ನವರಾತ್ರಿ ಬೆಂಚಿ ತುಂಗಾಜಲ ಚೌಡೇಶ್ವರಿ ದೇವಿಗೆ ನಿತ್ಯ ವಿಶೇಷ ಅಲಂಕಾರ
ರಾಣೇಬೆನ್ನೂರು: 13: ವಾಣಿಜ್ಯ ನಗರ ಮಾರುತಿ ನಗರದ ಇತಿಹಾಸ ಪ್ರಸಿದ್ಧ ಬೆಂಚಿಮರಡಿಯ, ತುಂಗಾಜಲ ಚೌಡೇಶ್ವರಿ ದೇವಿಯ, ವಾರ್ಷಿಕ ಸಂಪ್ರದಾಯದ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಅ.15ರ ಭಾನುವಾರದಿಂದ ಆರಂಭವಾಗಿ, 24ರವರೆಗೆ 9 ದಿವಸಗಳ ಕಾಲ ಜರುಗಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಶೇಖಪ್ಪ ಬಿ. ಹೊಸಗೌಡ್ರ ಮತ್ತು ಪದಾಧಿಕಾರಿಗಳವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15ರ ರವಿವಾರ ದಂದು ಸೂರ್ಯೋದಯ ಕಾಲ ತುಂಗಾಜಲ ಚೌಡೇಶ್ವರಿ ದೇವಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿ, ಘಟ ಸ್ಥಾಪನೆ ಯಾಗಲಿದೆ. ಅಂದೇ ಸಂಜೆ, ಚಂದ್ರಘಟ್ಟ ಅಲಂಕಾರದಿಂದ, ದರ್ಶನ , ಆರಂಭವಾಗಲಿದೆ. ಸೋಮವಾರ ಶ್ರೀಶೈಲ ಪುತ್ರಿ, ರೇಣುಕಾದೇವಿ, ಗಜಗೌರಿ, ಅನ್ನಪೂರ್ಣೇಶ್ವರಿ, ಸರಸ್ವತಿ ದೇವಿ, ನವಿಲು ವಾಹನೋತ್ಸವ, ದುರ್ಗಾ ಮಾತೆ, ಕಾಳಿಕಾದೇವಿ ಹಾಗೂ ವಿಜಯದಶಮಿಯ ದಿನವಾದ ಮಂಗಳವಾರ ಶಾಂತ ಮೂರ್ತಿಯಾಗಿ ಹೀಗೆ ಒಂಬತ್ತು ದಿವಸಗಳ ಕಾಲ ನಿತ್ಯವೂ ವಿಶೇಷ ಅಲಂಕಾರಗಳ ಮೂಲಕ ಶ್ರೀದೇವಿಯು ತನ್ನ ಲಕ್ಷಾಂತರ ಭಕ್ತರಿಗೆ ದರ್ಶನಾಶೀರ್ವಾದ ಕರುಣಿಸುವಳು. ಎಂದು ಪ್ರಧಾನ ಅರ್ಚಕ ಚಂದ್ರಶೇಖರಯ್ಯ ದಿಡ್ಡಿಮಠ ಅವರು ಹೇಳಿದ್ದಾರೆ.