ಗೋಕಾಕ್

ನಿಸ್ವಾರ್ಥ ಸೇವೆಯಿಂದಲೇ ಗೌರವ: ಗಡೇದ

ನಿಸ್ವಾರ್ಥ ಸೇವೆಯಿಂದಲೇ ಗೌರವ: ಗಡೇದ

ಗೋಕಾಕ 03: ವೈದ್ಯನಾಗಲು ಶ್ರಮಪಡಬೇಕು ವೈದ್ಯನಾಥ ನಂತರವೂ ಇನ್ನಷ್ಟು ಶ್ರಮವಹಿಸಿ ಸೇವೆ ಮಾಡಬೇಕು. ನಮ್ಮ ನಿಸ್ವಾರ್ಥ ಸೇವೆಯಿಂದಲೇ ಗೌರವ ಹೆಚ್ಚಾಗುತ್ತದೆ ಮತ್ತು ಸಾರ್ಥಕತೆ ಬರುತ್ತದೆ ಎಂದು ಅವರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್ ಎಸ್ ಗಡೇದ ಅವರು ಅಭಿಪ್ರಾಯಪಟ್ಟರು.  

ಸ್ಥಳೀಯ ಸರಕಾರಿ ವೈದ್ಯರು ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.  ಕೊವಿಡ ಸಂದರ್ಭದಲ್ಲಿ ಅರ್ಹನಿತ ಕಾರ್ಯನಿರ್ವಹಿಸಿದ ಡಾ. ಆಯ್ ಟಿ ಗಡಾದ,  ಡಾ. ಪ್ರಭು ಬಿರಾದಾರ, ಡಾ. ಶಶಿಕಾಂತ ಮುನ್ಯಾಳ ಡಾ. ರವೀಂದ್ರ ಅಂಟಿನ ಡಾ. ಮಹಾಂತೇಶ ಕಡಾಡಿ ಡಾ. ಪವನ್ ದೇಶಪಾಂಡೆ ಮುಂತಾದವರನ್ನು ಸತ್ಕರಿಸಿ ಗೌರವಿಸಲಾಯಿತು. ಮಧುರ ಸಂಗೀತ ಬಳಗ ಹಾಗೂ ಅಮ್ಮಾಜಿ ನೃತ್ಯ ಶಾಲೆಯ ಕಲಾವಿದರಿಂದ ಜರುಗಿದ ಮನರಂಜನಾ ಕಾರ್ಯಕ್ರಮ ವೈದ್ಯ ಹಾಗೂ ವೈದ್ಯ ಕುಟುಂಬದ ಸದಸ್ಯರನ್ನು ಉಲ್ಲಸಿತಗೊಳಿಸಿತು.                      

ಕಾರ್ಯುಕ್ರಮದಲ್ಲಿ ವೈದ್ಯರುಗಳಾದ ಡಾ. ಎ ಪಿ ಜೀರಗ್ಯಾಳ, ಡಾ. ವಿಶ್ವನಾಥ ಭೊವಿ, ಡಾ. ಭೀಮಶಿ ಬಾಗಲಕೋಟ, ಡಾ.  ಮಂಗಲಾ ಸನದಿ, ಡಾ. ಪವನ್ ಕುಮಾರ್, ಡಾ.  ಸಂದೀಪ ಕೊಲಕಾರ, ಡಾ. ಪವಿತ್ರಾ ದಂಡಿನ, ಡಾ. ಶಾಂತ ಡಾ. ಹೊಂಗಲ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಮಚಂದ್ರ ಕಾಕಡೆ ಕಾರ್ಯಕ್ರಮ ನಡೆಸಿಕೊಟ್ಟರು. 


ಸುದ್ದಿ ಓದಿ