ಕಾಟಾಚಾರದ ಪ್ರಕೃತಿ ವಿಕೋಪದ ಮಳೆಹಾನಿ ಪರೀಶೀಲನಾ ತಂಡದ ಭೇಟಿ: ರೈತರ ಖಂಡನೆ
ಶಿಗ್ಗಾವಿ 11: ಕಾರು ಬಿಟ್ಟು ಇಳಿಯದೇ, ರೈತರೊಡನೆ ಕಾಟಾಚಾರದ ಕಾರುಬಾರ ಮಾಡಿ ಹೋದ ಪ್ರಕೃತಿ ವಿಕೋಪದ ಮಳೆಹಾನಿ ಪರೀಶೀಲನಾ ತಂಡದ ಕ್ರಮವನ್ನು ಬಂಕಾಪೂರ ಹೋಬಳಿಯ ರೈತರು ಸಭೆ ಸೇರಿ ಖಂಡನೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದಂದು ಸಂಜಯ ಶೆಟ್ಟೆಣ್ಣವರ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ತಾಲೂಕಿನ ಬಂಕಾಪೂರ ಹಾಗೂ ವಿವಿಧ ಹೋಬಳಿಗಳಿಗೆ ಮಳೆಹಾನಿ ಕುರಿತು ಕೇಂದ್ರದ ಪರೀಶೀಲನಾ ತಂಡದೊಂದಿಗೆ ಆಗಮಿಸಿತ್ತು. ಪ್ರಸಕ್ತ ಮಳೆ ಬೆಳೆ ಹಾನಿಯ ಕುರಿತು ಅಧ್ಯಯನ ತಂಡಕ್ಕೆ ಸರಿಯಾದ ಹಾನಿಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು ಬಂದ ರೈತರನ್ನು ಸರಿಯಾಗಿ ಸ್ಫಂದಿಸಲಿಲ್ಲ. ತಂಡವನ್ನು ಜಮೀನು ಭಾಗಕ್ಕೂ ಕರೆತರಲಿಲ್ಲ. ಅಲ್ಲದೇ ಜಿಲ್ಲಾಧಿಕಾರಿಗಳ ನಡುವಳಿಕೆಯೂ ಅಸಂಬದ್ದವಾಗಿತ್ತು ಎಂದು ಆರೋಪಿಸಿದ ರೈತ ಮುಖಂಡರು ಕೇಂದ್ರ ತಂಡದ ಗಮನಸೆಳೆಯಲು ತಾಲೂಕಿನ ಸಾಕಷ್ಟು ರೈತರು ಜಮೀನನಲ್ಲಿ ಕೊಳೆತು ಹೋದ ಶೇಂಗಾ, ಸೋಯಾ, ಅಲ್ಲದೇ ಗೋವಿನಜೋಳದ ಸಸಿಗಳನ್ನು ಪ್ರಾತ್ಯಕ್ಷೆತೆಗಾಗಿ ತಂದಿದ್ದರೂ, ಉಡಾಫೆ ಮಾತು ಹೇಳಿ ಜಾಗ ಖಾಲಿ ಮಾಡಿದ್ದಾರೆ. ರೈತರ ಪರವಾಗಿ ಮಾಹಿತಿ ಹಂಚಿಕೊಳ್ಳಲು ಹೋದ ತಹಶೀಲ್ದಾರ ಶಿವಾನಂದ ರಾಣೆಯವರಿಗೂ ಇದನ್ನೇಕೆ ತಂದಿದ್ದೀಯಾ, ಇದನ್ನು ತೆಗೆದುಕೊಂಡು ಹೋಗಿ ನಾನೇನು ಮಾಡಲಿ ಎನ್ನುವ ಉತ್ತರ ನೀಡಿ ತಹಶೀಲ್ದಾರರನ್ನೂ ಸಾರ್ವಜನಿಕವಾಗಿ ಹಿಯಾಳಿಸಿ ಅವಮಾನಿಸಿದ್ದಾರೆ.
ಕಳೆದ ಸಾಲಿನ ಬಿಡುಗಡೆಯಾದ ಬೆಳೆ ಹಾನಿ ಹಾಗೂ ವಿಮಾ ಪರಿಹಾರ ಕುರಿತು ಸಾಕಷ್ಟು ರೈತರ ದೂರುಗಳಿದ್ದರೂ ಜಿಲ್ಲಾಧಿಕಾರಿಗಳು ನೀಡುವಲ್ಲಿ ವಿಳಂಭ ಮಾಡಿದ್ದು ಸಮಸ್ಯ ಪರಿಹರಿಸಿಲ್ಲ. ನಾರಾಯಣಪೂರ, ಬಾಡ. ಸದಾಶಿವಪೇಠೆ, ಮುನವಳ್ಳಿ, ಹಳೆ ಬಂಕಾಪೂರ. ಬಸರೀಕಟ್ಟಿ ಬಿಸನಳ್ಳಿ ಸಾಕಷ್ಟು ರೈತರು ಜಿಲ್ಲಾಧಿಕಾರಿ ನಡುವಳಿಕೆ ವಿರುದ್ಧ ಶನಿವಾರ ಸಭೆ ಸೇರಿ ಚರ್ಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜಿಲ್ಲಾಧಿಕಾರಿಗಳ ವಿರುದ್ದ ಕರ್ತವ್ಯ ಲೋಪದಡಿ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದ್ದು. ದಿ, 12 ರಂದು ಬಂಕಾಪೂರ ಕೃಷಿ ಇಲಾಖೆಯ ಹೋಬಳಿಯ ಮುಂಬಾಗದಲ್ಲಿ ರೈತರೊಂದಿಗೆ ಪ್ರತಿಬಟನೆ ನಡೆಸುವುದಾಗಿ ಎಚ್ಚರಿಸಿ ಆಕ್ರೋಶ ಹೊರಹಾಕಿದ್ದಾರೆ. ನಾರಾಯಣಪೂರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಸವರಾಜ ಕುರಗೋಡಿ, ಶಿದ್ದಲಿಂಗೇಶ ಕಲಿವಾಳ, ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ.ದುಂಡಪ್ಪ ರಾಯಣ್ಣವರ, ರಮೇಶ ಕಲಿವಾಳ, ಶಂಕ್ರ್ಪ ಗುಳೆದಕೇರಿ, ರಾಮಣ್ಣ ಕುಂದೂರು, ಪ್ರಭು ವ್ಯಂಕೋಜಿ, ಬಂಕಪ್ಪ ಬಾರಿಗಿಡದ, ನಾಗರಾಜ ಜವಳಗಿ. ರಾಜಶೇಖರ ಮೆಳ್ಳಾಗಟ್ಟಿ. ಖ್ವಾಜಾ ಮೊಯುದ್ದೀನ ಧರ್ಗಾ, ಶೇಕಪ್ಪ ಹುಲ್ಲಮನಿ ಸಿದ್ದಪ್ಪ ಕ್ಷೌರದ ಅಲ್ಲದೇ ವಿವಿಧ ಗ್ರಾಮಗಳ ರೈತ ಮುಖಂಡರಿದ್ದರು.