ಅಸುಂಡಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ
ರಾಣೇಬೆನ್ನೂರು 18: ನಾಗರಿಕತೆ ಎಷ್ಟೇ ಬೆಳೆದಿದ್ದರೂ ಸಹ ಇಂದಿಗೂ, ಗ್ರಾಮ ಮತ್ತು ಗ್ರಾಮೀಣ ಸಂಸ್ಕೃತಿಗೆ ಭವ್ಯವಾದ ಇತಿಹಾಸ ಪರಂಪರೆ ಇದೆ ಎಂದು ಬಿಎಜೆಎಸ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ, ಆಡಳಿತಾಧಿಕಾರಿ ಡಾ: ಆರ್. ಎಂ.ಕುಬೇರ್ಪ ಹೇಳಿದರು.
ತಾಲೂಕಿನ ಅಸುಂಡಿ ದತ್ತು ಗ್ರಾಮದಲ್ಲಿ ಬಿಎಜೆಎಸ್‌ಎಸ್, ಸ್ವತಂತ್ರ ಪದವಿ ಪೂರ್ವ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮಹಾತ್ಮ ಗಾಂಧೀಜಿಯವರು ಕಂಡ, ರಾಮ ರಾಜ್ಯದ ಕನಸು ನನಸಾಗಬೇಕಾದರೆ, ಗ್ರಾಮೀಣ ಸಂಸ್ಕೃತಿ, ಆಚಾರ ವಿಚಾರ, ನಿತ್ಯ ನಿರಂತರವಾಗಿರಬೇಕು, ಅಂದಾಗ ಮಾತ್ರ,ಸಮಾನತೆ ಸಾಧಿಸಲು ಸಾಧ್ಯವಾಗುವುದು ಎಂದರು.
ವಿಶೇಷ ಶಿಬಿರವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದ, ಕರ್ನಾಟಕ ಸರ್ಕಾರದ ಉಪ ಸಭಾಪತಿ ರುದ್ರ್ಪ ಎಂ. ಲಮಾಣಿ ಅವರು, ಯುವ ಜನಾಂಗ ಈ ದೇಶದ ಭವಿಷ್ಯದ ರೂವಾರಿಗಳು. ಭಾರತೀಯ ಪರಂಪರೆ ಬಹುದೊಡ್ಡ ಸಂಸ್ಕೃತಿಯ ಪರಂಪರೆಯಾಗಿ ಹಾಸು ಹೊಕ್ಕಾಗಿದೆ. ಪಾಶ್ಚಿ ಮಾತ್ಯ ಸಂಸ್ಕೃತಿಗೆ ಮಾರೋ ಹೋಗದೆ, ನಮ್ಮತನವನ್ನು ನಾವು ಅಳವಡಿಸಿಕೊಂಡು ಉಳಿಸಿ ಬೆಳೆಸಬೇಕಾದ ಇಂದಿನ ಬಹು ಅಗತ್ಯವಿದೆ ಎಂದರು. ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಭಾರತೀಯರು, ಸದಾ ಶಾಂತಪ್ರಿಯರು, ಸಮಾನತೆಗಾಗಿ ನಾವೆಲ್ಲರೂ ಒಂದಾಗಿ, ಒಗ್ಗಟ್ಟಾಗಿ ಬಾಳಿ ಬದುಕಬೇಕಾಗಿದೆ ಅದುವೇ ಭಾರತೀಯ ನಿಜ ಸಂಸ್ಕೃತಿ ಎನ್ನುವುದನ್ನು ಅರ್ಥ ಮಾಡಿಕೊಂಡರೆ, ಯಾರಿಗೂ ನಿರಾಸೆ ಎನ್ನುವುದು ಇರಲಾರದು ಎಂದು ಮಾರ್ಮಿಕವಾಗಿ ನುಡಿದರು.
ಅಸುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾ ಈ. ಹಲಗೇರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಭಾ ವೇದಿಕೆಯಲ್ಲಿ, ಆಡಳಿತ ಮಂಡಳಿ ಸದಸ್ಯ ಗೋಪಾಲ ರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಹೆಚ್. ಹುಚಗೊಂಡರ, ಪಿ.ಎಲ್. ಡಿ. ಬ್ಯಾಂಕ್ ನಿರ್ದೇಶಕ ವ್ಹಿ.ಪಿ.ಪೊಲೀಸ್ ಗೌಡ್ರ, ಗ್ರಾಮ ಪಂಚಾಯಿತಿ ಸದಸ್ಯ ಹನುಮಂತಪ್ಪ ಚಳಗೇರಿ, ಮುಖಂಡರಾದ ಚನ್ನಬಸಪ್ಪ ಸಿದ್ದಣ್ಣನವರ, ಸೋಮಲಿಂಗಪ್ಪ ದೊಡ್ಡ ಬೂದಿಹಾಳ ಮತ್ತು ಯೋಜನೆಯ ಉಪನ್ಯಾಸಕರಾದ ಲಚ್ಚಾ ನಾಯಕ್ ಎಲ್, ರಾಜು ಎಂ ಎನ್. ಅಶೋಕ್ ಬಣಕಾರ, ಸೈದಾ ಬಾನು ಮುದೇನೂರು, ಮುತ್ತುರಾಜ ಸಿದ್ದಣ್ಣನವರ, ಸೇರಿದಂತೆ ಮತ್ತಿತರ ಗಣ್ಯರು, ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಕವಿತಾ ಸಂಗಡಿಗರು ಪ್ರಾರ್ಥಿಸಿ, ಎನ್ ಎಸ್ ಎಸ್ ಗೀತೆ ಹಾಡಿದರು. ಶ್ರೀಮತಿ ಎಲ್. ಎ. ಧೊಳೇಹೊಳಿ, ಸ್ವಾಗತಿಸಿದರು. ಪ್ರಾಚಾರ್ಯ ಎಚ್. ಬಿ.ಪಟ್ಟಣಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿ ಬಿ.ಕೆ. ಚೌಡಣ್ಣನವರ. ನಿರೂಪಿಸಿ,ಎ. ಶಂಕರ ನಾಯಕ್ ವಂದಿಸಿದರು.