ಗೋಕಾಕ್

ರಾಷ್ಟ್ರೀಯ ವಿಚಾರ ಸಂಕಿರಣ

ರಾಷ್ಟ್ರೀಯ ವಿಚಾರ ಸಂಕಿರಣ

ಗೋಕಾಕ: ಇತ್ತೀಚೆಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಕಲ್ಲೋಳ್ಳಿ ಎಸ್.ಆರ್.ಎಸ್. ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಗೋಕಾಕದ ಬಯಲಾಟ ಕಲಾವಿದ ಈಶ್ವರಚಂದ್ರ ಬೆಟಗೇರಿಯವರು ವೀರರಾಣಿ ಕಿತ್ತೂರ ಚೆನ್ನಮ್ಮ ಪಾತ್ರದ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯ ಹಾಗೂ ತಲ್ಲೂರ ರಾಯನಗೌಡರ ವಂಶಸ್ಥರು ಚೆನ್ನಮ್ಮ ಪಾತ್ರಧಾರಿ ಈಶ್ವರಚಂದ್ರ ಬೆಟಗೇರಿಯವರನ್ನು ಸನ್ಮಾನಿಸಿದರು. ಪುರಾತತ್ವ ವಿದ್ವಾಂಸರಾದ ಡಾ.ರು.ಮ.ಷಡಕ್ಷರಯ್ಯ ಬಸಗೌಡ ಶಿವಗೌಡ ಪಾಟೀಲ, ಪ್ರೊ.ಎಸ್.ಎಂ.ಗಂಗಾಧರಯ್ಯ, ಡಾ.ಶೋಭಾ ನಾಯಕ, ಡಾ.ಮೈತ್ರೇಯಣಿ ಗದಿಗೆಪ್ಪಗೌಡರ, ಸಾಹಿತಿ ಯ.ರು.ಪಾಟೀಲ, ಭೀಮಶೆಪ್ಪ ಕಡಾಡಿ, ಪ್ರಕಾಶ ಗಿರಿಮಲ್ಲನವರ, ಯಲ್ಲಪ್ಪ ಕಡಕೋಳ, ಡಾ.ಸುರೇಶ ಬಿ.ಹನಗಂಡಿ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ