ರಾಣೆಬೆನ್ನೂರ

ಹೊಸ ಹೊನ್ನತ್ತಿ ಬೀರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಲಕ್ಷ ರೂ. ದೇಣಿಗೆ

ಹೊಸ ಹೊನ್ನತ್ತಿ ಬೀರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಲಕ್ಷ ರೂ. ದೇಣಿಗೆ

ರಾಣೇಬೆನ್ನೂರು 05:  ತಾಲೂಕಿನ ಹೊಸ ಹೊನ್ನತ್ತಿ ದೇವಸ್ಥಾನದ ಶ್ರೀ ಬೀರೇಶ್ವರ ದೇವಸ್ಥಾನದ, ಜೀರ್ಣೋದ್ಧಾರ ಕಾರ್ಯಕ್ಕಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ,, ಕ್ಷೇತ್ರದ ಧರ್ಮಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ಲಕ್ಷ ರೂಗಳ ದೇಣಿಗೆ  ಹುಂಡಿಯನ್ನು  ಕಳುಹಿಸಿದ್ದಾರೆ. ಲಕ್ಷ ರೂ ಗಳ ಚೆಕ್ಕನ್ನು, ಹೊಸ ಹೊನ್ನತ್ತಿ ಗ್ರಾಮದ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಿಗೆ, ಹಸ್ತಾಂತರಿಸಿ ಮಾತನಾಡಿದ, ಬ್ಯಾಡಗಿ ತಾಲೂಕ ಎಸ್ ಕೆ ಡಿ ಆರ್ ಡಿ ಪಿ ಯೋಜನಾಧಿಕಾರಿ  ರಘುಪತಿ ಅವರು, ದೇವಾಲಗಳು, ಮನುಷ್ಯನ ಶಾಂತಿ ನೆಮ್ಮದಿಗೆ ಕಾರಣವಾಗಬೇಕು. ಆಯಾ ಪ್ರದೇಶಗಳಲ್ಲಿ ಪ್ರತಿನಿತ್ಯವೂ ಧಾರ್ಮಿಕ ಜಾಗೃತಿ ಮಾಡುವ ಕೇಂದ್ರ ಸ್ಥಳಗಳು ಅವುಗಳ ಸುಂದರ ಮತ್ತು ಸ್ವಚ್ಛತೆಗಾಗಿ ಪ್ರತಿಯೊಬ್ಬ ನಾಗರಿಕರು, ಸಹಾಯ ಸಹಕಾರ ನೀಡುವುದರ ಮೂಲಕ ಜಾಗೃತಿ ವಹಿಸಬೇಕಾದ ಇಂದಿನ ಅಗತ್ಯವಿದೆ ಎಂದರು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಗಣ್ಯರಾದ ಶರಣಪ್ಪ ಮಾಳಪ್ಪನವರ್, ಹನುಮಂತಪ್ಪ ಎತ್ತಿನಹಳ್ಳಿ, ಮೇಲ್ವಿಚಾರಕ ಚಂದ್ರ​‍್ಪ ಹೋತನಹಳ್ಳಿ, ಕೆಂಚವ್ವ ಕರಿಗಾರ, ಲಲಿತಾ ಚಿಕ್ಕನಗೌಡ್ರ್‌, ಚೆನ್ನವ್ವ ಮಾಳಪ್ಪನವರ್ ಸೇರಿದಂತೆ ಯೋಜನೆಯ ಪದಾಧಿಕಾರಿಗಳು, ಒಕ್ಕೂಟದ ಸದಸ್ಯರು, ಗ್ರಾಮದ ಮುಖಂಡರು ದೇವಸ್ಥಾನ ಸಮಿತಿಯ ಸದಸ್ಯರು  ಉಪಸ್ಥಿತರಿದ್ದರು. 


ಸುದ್ದಿ ಓದಿ