ಇಂಡಿ

ನಾಂದನಿ ಟೋಲ್‌ನಲ್ಲಿ ಸಿಬ್ಬಂದಿಗಳ ಕರ್ತವ್ಯದತ್ತ ನಿರ್ಲಕ್ಷ್ಯ : ವಾಹನ ಸವಾರರಿಗೆ ಘಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ

ನಾಂದನಿ ಟೋಲ್‌ನಲ್ಲಿ ಸಿಬ್ಬಂದಿಗಳ ಕರ್ತವ್ಯದತ್ತ ನಿರ್ಲಕ್ಷ್ಯ : ವಾಹನ ಸವಾರರಿಗೆ ಘಂಟೆಗಟ್ಟಲೆ  ಕಾಯಬೇಕಾದ ಅನಿವಾರ್ಯತೆ

ಲೋಕದರ್ಶನ ವರದಿ 

ಇಂಡಿ 18: ವಿಜಯಪುರ ಸೋಲಾಪುರ ಚತುಷ್ಪಥ ರಸ್ತೆಯಲ್ಲಿರುವ ನಾಂದನಿ ಹತ್ತಿರದ ಟೋಲ್‌ನಲ್ಲಿ ಸಿಬ್ಬಂದಿಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ ಕಾರಣ ವಾಹನ ಸವಾರರು ಘಂಟೆಗಟ್ಟಲೆ ಟೋಲ್‌ನಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ. 

ಗುರುವಾರ ಇಂಡಿ ನಗರದ ಹಲವು ಜನ ಸೋಲಾಪೂರಕ್ಕೆ ಆಸ್ಪತ್ರೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಸೋಲಾಪೂರಕ್ಕೆ ಹೋಗಿ-ಬರುವಾಗ ಟೋಲ್‌ನಲ್ಲೇ ಸಾಕಷ್ಟು ಸಮಯ ನಿಲ್ಲಿಸಿದ್ದಾರೆ. ದುಡ್ಡು ಕೊಟ್ಟರೂ ರಸೀದಿ ನೀಡದೆ ಟೆಕ್ನಿಕಲ್ ಸಮಸ್ಯೆಯಾಗಿದೆ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಕೊನೆಗೆ ಸಮಯ ಸಾಕಷ್ಟು ಆದ ನಂತರ ವಾಹನ ಮಾಲೀಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ಶುರುವಾಗಿದೆ. ದುಡ್ಡು ಕೊಟ್ಟರೂ ನಿಲ್ಲಬೇಕು. ನಾವೇನೂ ಮಾಡಲು ಬರಲ್ಲ. ನೀವು ಯಾರಿಗೆ ಬೇಕಾದರೂ ಹೇಳಿಕೊಳ್ಳಿ ಎಂದು ವಾಹನ ಸವಾರರಿಗೆ ಖಾರವಾಗಿ ಮಾತನಾಡಿದ್ದಾರೆ. 

ಟೋಲ್ ಸಿಬ್ಬಂದಿಯ ಈ ವರ್ತನೆಗೆ ಬೇಸತ್ತ ಜನ ಟೋಲ್ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುತ್ತ ಬರುತ್ತಿರುವುದು ಕಂಡು ಬಂದಿತು. 

ಟೋಲ್‌ಗೆ ದುಡ್ಡು ನೀಡಿದರೂ ಸಹಿತ ಟೋಲ್ ಸಿಬ್ಬಂದಿ ಸರಿಯಾಗಿ ಕಾರ್ಯ ನಿರ್ವಹಿಸದೇ ಸಮಯವ್ಯರ್ಥ ಮಾಡುತ್ತಿದ್ದಾರೆ. ಸಂಬಂಧಿಸಿದ ಇಲಾಖೆಯವರು ಟೋಲ್ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರಾದ ರಾಜಕುಮಾರ ಚಾಬುಕಸವಾರ, ಚಂದ್ರಾಮ ಮೇಡೇದಾರ, ಸಿದರಾಯ ಆಳೂರ ಮತ್ತಿತರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ