ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ : ಸಂಭ್ರಮಿಸಿದ ಕನ್ನಡ ರಾಜ್ಯೋತ್ಸವ
ರಾಣೇಬೆನ್ನೂರು 02: ಕನ್ನಡ ನಾಡು, ನುಡಿ, ನೆಲ, ಜಲ ಭಾಷೆ ಮತ್ತು ಸಂಸ್ಕೃತಿಯ ವಿಷಯಕ್ಕೆ ಯಾಕೆ ಬಂದಾಗ ಕನ್ನಡಿಗರು ನಿರಾಭಿಮಾನಿಗಳಾಗದೆ ನಮ್ಮತನವನ್ನು ನಾವು ಉಳಿಸಿ ಬೆಳೆಸಿಕೊಳ್ಳಲು ಸ್ವಾಭಿಮಾನಿಗಳಾಗುವುದು ಇಂದಿನ ಬಹು ಅಗತ್ಯವಿದೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.
ಅವರು, ಬುಧವಾರ ಇಲ್ಲಿನ ಕರ್ನಾಟಕ ಸಂಘದ ಸಭಾಂಗಣದಲ್ಲಿ ಜರುಗಿದ 50ನೇ ವರ್ಷಾಚರಣೆಯ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕನ್ನಡ ನುಡಿ ಭಾಷೆಗೆ ಸಾವಿರಾರು ವರ್ಷಗಳ ಬಹು ಇತಿಹಾಸ ಪರಂಪರೆ ಇದೆ, ಬಹು ಸಂಸ್ಕೃತಿಯನ್ನು ಉಲ್ಲೇಖಿಸುವಕನ್ನಡ ಭಾಷೆ, ನುಡಿ ಮತ್ತು ಲಿಪಿ ಬರಹ ಮತ್ತು ವಾಚಿಸಲು ಅತ್ಯಂತ ಸರಳ ಮತ್ತು ಮಧುರತೆ ಹೊಂದಿರುವ ನಾಡಿನ ಏಕೈಕ ಭಾಷೆ ಕನ್ನಡ, ಇಂದು ಆಧುನಿಕ, ಭಾಶೆಯ ಅಂದಾನುಕರಣೆಗೆ ಸಿಲುಕಿ, ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದರು. ಭಾರತೀಯರಲ್ಲಿ ದೇಶಾಭಿಮಾನ ಮತ್ತು ನಾಡಿನ ಅಭಿಮಾನದ ಜೊತೆಗೆ, ನಮ್ಮ ಪೂರ್ವಜರು ಅನುಸರಿಸಿಕೊಂಡು ಬಂದಿರುವ ಬಹು ಸರಳ ಭಾಷೆ ಕನ್ನಡ ಮತ್ತು ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸುವ ಗುರುತರವಾದ ಹೊಣೆ ಜನಾಂಗದ ಮೇಲಿದೆ ಎಂದು ಕರೆ ನೀಡಿದರು. ಧ್ವಜಾರೋಹಣ ನೆರವೇರಿಸಿದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರು ಹಾಗೂ ತಾಲೂಕ ದಂಡಾಧಿಕಾರಿಗಳಾದ ಹನುಮಂತ ಶಿರಹಟ್ಟಿ ಅವರು ಮಾತನಾಡಿ, ಸರಕಾರದ ಆದೇಶದಂತೆ ಎಲ್ಲ ಕಾಗದ ಪತ್ರಗಳು ಇಂದು ಎಲ್ಲಾ ಕಚೇರಿಗಳಲ್ಲಿ ಕನ್ನಡದಲ್ಲಿ ವಹಿವಾಟು ನಡೆಯುತ್ತಿದೆ. ಮಾತೃಭಾಷೆ ಕನ್ನಡ ಕಲಿತರೆ, ಭವಿಷ್ಯದಲ್ಲಿ ಎಲ್ಲಾ ಭಾಷೆಯು ಕಲೆಯಲು ಸಾಧ್ಯವಾಗುವುದು, ಇಲ್ಲದೆ ಹೋದರೆ ಆಂಗ್ಲದಲ್ಲಿಯೂ ಇಲ್ಲ ಕನ್ನಡದಲ್ಲಿಯೂ ಸರಿ ಇಲ್ಲ ಎನ್ನುವ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಅದಕ್ಕಾಗಿ, ಭವಿಷ್ಯದ ವಿದ್ಯಾರ್ಥಿಗಳು, ಮೊದಲು ಕನ್ನಡ ಭಾಷೆಗೆ ಮತ್ತು ಕನ್ನಡ ದಲ್ಲಿ ಶಿಕ್ಷಣಕ್ಕೆ ಮಾನ್ಯತೆ ನೀಡಬೇಕಾದ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ್ ಶಿರಹಟ್ಟಿ, ಶ್ರೀನಿವಾಸ ಏಕಬೊಟೆ, ಚಿದಂಬರ ಜೋಶಿ, ಸತ್ಯನಾರಾಯಣ ಹೊಳೆಬಾಗಿಲ, ವೀಣಾ ಶಿರಹಟ್ಟಿ, ನಿತ್ಯಾನಂದ ಕುಂದಾಪುರ, ಶಿವಕುಮಾರ್ ಜಾಧವ, ಪಾಲಾಕ್ಷಪ್ಪ ಕಡೆಮನಿ, ಶೇಖಣ್ಣ ಹೊಸಗೌಡ್ರ, ಭಾಷಾಸಾಬ್ ಹಂಪಾಪಟ್ಟಣ, ಸೀತಾರಾಮ ಕಣೆಕಲ್, ಪ್ರಭುಲಿಂಗಪ್ಪ ಹಲಗೇರಿ, ಎ. ಎ. ಕಿಲ್ಲದಾರ್, ಐ. ಎ. ಕಿಲ್ಲೇದಾರ್, ಶ್ರೀನಿಧಿ ಶಿರಹಟ್ಟಿ, ಅಭಿನಂದನ್ ಜೋಶಿ, ಕೆ ಎನ್ ಷಣ್ಮುಖ, ಎಮ್. ಹೆಚ್. ಪಾಟೀಲ್, ಸಿದ್ದಾರೋಡ ಗುರು, ಎಸ.ವಿ. ಹಿರೇಮಠ, ಕೃಷ್ಣ ಮಣ್ಣಣ್ಣನವರ್, ಚಂದ್ರಶೇಖರ ಮಡಿವಾಳರ, ಪ್ರಭಾಕರ್ ಶಿಗ್ಲಿ, ಎ.ಬಿ.ರತ್ನಮ್ಮ, ನೀಲಮ್ಮ ಟಿ.ಹೆಚ್. ರಮೇಶ್ ಭಂಡಾರಿ, ಬಿ.ಪಿ.ಶಿಡೇನೊರ, ಕೆ.ಎನ್. ಕೋರಧಾನ್ಯಮಠ, ಕೆ.ಎಸ್. ನಾಗರಾಜ್, ನಿರ್ಮಲ ಲಮಾಣಿ, ಸೇರಿದಂತೆ ಮತ್ತಿತರ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕನ್ನಡಾಭಿಮಾನಿಗಳು, ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಕರ್ನಾಟಕ ಸಂಘದ ಸದಸ್ಯರು ಕನ್ನಡ ಪರ ಸಂಘಟನೆಗಳ ಮುಖಂಡರು, ವಿವಿಧ ಶಾಲಾ ಕಾಲೇಜುಗಳ, ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಿಕ್ಷಕಿಯರು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕರ್ನಾಟಕ ಸಂಘದಲ್ಲಿ ಶ್ರೀ ಭುವನೇಶ್ವರಿ ಮಾತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಾಯಿತು, ಪ್ರಮುಖ ಬೀದಿಗಳಲ್ಲಿ ಸಂಚರಿಸಿದ, ಸಾಲಂಕೃತ ವಿದ್ಯಾರ್ಥಿಗಳ ಮೆರವಣಿಗೆಯು, ನಾಗರಿಕರ ಗಮನ ಸೆಳೆಯಿತು,ಮೆರವಣಿಗೆಯಲ್ಲಿ, ನಾಡಿನ ಸಾಧು ಸಂತರ ಶರಣರ, ದಾರ್ಶನಿಕರ ವೇಷ ತೊಟ್ಟ ವಿದ್ಯಾರ್ಥಿಗಳು ವಿಶೇಷ ಮೆರಗು ನೀಡಿದ್ದರು.