"ನಾರಿ ಶಕ್ತಿ ವಂದನ್ ಅಧಿನಿಯಮ" ವಿಧೇಯಕ ಮಂಡನೆ: ಮೀಸಲಾತಿ ಜಾರಿಗೆ ಅಸ್ತು. ಸಂಭ್ರಮಿಸಿದ ಮಹಿಳೆಯರು
ರಾಣೇಬೆನ್ನೂರು21: ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ " ನಾರಿ ಶಕ್ತಿ ವಂದನ್ ಅಧಿನಿಯಮ ಮಂಡನೆಯಾದ ಹಿನ್ನೆಲೆಯಲ್ಲಿ ಬುಧವಾರ ಮಹಿಳಾ ಮೋರ್ಚಾದ ಕಾರ್ಯಕರ್ತರು ಇಲ್ಲಿನ ಬಿಜೆಪಿ ಕಾರ್ಯಾಲಯದ ಎದುರು, ವಿಧೇಯಕವನ್ನು ಸಂಭ್ರಮದಿಂದ ಸ್ವಾಗತಿಸಿದ, ಮಹಿಳಾ ಮುಖಂಡರು, ಪಟಾಕಿ ಸಿಡಿಸಿ, ಸಿಹಿ ಹಂಚಿ, ವಿಜಯೋತ್ಸವವನ್ನು ಆಚರಿಸಿದರು.
ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷ ರೂಪಾ ಬಾಕಳೆ ಮಾತನಾಡುತ್ತಾ ಈ ಮೀಸಲಾತಿಯಿಂದ ಹಲವು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಮಹಿಳಾ ಸಮುದಾಯಕ್ಕೆ ಭವಿಷ್ಯದ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ರಾಜಕೀಯಮಹಿಳಾ ಸಮಾನತೆಯ ಸ್ಥಾನಮಾನಕ್ಕೆ ಅವಕಾಶ ದಕ್ಕಿದಂತಾಗಿದೆ ಎಂದರು.
ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶ್ರೀಮತಿ ಮಂಗಳಗೌರಿ ಅರುಣ ಕುಮಾರ್ ಪೂಜಾರ್ ಅವರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ,ಮಹಿಳೆಯರ ರಾಜಕೀಯ ಮೀಸಲಾತಿಗಾಗಿ ವಿವಿಧ ರೂಪದಲ್ಲಿ ತನ್ನ ಸಮಾನತೆಯ ಹಕ್ಕನ್ನು ಚಲಾಯಿಸಿ ವಿವಿಧ ಸಂದರ್ಭದಲ್ಲಿ ಶೀಘ್ರಜಾರಿಗಾಗಿ ಒತ್ತಾಯಿಸಿದ್ದರು. ಇಂದು ಬಹು ವರ್ಷಗಳ ನಂತರ ಮಹಿಳೆಯರಿಗೆ ಮೀಸಲಾತಿ ಹಕ್ಕು ಸಿಕ್ಕಂತಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು. ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಪವನ್ ಕುಮಾರ್ ಮಲ್ಲಾಡದ ಮಂಡಲದ ಅಧ್ಯಕ್ಷ ದೀಪಕ ಹರಪನಹಳ್ಳಿ, ಉಪಾಧ್ಯಕ್ಷ ಅಮೋಘ ಬಾದಾಮಿ, ಕಾರ್ಯದರ್ಶಿ ನಾಗರಾಜ ಬಣಕಾರ್, ಮೈಲಪ್ಪ ಗೋಣಿಬಸಮ್ಮನವರ್, ಸುಭಾಸ್ ಸಿರಗೇರಿ, ತಾಲೂಕ ಅಧ್ಯಕ್ಷ ನೀಲಾಂಬಿಕಾ ನಿಡಗುಂದಿ, ಕಾರ್ಯದರ್ಶಿ, ಸುಜಾತಾ ಆರಾಧ್ಯಮಠ, ಸದಸ್ಯ,ಸುಮಲತಾ ಮಳ್ಳೂರ,, ನಗರಸಭಾ ಸದಸ್ಯ ಗಂಗಮ್ಮ ಹಾವನೂರು, ಚೆನ್ನಮ್ಮ ಗುರುಪಾದ್ಯೆ ವರಮಠ, ಶೋಭಾ ಇಚ್ಚಂಗಿ, ಅಕ್ಷತಾ ಮಾಳಿಗಿಮನಿ,ಸೇರಿದಂತೆ ವಿವಿಧ ಮಂಡಳಗಳ ಅಧ್ಯಕ್ಷರು ಪದಾಧಿಕಾರಿಗಳು ಗ್ರಾಮಾಂತರ ಪ್ರದೇಶದ ಮಹಿಳೆಯರು ಪಾಲ್ಗೊಂಡಿದ್ದರು.