ಶಿಗ್ಗಾವ್

ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಗ್ರಾಮೀಣ ಕ್ರೀಡಾಕೂಟ

ರಾಷ್ಟ್ರೀಯ ಕ್ರೀಡಾ ದಿನಾಚರಣೆ: ಗ್ರಾಮೀಣ ಕ್ರೀಡಾಕೂಟ

ಲೋಕದರ್ಶನ ವರದಿ

ಶಿಗ್ಗಾವಿ 07: ತಾಲೂಕಿನ ಹೊಸೂರ ಗ್ರಾಮದ ಸರಕಾರಿ ಮಾದರಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ ಹಾವೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ ಶಿಗ್ಗಾವಿ, ಗ್ರಾಮ ಪಂಚಾಯತಿ ಹೊಸೂರ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ 2022-23 ರ ಗ್ರಾಮೀಣ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.

ಗ್ರಾಪಂ ಅದ್ಯಕ್ಷ ಅಣ್ಣಪ್ಪ ಲಮಾಣಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ದೇಶಿಯ ಕ್ರೀಡೆಗಳಾದ ಕಬ್ಬಡ್ಡಿ, ಖೋ ಖೋ, ಕುಸ್ತಿ ಹಾಗೂ ಯತ್ತಿನಗಾಡಿ ಸ್ಪರ್ಧೆಗಳಿಗೆ ಉತ್ತೆಜನ ನೀಡುವುದು ಹಾಗೂ ಪ್ರೋತ್ಸಾಹಿಸಿವುದು ನಮ್ಮಲ್ಲೆರ ಕರ್ತವ್ಯವಾಗಿದೆ ಎಂದರು. 

ಗ್ರಾಪಂ ಉಪಾಧ್ಯಕ್ಷೆ ಚನ್ನವ್ವ ಪಾಟೀಲ ಜ್ಯೋತಿ ಬೆಳಗಿಸುದರ ಮುಖಾಂತರ ಚಾಲನೆ ನೀಡಿದರು, ಗ್ರಾಮದ ಹಿರಿಯರಾದ ಎನ್ ಎಸ್ ಬರದೂರ, ನೀಲಪ ್ಪ ಬಾರಕೆರ, ಧರ್ಮಪ್ಪ ಡವಗಿ, ಯುವಕರು, ಪಿಡಿಓ ರಾಮಪ್ಪ ವಾಲೀಕಾರ ಸೇರಿದಂತೆ ಗ್ರಾಮ ಪಂಚಾಯತಿಯ ಸರ್ವಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು 

ಸುದ್ದಿ ಓದಿ