ಆಧುನಿಕ ಕಾಲದಲ್ಲಿ ಸಮಾಜಶಾಸ್ತ್ರ ವಿಷಯ ಮಹತ್ವದ್ದು: ಡಾ. ಈರಣ್ಣ ಸಿ ಮುಳುಗುಂದ.

ಧಾರವಾಡ 09: ಕರ್ನಾಟಕ ವಿಶ್ವವಿದ್ಯಾಲಯ ಸಮಾಜ ಶಾಸ್ತ್ರ ಪ್ರಾಧ್ಯಾಪಕರ ಸಂಘದ ವತಿಯಿಂದ ಒಂದು ದಿನ ಸಮಾಜಶಾಸ್ತ್ರ ವಿಷಯದ ಕಾರ್ಯಗಾರ ನಡೆಯಿತು ಬಿಎ 5ನೇ ಸೆಮಿಸ್ಟರ್ ಪತ್ರಿಕೆಯ ಕುರಿತು ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಐ ಸಿ ಮುಳಗುಂದ ಅವರು ಸಂಪನ್ಮೂಲ ವ್ಯಕ್ತಿಯಾಗಿ ಸಮಾಜ ಬುಡಕಟ್ಟು ಸಂಖ್ಯಾಶಾಸ್ತ್ರ ಸಂಶೋಧನೆಯ ಕುರಿತು ಬಿಎ 5ನೇ ಸೆಮಿಸ್ಟರ್ ವಿಷಯದ ಎಲ್ಲಾ ಪಠ್ಯಕ್ರಮದ ಅಧ್ಯಾಯಗಳ ಕುರಿತು ಮಾಹಿತಿಯನ್ನು ನೀಡಿ ಉದಾಹರಣೆಗಳ ಮೂಲಕ ಅವರು ಉಪನ್ಯಾಸಕರಿಗೆ ಮಾರ್ಗದರ್ಶನ ಮಾಡಿದರು ಸಮಾಜಶಾಸ್ತ್ರ ವಿಷಯವು ಆಧುನಿಕ ಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಅತಿ ಅವಶ್ಯಕವಾಗಿದೆ ಕುಟುಂಬ ಸಮಾಜ ಹಿರಿಯರಿಗೆ ಗೌರವ ಮಾತನಾಡುವುದು ಜೀವನದಲ್ಲಿ ತಮ್ಮ ಬದುಕನ್ನು ಸುಧಾರಿಸಿಕೊಳ್ಳಲು ಸಮಾಜಶಾಸ್ತ್ರ ಅತಿ ಅವಶ್ಯಕವಾಗಿದೆ ಎಂದು ಮಾತನಾಡಿದರು.  

ಸಂಘದ ಅಧ್ಯಕ್ಷ ಡಾ. ಎಂ  ಹೆಚ್ ಹೆಬ್ಬಾಳ, ಉಪಾಧ್ಯಕ್ಷ ಜಿ ಟಿ ಭಟ್, ಕಾರ್ಯದರ್ಶಿ ಡಾ.ಎಂ ಎಫ್ ವಾಡೆಕರ್,  ಏ ವಿ ಹಿರೇಮಠ, ಡಾ. ಜಗದೀಶ್ ಎಂ, ಡಾ.   ವೈ ಐ ಚವಾನ್, ಡಾ. ಸಂತೋಷ್ ಹುಬ್ಬಳ್ಳಿ, ಸುಧಾ ಹಿರೇಮಠ್, ಡಾ. ಶೀಲಾ ತುಬುಜಿ, ಡಾ. ದಿನೇಶ್ ಸಿಂಗಾಪುರ್, ಎಮ್ ಎಂ ಬುಡ ಶೆಟ್ಟಿ,   ಆನಂದ ಕಾನಪೇಟ್, ಡಾ ವಿ ಎನ್ ನಾಗ ಶೆಟ್ಟಿ, ಎಂ ಎಸ್ ಗಾಣಿಗೇರ್, ಎಲ್ಲ ಉಪನ್ಯಾಸಕರು ಉಪಸ್ಥಿತರಿದ್ದರು