ಸ್ವದೇಶಿ ಪರ ನಿಂತ ನರೇಂದ್ರ ಮೋದಿ ಸರ್ಕಾರ
ಹೂವಿನ ಹಡಗಲಿ 29: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವದೇಶಿ ಪರ ನಿಂತು ಚೀನಾದಂತಹ ದೈತ್ಯ ದೇಶಕ್ಕೆ ಆರ್ಥಿಕ ಹೊಡೆತದ ಚಾಟಿ ಬೀಸೀದೆ ಎಂದು ವಿಜಯ ನಗರ ಬಿಜೆಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಬಸವರಾಜ ಹೇಳಿದರು.
ನಮ್ಮ ಪತ್ರಿಕಾ ಪ್ರತಿನಿಧಿ ಯೊಂದಿಗೆ ಶನಿವಾರ ಪತ್ರಿಕಾ ಹೇಳಿಕೆ ನೀಡಿದ ಅವರು ಕೇಂದ್ರ ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿ ಪರ ಚಿಂತನೆ ಮಾಡುತ್ತದೆ. ಸ್ವಾತಂತ್ರ್ಯ ನಂತರದಲ್ಲಿ ಸ್ವದೇಶಿ ಪರ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರದ ಸಾಲಿನಲ್ಲಿ ನಿಂತಿದೆ ಇದು ಮೋದಿಜಿಯವರಿಂದ ಮಾತ್ರ ಸಾಧ್ಯ.ಅಕ್ರಮವಾಗಿ ಭಾರತಕ್ಕೆ ಬರುತ್ತಿದ್ದ ವಿದೇಶಿ ಉತ್ಪನ್ನ ಗಳಿಗೆ ಕಡಿವಾಣ, ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡಿ ಉತ್ಪಾದನೆ ಮಾಡಲು ಸಹಾಯ. ಮೇಕ್ ಇನ್ ಇಂಡಿಯಾ ಯೋಜನೆ, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸ್ಥಾಪನೆಗೆ ಉತ್ತೇಜನ, ನಮ್ಮ ದೇಶದಲ್ಲೇ ವಸ್ತುಗಳ ಉತ್ಪಾದನೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಪರ ಯೋಜನೆಗಳನ್ನು ನರೇಂದ್ರ ಮೋದಿ ಜಿ ಬಿಜೆಪಿ ಸರ್ಕಾರ ಜಾರಿಗೆ ತಂದು ಇಂದು ಭಾರತವನ್ನು ವಿಶ್ವ ಮಟ್ಟದಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿಸಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರವನ್ನು ಕಾಲಯೇಳುವದನ್ನು ಬಿಟ್ಟು ಮೊದಲು ರಾಜ್ಯದಲ್ಲಿ ಜನತಾ ದರ್ಶನ ಮಾಡಿ ಜನರ ಕಷ್ಟಗಳನ್ನು ಆಲಿಸಲಿಕೇಂದ್ರ ಸರ್ಕಾರದ ಯೋಜನೆಗಳು ಸಾಮಾನ್ಯ ಜನರಿಗೆ ಮತ್ತು ರೈತರಿಗೆ ತಲುಪುತ್ತಿವೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಆರಂಭದಲ್ಲಿ ಗರ್ಜಸಿ ಈಗ, ಮಕಾಡೆ ಮಲಗಿವೆ. ಹೆಣ್ಣು ಮಕ್ಕಳ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ಜಮೆ ಆಗಿಲ್ಲ ಇಲ್ಲ ಸಲ್ಲದ ನೆಪ ಹೇಳಿ ಜನರ ಜಾರಿ ತಪ್ಪಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ರಾಜ್ಯದ ಜನತೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಂ ಬಿ ಬಸವರಾಜ ರಾಜ್ಯ ಸರ್ಕಾರ ವಿರುದ್ಧ ಆರೋಪ ಮಾಡಿದರು.