ಪ್ರಕೃತಿಯ ಪ್ರಯೋಗಾಲಯವು ಸಂಪೂರ್ಣವಾಗಿ ವಿಜ್ಞಾನ ಆಧಾರಿತ: ಅಲ್ಲಾಪೂರ
ಸಿಂದಗಿ: ನಾವು ನಮ್ಮ ಕೃಷಿಯನ್ನು ರಸಾಯನಶಾಸ್ತ್ರದ ಪ್ರಯೋಗಾಲಯದಿಂದ ಹೊರತಂದು, ಪ್ರಕೃತಿಯ ಪ್ರಯೋಗಾಲಯಕ್ಕೆ ಒಡ್ಡಬೇಕಿದೆ. ನಾನು ಮಾತನಾಡುತ್ತಿರುವ ಪ್ರಕೃತಿಯ ಪ್ರಯೋಗಾಲಯವು ಸಂಪೂರ್ಣವಾಗಿ ವಿಜ್ಞಾನ ಆಧಾರಿತವಾಗಿದೆ ಎಂದು ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಚೆನ್ನಚವೀರಸ್ವಾಮೀಜಿ ರೈತ ಉತ್ಪಾಕರ ಕಂಪನಿ ಅಧ್ಯಕ್ಷ ಅಶೋಕ ಅಲ್ಲಾಪೂರ ಹೇಳಿದರು.
ಪಟ್ಟಣದ ಚೆನ್ನಚವೀರಸ್ವಾಮೀಜಿ ರೈತರ ಉತ್ಪಾಧಕರ ಕಂಪನಿಯ ಸಭಾಭವನದಲ್ಲಿ ಸೋಮವಾರ ಕೃಷಿ ಇಲಾಖೆ ವಿಜಯಪುರ, ಜಲಾನಯನ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪರಮಾನಂದ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಿಂದಗಿ ಸಂಸ್ಥೆಯು 2021-22ನೇ ಸಾಲಿನ ಎಫ್ಪಿಒ ಯೋಜನೆ ಅಡಿಯಲ್ಲಿ ರೈತ ಉತ್ಪಾದಕರ ಸಂಸ್ಥೆಯ ರೈತರ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಾಗೂ ಎಫ್ಪಿಒಗಳ ರಚನೆ ಹಾಗೂ ಷೇರ ಸಂಗ್ರಹ ಬಗ್ಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ನಾವು ಕೃಷಿ ಕುರಿತಾದ ಈ ಪ್ರಾಚೀನ ಜ್ಞಾನವನ್ನು ಮತ್ತೆ ಕಲಿಯುವುದಷ್ಟೇ ಅಲ್ಲ, ಆಧುನಿಕ ಕಾಲಕ್ಕೆ ತಕ್ಕಂತೆ ಅದನ್ನು ತೀಕ್ಷಗೊಳಿಸಬೇಕಾಗಿದೆ ಎಂದು ಹೇಳಿದರು.
ಬೆಳೆ ಬೆಳೆಯುವ ರೈತಕೊಳ್ಳುವ ಗ್ರಾಹಕರ ನೇರ ವಹಿವಾಟು ಈಚಿನ ಟ್ರೆಂಡ್. ಈ ಮೂಲಕ ಮಾರುಕಟ್ಟೆ ಬೆಲೆಗಿಂತ
ವಿಶ್ರಾಂತ ಕೃಷಿ ಅಧಿಕಾರಿ ಬಿ.ಬಿ. ಕೌಲಗಿ ಅವರು ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು. ಚೆನ್ನಚವೀರಸ್ವಾಮೀಜಿ ರೈತರ ಉತ್ಪಾಧಕರ ಕಂಪನಿಯ ನಿರ್ದೇಶಕ ರಮೇಶ ಪೂಜಾರ ಸೇರಿದಂತೆ ಎಫ್ಪಿಓ ಸಿಇಓ ಹಾಗೂ ಸದಸ್ಯರು, ರೈತರು ಭಾಗವಹಿಸಿದ್ದರು.