ರಾಣೆಬೆನ್ನೂರ

ಆಟೋ ಚಾಲಕನ ನಿರ್ಲಕ್ಷತನ : ನಿಯಂತ್ರಣ ತಪ್ಪಿ ಪಲ್ಟಿ,ಚಾಲಕ ಸಾವು

ಆಟೋ ಚಾಲಕನ ನಿರ್ಲಕ್ಷತನ : ನಿಯಂತ್ರಣ ತಪ್ಪಿ ಪಲ್ಟಿ,ಚಾಲಕ ಸಾವು

ರಾಣೆಬೆನ್ನೂರು06: ಅತಿಜೋರಾಗಿ ಮತ್ತು ನಿರ್ಲಕ್ಷತನದಿಂದ ಆಟೋವನ್ನು ಓಡಿಸಿಕೊಂಡು ಹೊಗಿ ನಿಯಂತ್ರಿಸಲಾಗದೇ ತಾಲ್ಲೂಕಿನ ಇಟಗಿ ಗ್ರಾಮದ ಬಳಿ ಡಿ.2 ರಂದು ಆಟೋ ಪಲ್ಟಿಯಾಗಿದ್ದಕ್ಕೆ ಹರಿಹರದ ಬೆಂಕಿನಗರದ ಆಂಜನೇಯ ದೇವಸ್ಥಾನದ ಬಳಿ ನಿವಾಸಿ ಚಾಲಕ ಮಕ್ಬುಲ್ ಸಾಬ್ ಸಾಬಜಾನ್ ಸಾಬ್ (65) ಇವರು ಹರಿಹರದಿಂದ ಶಿಕಾರಿಪುರಕ್ಕೆ ತೆರಳುವಾಗ ಗಾಯಗೊಂಡಿದ್ದು ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

 ಚಿಕಿತ್ಸೆ ಫಲಿಸದೇ ಡಿ.3 ರಂದು ಸಾವನ್ನಪ್ಪಿದ್ದಾರೆ. ಮಕ್ಬುಲ್‌ಸಾಬ್ ಈತನು ತನ್ನ ಹೆಂಡತಿಯರಾದ ಆಶೀಫಾ ಹಾಗೂ ಇನ್ನೊಬ್ಬ ಪತ್ನಿ ಮುಬಿನಾ ಬಾನು ಮತ್ತು ತಮ್ಮ ಸಂಬಂಧಿಕರಾದ ಶಿಕಾರಿಪುರದ ತಬಸುಮ್ ಕೋಂ ಸನಾಉಲ್ಲಾ ಮತ್ತು ಇವರ ಮಗಳಾದ ಜೋಯಾ ಸನಾಉಲ್ಲಾ ಇವರನ್ನು ಹತ್ತಿಸಿಕೊಂಡು ಹೋಗುವಾಗ ಈ ಘಟನೆ ಸಂಭವಿಸಿದೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.- 


ಸುದ್ದಿ ಓದಿ