಅಂತಹ ಕುಟುಂಬಗಳಿಗೆ ನೆರವಾಗಬೇಕು ಎಂದರು. 

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು. 


ಈ ಸಂದರ್ಭದಲ್ಲಿ ಅನೀಲಗೌಡ ಬಿರಾದಾರ, ದೇವೇಂದ್ರ ಕಂಬಾರ, ಬುದ್ದುಗೌಡ ಪಾಟೀಲ,  ವಿಜಯಕುಮಾರ ಮೂರಮನ್, ಪಿಂಟು ರಾಠೋಡ, ಅಸ್ಲಂ ಕಡಣಿ, ಸೈಪನ್ ಪವಾರ, ಅಯೂಬ್ ನಾಟೀಕಾರ, ಯಲ್ಲಪ್ಪ ಹದರಿ, ಪುರಸಭೆ ಮುಖ್ಯಾಧಿಕಾರಿ ಕೆ. ಎಸ್‌.  ಲಕ್ಷ್ಮೀಶ, ಇಇ ಅಶೋಕ ಚಂದನ, ಅಸ್ಲಂ ಖಾದಿಂ,  ಹುಚ್ಚಪ್ಪ ಶಿವಶರಣ,  ಚಂದು ಕಾಲೇಬಾಗ ಸೇರಿದಂತೆ ಅನೇಕರು ಇದ್ದರು.   


ಸುದ್ದಿ ಓದಿ