ನೀಲಕಂಠ ಶ್ರೀಗಳಿಗೆ ಪಿಹೆಚ್.ಡಿ ಪದವಿ
ಗುಳೇದಗುಡ್ಡ,ಜು.28: ಅಮರೇಶ್ವರ ಮಠದ ಶ್ರೀಗಳಾದ ನೀಲಕಂಠಯ್ಯ ಪುರಾಣಿಕಮಠ ಅವರಿಗೆ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಪಿಹೆಚ್.ಡಿ ಪದವಿ ಪ್ರದಾನ ಮಾಡಲಾಗಿದೆ.
ಮೈಸೂರಿನ ಡಾ. ಕೆ.ಎಂ. ಮಹಾದೇವಯ್ಯ ಅವರ ಮಾರ್ಗದರ್ಶನದಲ್ಲಿ ಚಂದ್ರಜ್ಞಾನಾಗಮೇ ಉತ್ತರಭಾಗೆ ಕ್ರಿಯಾಚರ್ಯಪಾದಯೋಹೋ : ವಿಮರ್ಶಾತ್ಮಕಂ ಅಧ್ಯಯನಂ ವಿಷಯದ ಮೇಲೆ ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಪ್ರದಾನ ಮಾಡಿದೆ.