ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಕೋನರಡ್ಡಿ ಮಾಲಾರ್ಪಣೆ
ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಒತ್ತಡ ಹೇರಿ ತಡೆ ಮಾಡಲು ಗೋವಾ ಪ್ರಯತ್ನಿಸುತ್ತಿದೆ : ಎನ್.ಹೆಚ್. ಕೋನರಡ್ಡಿ
ನವಲಗುಂದ 21 : ಉತ್ತರ ಕರ್ನಾಟಕದ ಕುಡಿಯುವ ನೀರಿನ ಜೀವನಾಡಿ ಮಹದಾಯಿ ಕಳಸಾ ಬಂಡೂರಿ ಜಾರಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅರಣ್ಯ, ಪರಿಸರ ಹಾಗೂ ರಾಷ್ಟ್ರೀಯ ವನ್ಯಜೀವಿ ಇಲಾಖೆಯಿಂದ ಅನುಮತಿ ಕೊಡಿಸಲು ಇವರಿಗೇನು ತೊಂದರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹದಾಯಿ ಹೋರಾಟಗಾರ, ನವಲಗುಂದ ವಿದಾನಸಭಾ ಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.
ಅವರು ಜುಲೈ 21 ನವಲಗುಂದ ನರಗುಂದ ರೈತ ಬಂಡಾಯದ ರೈತ ಹುತಾತ್ಮ ದಿನಾಚರಣೆ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ನವಲಗುಂದದಲ್ಲಿರುವ ವೀರಗಲ್ಲಿಗೆ ಮಾಲಾರೆ್ಣ ಮಾಡಿ ಮಾತನಾಡಿದ ಅವರು ಗೋವಾ ಸರ್ಕಾರ ಒತ್ತಡ ಮೆರೆಗೆ ದಿ: 7 ರಂದು ಕೇಂದ್ರ ಸರ್ಕಾರ ರಚಿಸಿರುವ ಕೇಂದ್ರ ಮಹದಾಯಿ ಪ್ರವಾಹ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಮಯದಲ್ಲಿಯೇ ಮಹದಾಯಿ ಪ್ರದೇಶಕ್ಕೆ ಭೇಟಿ ನೀಡಿ ವಿನಾಕಾರಣ ಕಾಲಹರಣ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು. ಈ ವಿಷಯವನ್ನು ದಿ: 23 ರಂದು ವಿಧಾನಸಭೆಯಲ್ಲಿ ಚರ್ಚಿಸಲು ವಿಧಾನಸಭೆಯ ಅಧ್ಯಕ್ಷರಾದ ಯು.ಟಿ. ಖಾದರಾವರು ನನಗೆ ಅನುಮತಿ ನೀಡಿದ್ದಾರೆ. ಅಲ್ಲಿ ಈ ವಿಷಯವನ್ನು ಚರ್ಚಿಸುತ್ತೇನೆ ಎಂದರು.
ಆದರೆ, ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರದ ಬೆಂಬಲದಿಂದ ಮಹಾರಾಷ್ಟ್ರ ಸರ್ಕಾರ ಮಹದಾಯಿ ನದಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಿರ್ಡಿ ಆಣೆಕಟ್ಟು ಎತ್ತರ ಹೆಚ್ಚಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೆ ಆಣೆಕಟ್ಟು ಎತ್ತರಿಸಲು ಡಿ.ಪಿ.ಆರ್ ತಯಾರಿಸಿ ಕಾಮಗಾರಿ ಪ್ರಾರಂಭಿಸುವ ಹುನ್ನಾರವನ್ನು ರೈತರು ಹಾಗೂ ಹೋರಾಟಗಾರರು ವಿರೋಧಿಸುತ್ತೇವೆ. ಈ ವಿಷಯವನ್ನು ರಾಜ್ಯದ ಬಿಜೆಪಿ ಸಂಸದರು ಗಂಭೀರವಾಗಿ ತೆಗೆದುಕೊಂಡು ಅನುಮತಿ ಕೊಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಈಗಾಗಲೇ ಮಹದಾಯಿ ನ್ಯಾಯಧೀಕರಣದ ನ್ಯಾಯಮೂರ್ತಿ ಜೆ.ಎಂ. ಪಾಂಚಾಳ ಅವರು ದಿ: 14/08/2018 ರಂದು ತೀಪು ನೀಡಿ ಕರ್ನಾಟಕಕ್ಕೆ 13.42 ಟಿಎಂಸಿ ನೀರು ಉಪಯೋಗಿಸಲು ಅನುಮತಿ ನೀಡಿ ಆದೇಶಿಸಿದೆ. ಅದರಲ್ಲಿ ಯೋಜನೆ ಜಾರಿಗೊಳಿಸಲು ಕಳಸಾ ನಾಲಾ ತಿರುವು ಯೋಜನಯಡಿ 1.72 ಟಿಎಂಸಿ ಹಾಗೂ ಬಂಡೂರ ನಾಲಾ ತಿರುವು ಯೋಜನೆ ಅಡಿ 2.18 ಟಿಎಂಸಿ ಕುಡಿಯುವ ನೀರಿನ (ಲಿಫ್ಟ್ ಯೋಜನೆಗಳು) ಮಾಡಲು ಯಾವದೇ ತೊಂದರೆ ಇಲ್ಲ. ಈಗಾಗಲೇ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ದಿನಾಂಕ: 27/02/2020 ರಂದು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ನಂತರ ದಿ: 29/12/2022 ರಂದು ಡಿಪಿಆರ್ ತಯಾರಿಸಲು ಅನುಮತಿ ಸಹ ನೀಡಿದೆ. ಆದರೂ ಕೂಡ ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ಪರಿಸರ ಹಾಗೂ ರಾಷ್ಟ್ರೀಯ ವನ್ಯಜೀವಿ ಇಲಾಖೆಯಿಂದ ಅನುಮತಿ ಕೊಡಿಸಲು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ಸಂಸದರು ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ರಾಜ್ಯದ ನೆಲ ಜಲದ ಪ್ರಶ್ನೆ ಬಂದಾಗ ಅಂದಿನ ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರು ಪಕ್ಷ ಹಾಗೂ ರಾಜಕೀಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಒಗ್ಗಟ್ಟಾಗಿ ನಿರ್ಣಯ ತೆಗೆದುಕೊಂಡು ರಾಜ್ಯದ ಹಿತ ಕಾಪಾಡಲು ಪ್ರಯತ್ನಿಸಬೇಕು. ಆ ಸ್ಥಾನವನ್ನು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ವಹಿಸಿಕೊಳ್ಳಬೇಕು.