ಗೋಕಾಕ್

ರಸಾಯನಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ರಾಷ್ಟ್ರೀಯ ಸಮ್ಮೇಳನ

ರಸಾಯನಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ರಾಷ್ಟ್ರೀಯ ಸಮ್ಮೇಳನ

ಗೋಕಾಕ 25: ಜೆ. ಎಸ್‌. ಎಸ್‌. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಗೋಕಾಕ, ರಸಾಯನಶಾಸ್ತ್ರ ವಿಭಾಗ, ರಾಷ್ಟ್ರೀಯ ಮೌಲೀಕರಣ ಮತ್ತು ಮಾನ್ಯತಾ ಪರಿಷತ್(ಋಂಅ) ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಇವುಗಳ ಸಹಯೋಗದೊಂದಿಗೆ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ಜುಲೈ 23 ರಂದು ರಸಾಯನಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ರಾಷ್ಟ್ರೀಯ ಸಮ್ಮೇಳನವು ಜರುಗಿತು.  

 ಸಮ್ಮೇಳನದಲ್ಲಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಬೆಳಗಾವಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ಕಾಂತರಾಜು ಮತ್ತು ಪ್ರೊ. ಜೆ ಮಂಜಣ್ಣ ಇರ್ವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಕೃತಕ ರಸಾಯನಶಾಸ್ತ್ರ(ಖಥಿಟಿಣಜಣಛಿ ಅಜಟಣಡಿಥಿ) ಮತ್ತು ಭೌತಿಕ ರಸಾಯನಶಾಸ್ತ್ರ(ಒಚಿಣಜಡಿಚಿ ಅಜಟಣಡಿಥಿ) ಇರ್ವರು ಇವುಗಳ ಬಗ್ಗೆ ಸವಿಸ್ತಾರವಾಗಿ ಉಪನ್ಯಾಸ ಮಾಡಿದರು. 

ರಸಾಯನಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಸಂಶೋಧಕರ ಹಾಗೂ ವಿದ್ಯಾರ್ಥಿಗಳ ಬಳಿಗೆ ಒಯ್ಯುವ ಉದ್ದೇಶದಿಂದ ಈ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಸುಮಾರು 40ಕ್ಕಿಂತ ಹೆಚ್ಚು ಪಿಎಚ್‌. ಡಿ. ವಿದ್ಯಾರ್ಥಿಗಳು, 90ಕ್ಕಿಂತ ಹೆಚ್ಚು ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು 40 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಲೇಖನಗಳನ್ನು ಪೋಸ್ಟರ ಮುಖಾಂತರ ಮಂಡಿಸಿದರು. ಪಿ.ಎಚ್‌ಡಿ. ವಿಭಾಗದಲ್ಲಿ 3 ಅತ್ಯುತ್ತಮ ಸಂಶೋಧನಾ ಲೇಖನಗಳಿಗೆ ನಗದು ಸಹಿತ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಅದೇ ರೀತಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳಲ್ಲಿ ತಲಾ 1 ರಂತೆ ಅತ್ಯುತ್ತಮ ಸಂಶೋಧನಾ ಲೇಖನಕ್ಕೆ ನಗದು ಸಹಿತ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. 

ಸಮ್ಮೇಳನವನ್ನು ಗೋಕಾಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್ನ           ವಿಶ್ವನಾಥ ವ್ಹಿ. ಕಡಕೋಳ, ಕಾರ್ಯದರ್ಶಿ ಆರ್‌. ಎಮ್‌. ವಾಲಿ ಮತ್ತು ನಿರ್ದೇಶಕರುಗಳಾದ ಡಾ. ವ್ಹಿ. ಬಿ. ಉಪ್ಪಿನ, ಎಂ. ಡಿ. ಚುನಮರಿ, ಮಹಾವಿದ್ಯಾಲಯದ ಪ್ರಾಚಾರ್ಯಡಾ. ಆಶಾಲತಾ ಎಸ್‌. ತೇರದಾಳ ಮತ್ತು ಉಪ-ಪ್ರಾಚಾರ್ಯರ ಡಾ. ಆರ್‌. ಎಸ್‌. ಬಳಿಗಾರ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಕಾಂತರಾಜು ಉದ್ಘಾಟಿಸಿ ರಸಾಯನಶಾಸ್ತ್ರದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದರು.  

 ಸಮ್ಮೇಳನದ ಸಂಚಾಲಕ ಡಾ. ಎನ್‌. ಎಲ್‌. ತೇರದಾಳ, ಸಹ-ಸಂಚಾಲಕ ಡಾ. ರಾಜೇಶ್ವರಿ ಹೆಚ್‌. ವ್ಹಿ., ಸಂಯೋಜಕ ಡಾ. ಕೃಷ್ಣಮೂರ್ತಿ ಎಮ್‌. ಎಸ್‌., ಕಾರ್ಯದರ್ಶಿ ಡಾ. ಪಿ. ಪಿ. ಕಟ್ಟಿಮನಿ ಹಾಗೂ ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯರುಗಳು, ಮಹಾವಿದ್ಯಾಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶೃತಿ ಶಿಂಧಿಮರದ ಮತ್ತು ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಡಾ. ಎನ್‌. ಎಲ್‌. ತೇರದಾಳ ಸ್ವಾಗತಿಸಿದರು. ಡಾ. ರಾಜೇಶ್ವರಿ ಹೆಚ್‌.ವ್ಹಿ. ನಿರೂಪಿಸಿದರು. 


ಸುದ್ದಿ ಓದಿ