ಅಪಾಯದ ಅಂಚಿನಲ್ಲಿರುವ ಬೇವಿನ ಮರ
ಇಂಡಿ: ಪಟ್ಟಣದ ಭೀರ್ಪ ನಗರದ ಜಗದಂಬಾ ಶಾಲೆಯ ಹತ್ತಿರ ಒಣಗಿದ ಮತ್ತು ಬಾಗಿದ ಬೇವಿನಮರವಿದೆ.
ಅದರ ಹತ್ತಿರ ನಾಲ್ಕು ರಸ್ತೆಗಳು ಹಾದು ಹೋಗುತ್ತವೆ. ಅದಲ್ಲದೆ ಅಲ್ಲಿ ಜಗದಂಬಾ ಪ್ರಾಥಮಿಕ ಶಾಲೆ ಇದ್ದು ಮತ್ತು ನಿವಾಸಿ ವಾಸಿಸುತ್ತಿದ್ದು ಮನೆಗಳು ಕೂಡ ಇವೆ.
ಪಟ್ಟಣದ ಸುಶಿಕ್ಷಿತ ಮತ್ತು ಪಟ್ಟಣದ ಮಧ್ಯ ಇರುವ ಬಡಾವಣೆ ಇದೆ, ಸಾಕಷ್ಟು ಜನ ಹಗಲು, ರಾತ್ರಿ ಈ ಗಿಡದ ಹತ್ತಿರದಿಂದಲೇ ಯಾವಾಗಲೂ ಹಾದು ಹೋಗುತ್ತಾರೆ. ವಿದ್ಯಾರ್ಥಿಗಳು ಅಲ್ಲಿಯೇ ಗೊತ್ತಿಲ್ಲದೆ ಆಡುತ್ತಾರೆ. ಅದಲ್ಲದೆ ಅದಕ್ಕೆ ಹಿಡಿದು ಕಣ್ಣು ಮುಚ್ಚಾಲೆ ಆಟ ಆಡುವದು, ಅದರ ಹಿಂದೆ ಅಡಗಿ ಕೊಳ್ಳುವದು ಮಾಡುತ್ತಾರೆ.
ಸಮೀಪದ ನಿವಾಸಿ ಸಂಸೋಧಕ ಡಾ. ಎಸ್.ಕೆ. ಕೊಪ್ಪರವರು ಮತ್ತು ಶಾಲೆಯ ಸಿಬ್ಬಂದಿ ಅರಣ್ಯ ಇಲಾಖೆಯವರಿಗೆ ಮತ್ತು ಪುರಸಭೆಯವರಿಗೆ ಮನವಿ ಕೊಟ್ಟು ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರಿಗೆ ವಿನಂತಿಸಿಕೊಂಡರೂ ಏನೂ ಪ್ರಯೋಜನವಾಗಿಲ್ಲ.
ಸಂಬಂದಿತರು ಈ ಗಿಡವನ್ನು ತೆಗೆಯಬೇಕು. ಇಲ್ಲದಿದ್ದರೆ ಅನಾಹುತ ವಾದರೆ ಇಲಾಖೆಯೇ ಜವಾಬ್ದಾರಿಯಾಗುತ್ತದೆ ಎಂದು ನಿವಾಸಿಗಳ ಮತ್ತು ಡಾ. ಕೊಪ್ಪರವರ ಆಗ್ರಹವಾಗಿದೆ.