ತುಂಗಭದ್ರಾ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಹೂವಿನಹಡಗಲಿ ಫೆ.28: ಜನರ ಸಮಾಜದ ಅಭಿವೃದ್ದಿಗೆ ವಿಜ್ಞಾನ ಬಳಕೆ ಆಗಬೇಕು ಎಂದು ಗಣಿತ ಶಿಕ್ಷಕ ಸಂಗಮೇಶಸುಂಕದ ಪ್ರಸಾದ ಹೇಳಿದರು. ಪಟ್ಟಣದ ತುಂಗಭದ್ರಾ ಪ್ರೌಢಶಾಲೆಯಲ್ಲಿ ಮಂಗಳವಾರ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸಿವಿ ರಾಮನ್ ಪರಿಣಾಮ ಫೆಬ್ರವರಿ 28ರಂದು ವಿಶ್ವಕ್ಕೆ ಸಂಶೋಧನೆ ಮಾಡಿದ ಗೌರವಾರ್ಥ ಇಂದು ರಾಷ್ಟ್ರೀಯ ವಿಜ್ಞಾನದ ಆದ್ಯ ಕರ್ತವ್ಯವಾಗಿದೆ.ಈ ದೆಸೆಯಲ್ಲಿ ವಿಜ್ಞಾನಿಗಳು ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ ಎಂದು ಹೇಳಿದರು. ಮುಖ್ಯಗುರುಗಳಾದ ಸುರೇಶ ಅಂಗಡಿ,ಮೇಡಂ ಕ್ಯೂರಿ, ಥಾಮಸ್ ಅಲ್ವಾ ಎಡಿಸನ್, ಸಿವಿ ರಾಮನ್ ಐಸಾಕ್ ನ್ಯೂಟನ್ ಮೊದಲಾದ ಮಹಾನ್ ವಿಜ್ಞಾನಿಗಳ ಹಾದಿಯಲ್ಲಿ ಮಕ್ಕಳು ಕಲಿಕೆಗೆ ಮುಂದಾಗಿ ಎಂದು ಹೇಳಿದರು. ಚಿತ್ರಕಲಾ ಶಿಕ್ಷಕ ದ್ವಾರಕೇಶ್ ರೆಡ್ಡಿ ವಿಜ್ಞಾನ ಗೀತೆಗಳ ಕುರಿತು ಮಾಹಿತಿ ನೀಡಿದರು.ಶಿಕ್ಷಕರಾದ ಬಸಪ್ಪ ಕೆ, ಆನಂದ ಜಿ.ಲಂಬಾಣಿ,ಗಿಡ್ಡಾನಾಯ್ಕ,ರೇಖಾ ಎಸ್, ಪ್ರತಿಮಾ ಎನ್, ಸಂತೋಷ ಕುಮಾರ ಎಸ್ ಇದ್ದರು.