ರಾಷ್ಟ್ರೀಯ ರೈತ ದಿನಾಚರಣೆ: ರೈತರ ಸಂಕಷ್ಟ ದೂರವಾಗಲಿ ಎಂದು ಕೋನರಡ್ಡಿ.ಪ್ರಾರ್ಥನೆ : ನವಲಗುಂದ
ನವಲಗುಂದ : ಮಾಜಿ ಪ್ರಧಾನಮಂತ್ರಿ ಚೌದರಿ ಚರಣಸಿಂಗ ಹುಟ್ಟು ಹಬ್ಬದ ದಿನ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಇಂದು ನವಲಗುಂದ ರೈತ ವೀರಗಲ್ಲಿಗೆ ಮಾಲಾರೆ್ಣ ಮಾಡಿ ರೈತರಿಗೆ ಸಂಕಷ್ಟಗಳು ದೂರವಾಗಿ, ಆಧುನಿಕ ಕೃಷಿ ಪದ್ದತಿ ಅಳವಡಿಸಿ ಆದಾಯ ಹೆಚ್ಚಿಸಿಕೊಂಡು ರೈತರಿಗೆ ಒಳ್ಳೆಯದಾಗಲಿ ಎಂದು ಕಾಂಗ್ರೇಸ್ ಮುಖಂಡ, ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಕೋರಿದರು.
ಅವರು ನವಲಗುಂದ ರೈತ ಬಂಡಾಯದ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ರೈತ ವೀರಗಲ್ಲಿಗೆ ಮಾಲಾರೆ್ಣ ಮಾಡಿ ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾರಿ ಮಾಡಿದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಾಸ ಪಡೆದಿದ್ದು ರೈತರ ಹೋರಾಟಕ್ಕೆ ತಂದ ಜಯ. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಹೋರಾಟ ಮಾಡಿದರೂ ಸರ್ಕಾರ ಸ್ಪಂಧಿಸುತ್ತಿಲ್ಲ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯಲ್ಲಿ 2018 ರಿಂದ 2021 ರ ವರೆಗೆ ಮುಂಗಾರು, ಹಿಂಗಾರು ಬೆಳೆವಿಮೆ ಪರಿಹಾರ ಇಲ್ಲಿಯವರೆಗೆ ಬಿಡುಗಡೆಯಾಗಲಿಲ್ಲ. ಪ್ರಕೃತಿ ವಿಕೋಪದಿಂದ ಹಾನಿಯಾದ ರೈತರಿಗೆ ಸರ್ಕಾರ ದಿಂದ ಹೆಚ್ಚಿನ ಪರಿಹಾರ ನೀಡಿ ರೈತರಿಗೆ ಅನುಕೂಲಮಾಡಿಕೊಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರ ಪರವಾಗಿ ಕೋನರಡ್ಡಿ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜೀವನ ಪವಾರ, ಹನಮಂತ ವಾಲೀಕಾರ, ಶಿವಾನಂದ ತಡಸಿ, ಮುಖಂಡರುಗಳಾದ ನಿಜಗುಣಿ ಗಾಡದ, ವೀರಭದ್ರಗೌಡ ಪಾಟೀಲ (ಬೆಳವಟಗಿ), ಆನಂದ ಹವಳಕೋಡ, ಅಬ್ಬು ಕುನ್ನಿಬಾವಿ, ರವಿ ತೋಟದ, ಬಸನಗೌಡ ಪಾಟೀಲ, ಕುಮಾರ ಲಕ್ಕಮ್ಮನವರ, ಅಪ್ಪಣ್ಣ ನದಾಫ, ಹುಚ್ಚಪ್ಪ ಅರಕೇರಿ, ಮೊದೀನ ತೋಟದ ಹಾಗೂ ಇತರರು ಉಪಸ್ಥಿತರಿದ್ದರು.