ರಾಷ್ಟ್ರೀಯ

ನಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ; ರೈತ ಮುಖಂಡರ ಬಿಗಿಪಟ್ಟು

ನಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ; ರೈತ ಮುಖಂಡರ ಬಿಗಿಪಟ್ಟು

ನವದೆಹಲಿ, ಡಿಸೆಂಬರ್ 30: ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಸರ್ಕಾರದೊಂದಿಗೆ ಆರನೇ ಸುತ್ತಿಗೆ ಮಾತುಕತೆಯಲ್ಲಿ ತೊಡಗಿದ್ದಾರೆ. ಆದರೆ, ರೈತರು, ಮೂರು ಕಾಯ್ದೆಯನ್ನು ರದ್ದುಗೊಳಿಸುವ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ  ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್‌ ತಿಕೈತ್‌, ರೈತರು ಕಾಯ್ದೆ ರದ್ದುಗೊಳಿಸುವ ಹಾಗೂ ಎಂಎಸ್‌ಪಿಗೆ ಕಾನೂನಾತ್ಮಕ ಸ್ಥಾನಮಾನ ನೀಡುವ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಈ ಹೋರಾಟವನ್ನು ಅಂತ್ಯಗೊಳಿಸುವುದು ಈಗ ಸರ್ಕಾರದ ನಿರ್ಧಾರದ ಮೇಲೆ ನಿಂತಿದೆ ಎಂದರು.

ಸರ್ಕಾರ 40 ರೈತ ಸಂಘಟನೆಗಳನ್ನು ಆರನೇ ಸುತ್ತಿನ ಮಾತುಕತೆಗೆ ಆಹ್ವಾನಿಸಿದೆ.

ಸುದ್ದಿ ಓದಿ