ರಾಣೆಬೆನ್ನೂರ

ಡೇಹರಾಡೋನಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ : ಮಿಂಚಿದ ರಾಣೇಬೆನ್ನೂರಿನ ರಕ್ಷಿತಾ ಕೂರವರ

ಡೇಹರಾಡೋನಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ : ಮಿಂಚಿದ ರಾಣೇಬೆನ್ನೂರಿನ ರಕ್ಷಿತಾ ಕೂರವರ

ರಾಣೇಬೆನ್ನೂರು 26:  ಉತ್ತರಖಂಡ ಕರಾಟೆ ಅಸೋಸಿಯೇಷನ್ ಹಾಗೂ ಕರಾಟೆ ಇಂಡಿಯಾ ಆರ್ಗನೈಸೇಶನ್ ಇತ್ತೀಚೆಗೆ, ಡೆಹರಾಡೋನಲ್ಲಿ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ  ಆಯೋಜಿಸಿತ್ತು. ಹಾವೇರಿ ಜಿಲ್ಲಾ ಸ್ಪೋರ್ಟ್ಸ  ಕರಾಟೆ ಅಸೋಸಿಯೇಷನ್, ಹಾಗೂ ಮದರ್ ಮಾರ್ಷಲ್ ಆರ್ಟ್ಸ ಸ್ಪೋರ್ಟ್ಸ ಅಕಾಡೆಮಿ ವತಿಯಿಂದ  ಪಾಲ್ಗೊಂಡಿದ್ದ ರಕ್ಷಿತಾ ಎನ್‌. ಕೊರವರ ಅವರು, ತಮ್ಮ ಅಪ್ರತಿಮ ಸಾಧನೆ ಮೆರೆದು ರಾಣೇಬೆನ್ನೂರು ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.ಸೆಪ್ಟೆಂಬರ್ 21ರಿಂದ ನಾಲ್ಕು ದಿವಸಗಳ ಕಾಲ ದೂರದ ಡೆಹ್ರಾಡೂನ್ ನಲ್ಲಿ  ಹಾವೇರಿ ಜಿಲ್ಲೆಯ ಯುವ ಕರಾಟೆ ಪ್ರತಿಭೆ, 14 ವರ್ಷದ ಮಹಿಳಾ ಕಟಾ ವಿಭಾಗದಲ್ಲಿ ಸ್ಪರ್ಧಿಸಿ. ಕಂಚಿನ ಪದಕ ಪಡೆದು ತನ್ನ ಕರಾಟೆ ಪ್ರತಿಭೆ ಮೆರೆದಿದ್ದಾಳೆ.     

ರಕ್ಷಿತಾ ಅವರಿಗೆ ರಾಣೇಬೆನ್ನೂರಿನ ನಾಗರಾಜ ಸುಣಗಾರ ಅವರು ತರಬೇತುದಾರರಾಗಿದ್ದರು. ಕಟಾ ವಿಬಾಗದಲ್ಲಿ ಸಾಧನೆ ಮೆರೆದ ಯುವ ಪ್ರತಿಭೆಗೆ ಜಿಲ್ಲಾ ಸ್ಪೋರ್ಟ್ಸ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಎಸ್‌.ಬಾರ್ಕಿ, ಕರ್ನಾಟಕ ಸ್ಪೂರ್ಟ್ಸ ಅಸೋಸಿಯೇಷನ್ ಅಧ್ಯಕ್ಷ ಅರುಣ್ ಮಾಚಯ್ಯ, ಕಾರ್ಯದರ್ಶಿ ಭಾರ್ಗವ ರೆಡ್ಡಿ ಸೇರಿದಂತೆ ಮತ್ತಿತರರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ. ರಾಷ್ಟ್ರಮಟ್ಟದ ಈ ಪಂದ್ಯಾವಳಿಯಲ್ಲಿ ಕರ್ನಾಟಕವು ಸೇರಿದಂತೆ ಓಡಿಸ್ಸಾ, ಮಧ್ಯ ಪ್ರದೇಶ್, ಕೇರಳ, ಮಹಾರಾಷ್ಟ್ರ, ಹರಿಯಾಣ, ದೆಹಲಿ, ಉತ್ತರ ಪ್ರದೇಶ್, ಜಾರ್ಖಂಡ್, ತಮಿಳುನಾಡು, ಅಸ್ಸಾಂ, ಬಿಹಾರ್ ಹಾಗೂ ಮತ್ತಿತರ  ರಾಜ್ಯಗಳ ಕರಾಟೆ ಸ್ಪರ್ದಾಳುಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ