ರಾಣೆಬೆನ್ನೂರ

ಗಂಗಾಜಲ ಚೌಡೇಶ್ವರಿ ದೇವಿಯ ನವರಾತ್ರಿ ಉತ್ಸವ

ಗಂಗಾಜಲ ಚೌಡೇಶ್ವರಿ ದೇವಿಯ ನವರಾತ್ರಿ ಉತ್ಸವ

ರಾಣೇಬೆನ್ನೂರು 25:  ಇಲ್ಲಿನ ಇತಿಹಾಸ ಪ್ರಸಿದ್ಧ ಗ್ರಾಮ ದೇವತೆ ಗಂಗಾಜಲ ಚೌಡೇಶ್ವರಿ ದೇವಿಯ, ನವರಾತ್ರಿ ಉತ್ಸವವು, ಅತ್ಯಂತ ಭಕ್ತಿ ಭಾವದೊಂದಿಗೆ, ದೇವಿಯ ರಥೋತ್ಸವದ ಮೂಲಕ ಮಂಗಳವಾರ ಸಂಜೆ, ಸಾಮೂಹಿಕ ಬನ್ನಿ ಮುಡಿಯುವುದರ  ಮೂಲಕ ಸುಸಂಪನ್ನಗೊಂಡಿತು.              

ಕಳೆದ 15 ರಿಂದ ಆರಂಭವಾದ ಶ್ರೀದೇವಿಯ ದಸರೇ ಮಹೋತ್ಸವದ ನಿಮಿತ್ತ ನಡೆಯುವ ನವರಾತ್ರಿಯ ಕಾರ್ಯಕ್ರಮವು ಇಂದು ಸಂಜೆಗೆ ಬನ್ನಿ ಮುಡಿದು, ಸಂಪ್ರದಾಯ ಪರಂಪರೆಗೆ ನಾಂದಿಯಾಯಿತು   ಸಂಜೆ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾದ ರಥೋತ್ಸವದಲ್ಲಿ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ,ಪಕ್ಕದಲ್ಲಿರುವ ಬನ್ನಿಮಂಟಪಕ್ಕೆ, ಉತ್ಸವದ ಮೆರವಣಿಗೆ ಮೂಲಕ ಸಾಗಿ ಅಲ್ಲಿ  ಆ ಸಂಖ್ಯಾತ ಭಕ್ತರ, ಮುಖದಲ್ಲಿ ಶಮಿ, ಪೂಜೆ ನೆರವೇರಿಸಿ, ಬನ್ನಿ ಮುಡಿಯಲಾಯಿತು. ನೇತೃತ್ವವನ್ನು  ಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಸೋಮಶೇಖರಯ್ಯ ಗದ್ದಿಮಠ ಅವರ ಸಾರಥ್ಯದಲ್ಲಿ ನವರಾತ್ರಿಯ ಕಾರ್ಮಿಕ ಕಾರ್ಯಕ್ರಮಗಳು ಸಾಂಗಮಂಗಲಗೊಂಡವು. ರಥೋತ್ಸವ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮದ ಮುಂಚೂಣಿಯಲ್ಲಿ ಅಧ್ಯಕ್ಷ ಬಸವರಾಜ ನಾಯಕ್, ಕಾರ್ಯದರ್ಶಿ ನಾರಾಯಣಪ್ಪ  ಬಿಷ್ಟಣ್ಣನವರ್,ಸದಸ್ಯರಾದ ಗಾಂಧಿರಾಜ್ ಬ್ಯಾಡಗಿ, ಶಾಂತಲಿಂಗಪ್ಪ ಅಣಜೇರ್, ರಾಮಣ್ಣ ಕಾಕಿ, ಶಶಿಧರ ಬಸೇನಾಯ್ಕರ್, ನಾಗಪ್ಪ ಕೆಂಪಹನುಮಣ್ಣನವರ, ಲಕ್ಷ್ಮಣ ಚಿಂತಾ, ಬಸವರಾಜ ಕಡೇ ಮನಿ, ಅಣ್ಣೇಶ್ ಅಟವಾಳಗಿ ಸೇರಿದಂತೆ, ಸಮಾಜದ ಮತ್ತಿತರ ಗಣ್ಯರು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.ನಂತರ ಭಕ್ತರು ಪರಸ್ಪರ ಬನ್ನಿ ವಿನಯೋಗಿಸಿಕೊಂಡು, ಶುಭಾಶಯ ಸಂದೇಶ ಸಾರಿ ಶ್ರೀದೇವಿಯ ದರ್ಶನ ಭಾಗ್ಯ ಪಡೆದು  ಧನ್ಯತೆ ಮೆರೆದರು. 


ಸುದ್ದಿ ಓದಿ