ಕಾಗವಾಡ

ನೂತನ ಮಂಟಪ ಲೆಬರ್ ಅಸೋಶಿಯೇಶನ್; ಮಂಟಪ ಕಾರ್ಮಿಕರು ಒಗ್ಗಟ್ಟಾಗಬೇಕು: ಸಂಜಯ ತಳವಳಕರ

ನೂತನ ಮಂಟಪ ಲೆಬರ್ ಅಸೋಶಿಯೇಶನ್; ಮಂಟಪ ಕಾರ್ಮಿಕರು ಒಗ್ಗಟ್ಟಾಗಬೇಕು: ಸಂಜಯ ತಳವಳಕರ

ಕಾಗವಾಡ 26 : ಎಂತಹ ಕೆಟ್ಟ ವಾತಾವರಣವಿರುವ ಸ್ಥಳವನ್ನೂ ಸಹ ಸ್ವರ್ಗದಂತೆ ಕಂಗೊಳಿಸುವಂತೆ ಮಾಡಿ, ಸುಂದರವಾಗಿ ಪರಿವರ್ತಿಸುವ ಕಲೆ ಮಂಟಪ ಕಾರ್ಮಿಕರಲ್ಲಿದೆ. ಆದರೇ ಅವರಲ್ಲಿಯ ಒಡಕಿನಿಂದಾಗಿ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲಾ. ಅದಕ್ಕಾಗಿ ಎಲ್ಲ ಮಂಟಪ ಕಾರ್ಮಿಕರು ಒಕ್ಕಟ್ಟಾಗಿರಬೇಕೆಂದು ದಲಿತ ಮುಖಂಡ ಸಂಜಯ ತಳವಳಕರ ಹೇಳಿದ್ದಾರೆ. 

ಅವರು, ಸೋಮವಾರ ದಿ. 26 ರಂದು ಕಾಗವಾಡ ಪಟ್ಟಣದ ಶ್ರೀಫಲ ಹೋಟೇಲ್‌ನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಮಂಟಪ ಕಾರ್ಮಿಕರ ನೂತನ ಮಂಟಪ ಲೆಬರ್ ಅಸೋಶಿಯೇಶನ್‌ಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು. ದೊಡ್ಡ-ದೊಡ್ಡ ಮಂಟಪ ಡೆಕಾರೇಟರ​‍್ಸ‌ ಮಾಲೀಕರು, ಮಂಟಪ ಕಾರ್ಮಿಕರ ದುಡಿಮೆಯಿಂದಾಗಿ ಶ್ರೀಮಂತರಾಗಿದ್ದಾರೆ. ಆದರೇ ಮಂಟಪ ಕಾರ್ಮಿಕರಲ್ಲಿಯ ಒಕ್ಕಟ್ಟಿನ ಕೊರೆತೆಯಿಂದಾಗಿ ಕಾರ್ಮಿಕರು ಮಾತ್ರ ಕಡಿಮೆ ಆದಾಯದಲ್ಲಿಯೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದ್ದರಿಂದ ಎಲ್ಲ ಮಂಟಪ ಕಾರ್ಮಿಕರು ಒಕ್ಕಟ್ಟಿನಿಂದ ಇರಬೇಕೆಂದು ಕರೆ ನೀಡಿದರು. ಈ ಸಮಯದಲ್ಲಿ ಮಂಟಪ ಲೆಬರ್ ಅಸೋಶಿಯೇಶನ್‌ನ ಪದಾಧಿಕಾರಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. 

ಈ ವೇಳೆ ರವಿ ಪೂಜಾರಿ, ರಾಜು ಪವಾರ, ಬಜರಂಗ ಕಾಂಬಳೆ, ವಿಜಯ ಕಟ್ಟಿ, ವಿನಾಯಕ ಜೋಗದಾಂಡೆ, ರಮಜಾನ ಶೇಖ, ಮಲ್ಹಾರಿ ವಾಘೆ, ಅನೀಲ ಲೋಖಂಡೆ, ನಿಯಾಜ ಮುಲ್ಲಾ, ಅನೀಶ ಲೋಖಂಡೆ, ತಾನಾಜಿ ಗಾಯಕವಾಡ, ರವೀಂದ್ರ ಕಾಂಬಳೆ, ಮಲ್ಲೇಶ ವರಾಳೆ, ಸಾಂವತ ತೇರದಾಳೆ, ಗೋವಿಂದ ಭಂಡಾರೆ, ಸಂತೋಶ ಕಾಂಬಳೆ, ವಿಷ್ಣು ಆದೂಪೆ, ರೋಹಣ ಕಾಂಬಳೆ, ಪ್ರಲ್ಹಾದ ಭಂಡಾರೆ, ಸಂತೋಶ ಕಾಂಬಳೆ, ರಾಜು ಕಾಂಬಳೆ, ಅಮನ ಕುಡಚೆ, ಅಂದು ಭಂಡಾರೆ ಸೇರಿದಂತೆ ಅನೇಕ ಮಂಟಪ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ