ನೀರಜ್ ಚೋಪ್ರಾ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಲಿ: ಅಂಗಡಿ
ಹೂವಿನ ಹಡಗಲಿ 29: ಅಥ್ಲೆಟಿಕ್ಸ್ನಲ್ಲಿ ನೀರಜ್ ಚೋಪ್ರಾ ಶ್ರೇಷ್ಠ ಸಾಧನೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಲಿ ಎಂದು ಮುಖ್ಯ ಗುರುಗಳಾದ ಸುರೇಶ ಅಂಗಡಿ ಹೇಳಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬರೀ ಕ್ರಿಕೆಟ್ ಅಲ್ಲದೆ ಅಥ್ಲೆಟಿಕ್ಸ್ ನಲ್ಲಿಯೂ ಭಾರತದ ಯುವ ಪ್ರತಿಭೆಗಳು ಪ್ರಜ್ವಲಿಸುತ್ತಿವೆ ಎಂದು ಬಣ್ಣಿಸಿದರು. ಸಿದ್ಧತೆ ಬದ್ಧತೆ ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಮಕ್ಕಳು ಎಳೆ ವಯಸ್ಸಿನಲ್ಲೇ ಆಟೋಟಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿರಿ ಎಂದರು.
ದೈಹಿಕ ಶಿಕ್ಷಕರಾದ ಸ್ವಾಮಿನಾಥ ರಾಮಸ್ವಾಮಿ ಧ್ಯಾನ್ ಚಂದ್ ಕುರಿತು ಮಾಹಿತಿ ನೀಡಿದರು. ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಕೆ ಎಂ ಸಮೀರ್ ಅಹಮದ್, ಜೆ ನಿಖಿಲ್, ನವೀನ್ ಎಸ್ ಎನ್, ಮಹಮದ್ ಜಮೀರ್, ಬಸೆಟ್ಟಿ ಹಾಲೇಶ ಇವರಿಗೆ ಸತ್ಕರಿಸಲಾಯಿತು.
ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಬಸಪ್ಪ ಕೆ ಶಿಕ್ಷಕರಾದ ದ್ವಾರಕೀಶ್ ರೆಡ್ಡಿ ಆನಂದ ಜಿ ಪ್ರತಿಮಾ ಎನ್ ಲಂಬಾಣಿ ಗಿಡ್ಡಾನಾಯ್ಕ್ ರೇಖಾ ಎಸ್ ಸಂಗಮೇಶ ಸುಂಕದ ಪ್ರಸಾದ್ ಇತರರು ಉಪಸ್ಥಿತರಿದ್ದರು.