ಗುಳೇಗುಡ್ಡ

ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ರಾಷ್ಟ್ರೀಯ ಕೈಮಗ್ಗ ದಿನಾಚರಣೆ

ಗುಳೇದಗುಡ್ಡ 08: ಇಲ್ಲಿನ ಹ್ಯಾಂಡಲೂಮ್ ಅಸೋಶಿಯೇಶನ್ ಆಶ್ರಯದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. 

ಸಂಘದ ಅಧ್ಯಕ್ಷ ಜುಗಲಕಿಶೋರ ಭಟ್ಟಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮೇಶ್ವರ ರಾಠಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚರಕದಿಂದ ಕಂಡಿಕೆ ಸುತ್ತುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪಟ್ಟಣದ ಹಿರಿಯ ಕೈಮಗ್ಗ ನೇಕಾರರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೈಮಗ್ಗದ ಸ್ಥಿತಿಗತಿಗಳ ಕುರಿತು ಡಾ. ಆನಂದ ದೊಡಮನಿ, ಹಣಮಂತ ಪಲಮಾರಿ, ಶ್ರೀಕಾಂತ ಹುನಗುಂದ ಮಾತನಾಡಿದರು. 

ಎಲ್‌.ಓ.ಝಂವರ್, ಸಂಪತ್‌ಕುಮಾರ ರಾಠಿ, ಶಾಂಸುಂದರ ಮಾಲಪಾಣಿ, ಮಾಣಿಕಲಾಲ ಕಾವಡೆ, ರಾಜೇಂದ್ರ ತೋತಲಾ, ಚಂದ್ರಶೇಖರ ತಾಂಡೂರ, ಅಯ್ಯಪ್ಪ ವಾಳದವುಂಕಿ, ಸತ್ಯನಾರಾಯಣ ರಾಠಿ, ರುಕ್ಮಾಸಾ ಕಾವಡೆ ಸೇರಿದಂತೆ ಪಟ್ಟಣದ ಕೈಮಗ್ಗ ನೇಕಾರರು,ಖಣಗಳ ವ್ಯಾಪಾರಸ್ಥರು ಹಾಜರಿದ್ದರು. ಎಸ್‌.ಎಸ್‌.ಸಾರಂಗಿ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಚಿಕ್ಕಾಡಿ ವಂದಿಸಿದರು. 

ಸನ್ಮಾನ: ಬಾಗಲಕೋಟ ಜಿಲ್ಲಾ ನೇಕಾರ ಪ್ರಕೋಷ್ಟ ಹಾಗೂ ಪಟ್ಟಣದ ಬಿಜೆಪಿ ಘಟಕದ ಸಹಯೋಗದಲ್ಲಿ ಶನಿವಾರ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯನ್ನು ಶನಿವಾರ ಆಚರಿಸಿ 8 ಜನ ಕೈಮಗ್ಗ ನೇಕಾರರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಬಿಜೆಪಿ ಜಿಲ್ಲಾ ನೇಕಾರ ಸಂಚಾಲಕ ಮಲ್ಲಿಕಾರ್ಜುನ ಕಲಾದಗಿ, ನಗರ ಅಧ್ಯಕ್ಷ ವಸಂತ ದೊಂಗಡೆ, ಶ್ರೀಕಾಂತ ಕಲ್ಯಾಣಿ, ಭುವನೇಶ ಪೂಜಾರ, ಕಮಲಕಿಶೋರ ಮಾಲಪಾಣಿ, ರವಿ ಅಂಗಡಿ, ಈರಣ್ಣ ಕುರಹಟ್ಟಿ, ಮದುಸೂಧನ ರಾಂದಡ ಹಾಗೂ ಪಕ್ಷದ ಮುಖಂಡರು, ನೇಕಾರರು ಹಾಜರಿದ್ದರು. 


ಸುದ್ದಿ ಓದಿ