ಸಿರುಗುಪ್ಪ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಸಮಾರೋಪ ಸಮಾರಂಭ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ: ಸಮಾರೋಪ  ಸಮಾರಂಭ

ಸಿರುಗುಪ್ಪ 21: ನಾಗರಿಕತೆ ಮತ್ತು ಜ್ಞಾನದ  ಬೆಳವಣಿಗೆಯಲ್ಲಿ ಹಾಗೂ ಜನಸಾಮಾನ್ಯರ ಮತ್ತು ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಸಾರ್ವಜನಿಕ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ ಎಂದು ನ್ಯಾಯವಾದಿಗಳಾದ ಎನ್ ವೆಂಕಟೇಶ್ ನಾಯಕ್ ಅವರು ಅಭಿಪ್ರಾಯ ಪಟ್ಟರು. 

 ನಗರದ ಸಾರ್ವಜನಿಕ ಶಾಖ ಗ್ರಂಥಾಲಯ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ಸಾರ್ವಜನಿಕರ ಗ್ರಂಥಾಲಯ ಇಲಾಖೆ ಸಿರುಗುಪ್ಪ ನಗರದ ಶಾಖ ಸಾರ್ವಜನಿಕ ಗ್ರಂಥಾಲಯ ಇವರ ಸಹಭಾಗಿತ್ವದಲ್ಲಿ 55ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನ.14ರಿಂದ 20ರವರೆಗೆ ಭಾನುವಾರ ಕಾರ್ಯಕ್ರಮದ ಸಮಾರೋಪ  ಸಮಾರಂಭದಲ್ಲಿ ಅವರು ಮಾತನಾಡುತ್ತಾ ಓದುವ ಹವ್ಯಾಸದಿಂದ ಅತ್ಯುತ್ತಮ ಜ್ಞಾನದ ವ್ಯಕ್ತಿತ್ವ ನಿರ್ಮಾಣ ಎಂದರು.  

ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈಸೂರು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಹಾಗೂ ಜಿಲ್ಲಾ ಸಾಕ್ಷರತಾ ಕಾರ್ಯ ಸಮಿತಿ ಸದಸ್ಯ ಏ ಅಬ್ದುಲ್ ನಬಿ ಅವರು ಮಾತನಾಡುತ್ತಾ ಭಾರತ ದೇಶದ ಜ್ಞಾನದ ಮೂಲೆ ನೆಲೆ ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ  ಬಳಸಿಕೊಂಡು ಸಾರ್ವಜನಿಕ ಗ್ರಂಥಾಲಯ  ಇಲಾಖೆಯು ಸಾರ್ವಜನಿಕರು ಮಕ್ಕಳಲ್ಲಿ ಓದುವಂತಹ ಅಭ್ಯಾಸವನ್ನು ಹೆಚ್ಚು ಮಾಡುವ ಕೆಲಸ ಮಾಡುತ್ತದೆ ರಾಜ್ಯದಲ್ಲಿ ಪ್ರಸ್ತುತ6890ಕ್ಕು  ಹೆಚ್ಚು ಗ್ರಂಥಾಲಯಗಳು ಕಾರ್ಯ ನಿರ್ವಹಿಸುತ್ತಿವೆ  1968 ರಿಂದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ​‍್ರ​‍್ರಥಮವಾಗಿ ಆಚರಣೆಗೆ ಬಂದಿತು ಎಂದು ನಬಿ ಹೇಳಿದರು.  

ಸಾರ್ವಜನಿಕ ಗ್ರಂಥಾಲಯ ಅಧಿಕಾರಿ ಶ್ರೀ ಜಗದೀಶ್ ಅವರು ಮಾತನಾಡಿ ಮಕ್ಕಳಿಗೆ ಗ್ರಂಥಗಳು ಗ್ರಂಥಾಲಯದ ಮಹತ್ವ ಕುರಿತು ಅರಿವು ಮೂಡಿಸುವ ಪ್ರಬಂಧ ಸ್ಪರ್ಧೆ ಗ್ರಂಥಾಲಯದ ಬೆಳವಣಿಗೆ ರಸಪ್ರಶ್ನೆ ಕಾರ್ಯಕ್ರಮಗಳು ಸ್ಪರ್ಧಾತ್ಮಕ ಪರೀಕ್ಷೆಗಳು ನ.14ರಿಂದ 19ರವರಿಗೆ ಜರುಗಿಸಲಾಯಿತು. 

 ಇಂದು ಗ್ರಂಥಾಲಯದ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಆಯೋಜನೆ ಎಂದು ಹೇಳಿದರು ಪತ್ರಕರ್ತರಾದ ಡಿ ಮಾರೆಪ್ಪ  ನಾಯಕ, ಶಿಕ್ಷಕ ಸಿದ್ದಲಿಂಗಪ್ಪ, ಅರಣ್ಯ ಇಲಾಖೆಯ ಬಸವನಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಅವರು ಪಾಲ್ಗೊಂಡಿದ್ದರು ಗ್ರಂಥಾಲಯ ಅಧಿಕಾರಿ ಜಗದೀಶ್ ಅವರು ಸ್ವಾಗತಿಸಿದರು  ಸಮಗ್ರ ಓದುಗರ ಬಳಗ ದವರಿದ್ದರು ವಿಜೇತರಿಗೆ ಬಹುಮಾನ ವಿತರಿಸಲಾಯಿತು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 


ಸುದ್ದಿ ಓದಿ