ರಾಣೆಬೆನ್ನೂರ

ದೇಶದ ಜನರ ಬದುಕು ಕಟ್ಟಿ ಕೊಡುವುದು ನರೇಂದ್ರ ಮೋದಿಯವರ ಗ್ಯಾರೆಂಟಿ

ದೇಶದ ಜನರ ಬದುಕು ಕಟ್ಟಿ ಕೊಡುವುದು ನರೇಂದ್ರ ಮೋದಿಯವರ ಗ್ಯಾರೆಂಟಿ

ರಾಣೇಬೆನ್ನೂರು 30:  ಎಲ್ಲರಿಗೂ ಸದೃಢ ಬದುಕು ಕಟ್ಟಿಕೊಡುವುದು ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಶುಕ್ರವಾರ ರಾತ್ರಿ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ  ಹಿಂದುಳಿದ ವರ್ಗಗಳ ಮುಖಂಡರ ಪಕ್ಷ ಸೇರೆ​‍್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕರ್ನಾಟಕದ ರಾಜಕಾರಣ ದೊಡ್ಡ ಪ್ರಮಾಣದಲ್ಲಿ  ಬದಲಾವಣೆಯಾಗುತ್ತಿದೆ. ದೊಡ್ಡ ದೊಡ್ಡ ನಾಯಕರು. ಈ ರಾಜ್ಯವನ್ನು ನಡೆಸುವಂತಹ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗಳು ರಾಜಕೀಯ ಸಂಪೂರ್ಣ ತಮ್ಮ ಕಪಿಮುಷ್ಠಿಯಲ್ಲಿದೆ ಎಂದು ತಿಳಿದುಕೊಂಡಿದ್ದರು. ಇವತ್ತು ಅವರ ಕಪಿಮುಷ್ಠಿಯಿಂದ ಹೊರ ಬರುವ ಮೂಲಕ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದ್ದೀರಿ ಎಂದು ಹೇಳಿದರು.ಅಧಿಕಾರದ ಮದದಿಂದ ಅವರಿಗೆ ಸಾಮಾನ್ಯ ಜನರು ಕಾಣಿಸುತ್ತಿಲ್ಲ. ಕೇವಲ ಹೊಗಳು ಭಟ್ಟರು ಮಾತ್ರ ಕಾಣಿಸುತ್ತಿದ್ದಾರೆ. ಈ ಚುನಾವಣೆ ಫಲಿತಾಂಶ ಹೊರ ಬಂದ ಮೇಲೆ ಅವರಿಗೆ ಸತ್ಯದ ದರ್ಶನ ಆಗಲಿದೆ. ರಾಣೇಬೆನ್ನೂರಿನಲ್ಲಿ ಇಂದು ಹಿಂದುಳಿದ ವರ್ಗಗಳ ಜನರು ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಸೇರಿ ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ನಾವು ಅವರನ್ನು ನಮ್ಮವರಾಗಿ ಗೌರವ ಪೂರಕವಾಗಿ ನಡೆಸಿಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದರು. 

ಬೇರೆ ರಾಜ್ಯಗಳ ಪರಿಸ್ಥಿತಿ ಬೇರೆ ಇದೆ. ಕರ್ನಾಟಕದ ಚಿತ್ರಣ ನೋಡಿದರೆ ಇಲ್ಲಿನ ಜನರು ಬಹಳ ಪಬುದ್ಧರಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ವ್ಯತ್ಯಾಸ ಗೊತ್ತಿದೆ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಇದ್ದಾಗ ಲೋಕಸಭೆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಬೆಂಬಲ ಕೊಡಲಿಲ್ಲ. ಅವರು ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿದಾಗ ರಾಮಕೃಷ್ಣ ಹೆಗಡೆಯವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ನೀಡಿದ್ದರು. ಅದೇ ರೀತಿ 2013 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿದ್ದರು. ಆದರೆ, 2014 ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಿದ್ದರು. ಕಳೆದ ಹತ್ತು ವರ್ಷಗಳಲ್ಲಿ ವಿಶ್ವದಲ್ಲಿ ಭಾರತದ ಬಗೆಗಿನ ಅಭಿಪ್ರಾಯ ಸಾಕಷ್ಟು ಬದಲಾಗಿದೆ. ಆಗ ಎಲ್ಲೆಡೆ ಭಯೋತ್ಪಾದನೆ ಚಟುವಟಿಕೆ ಕೇಳಿ ಬರುತ್ತಿತ್ತು. ಮನಮೋಹನ್ ಸಿಂಗ್ ಅವರು ನಮ್ಮ ದೇಶದ ಮೇಲೆ ಬಾಂಬ್ ದಾಳಿಯಾದಾಗ ಪಾಕಿಸ್ತಾನಕ್ಕೆ ನಿಮ್ಮವರು ನಮ್ಮ ದೇಶದ ಮೇಲೆ ದಾಳಿ ಮಾಡಿದ್ದಾರೆ ಎಂದು ಪತ್ರ ಬರೆಯುತ್ತಿದ್ದರು. ಆದರೆ, ಮೋದಿಯವರು ಒಂದು ಸರ್ಜಿಕಲ್ ಸ್ಟೈಕ್ ಮಾಡಿ, ನಿಮ್ಮ ದೇಶದ ಒಳಗೆ ಬಂದು ಹೊಡೆಯುತ್ತೇವೆ ಎನ್ನುವ ಸಂದೇಶ ನೀಡಿದರು.ಅಮೇರಿಕಾ, ಚೀನಾ ಸೇರಿದಂತೆ ಎಲ್ಲ ದೇಶಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಭಾರತದ ಆರ್ಥಿಕತೆ ಮಾತ್ರ ಶೇ 7 ರಷ್ಟು ಅಭಿವೃದ್ಧಿಯಾಗುತ್ತಿದೆ. ದೇಶದಲ್ಲಿ 8 ಲಕ್ಷ ಮನೆ ನೀಡಿದ್ದೇವೆ. ಎಲ್ಲ ಮನೆಗಳಿಗೂ ಶೌಚಾಲಯ, ಪತಿಯೊಬ್ಬರಿಗೂ ಅನ್ನ ನೀಡಿದ್ದೇವೆ. ಬದುಕನ್ನು ಕಟ್ಟಿ ಕೊಡುವುದು ನರೇಂದ್ರ ಮೋದಿಯವರ ಗ್ಯಾರಂಟಿ ಎಂದು ಹೇಳಿದರು. ಕೊವಿಡ್ ಸಂದರ್ಭದಲ್ಲಿ ಮೋದಿಯವರು ಎಲ್ಲರಿಗೂ ಎರಡು ಬಾರಿ ಕೊವಿಡ್ ಲಸಿಕೆ ಕೊಡಿಸಿ ಎಲ್ಲರನ್ನು ರಕ್ಷಣೆ ಮಾಡಿದರು. ಹೀಗಾಗಿ ನಾವು ಈಗಲೂ ಆರೋಗ್ಯವಾಗಿದ್ದೇವೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ನಾವು ಅಧಿಕಾರದಲ್ಲಿದ್ದಾಗ ರಾಜ್ಯ ಸರ್ಕಾರದಿಂದ 4 ಸಾವಿರ ಕೋಡುತ್ತಿದ್ದೇವು ಅದನ್ನು ನಿಲ್ಲಿಸಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲ ಬಂದಿದೆ. ಬರ ಪರಿಹಾರಕ್ಕೆ ಹಣ ಬಿಡುಗಡೆ ಮಾಡದೇ ಕೇವಲ ಸುಳ್ಳು  ಹೇಳುತ್ತಲೇ ಕಾಲ ಕಳೆಯುತ್ತಿದ್ದಾರೆ. ದನಕರುಗಳಿಗೆ ಮೇವು, ಕುಡಿಯಲು ನೀರಿಲ್ಲದೇ, ಉತ್ತರ ಕರ್ನಾಟಕ ಭಾಗದಲ್ಲಿ ಅರ್ಧ ರೇಟಿಗೆ ದನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. 

ನಿಮ್ಮ ಆಶೀರ್ವಾದದಿಂದ ನನ್ನ ಗೆಲುವು ಆಗುತ್ತದೆ. ಕಮಲಕ್ಕೆ ಮತ ಹಾಕುವ ಮೂಲಕ ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಈ ಚುನಾವಣೆ ಮುಗಿದ ತಕ್ಷಣವೇ ಮೆಡ್ಲೇರಿ ಕೆರೆಗೆ ನೀರು ಹರಿಸುವ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬೈರತಿ ಬಸವರಾಜ್, ಬಿ.ಸಿ. ಪಾಟೀಲ್, ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಪೂಜಾರ್, ರಾಜ್ಯ ಉಪಾಧ್ಯಕ್ಷ ಡಾ: ಬಸವರಾಜ ಕೇಲಗಾರ ನಗರ ಅಧ್ಯಕ್ಷ ರಮೇಶ್ ಗುತ್ತಲ, ಗ್ರಾಮೀಣ ಅಧ್ಯಕ್ಷ ಪರಮೇಶ್ವರ ಗೋಳಣ್ಣನವರ, ಮಾಜಿ ಅಧ್ಯಕ್ಷರಾದ, ದೀಪಕ್ ಹರ​‍್ಪನಹಳ್ಳಿ, ಬಸವರಾಜ ಕೇಲಗಾರ, ಜಿ.ಜಿ ಹೊಟ್ಟಿಗೌಡ್ರು, ಮಂಜುನಾಥ ಓಲೆಕಾರ್, ಅಮೋಘ ಬದಾಮಿ, ಭಾರತಿ ಅಳವಂಡಿ, ಗಂಗಮ್ಮ ಹಾವನೂರು,, ಮಂಜುಳಾ ಹತ್ತಿ, ಚೋಳಪ್ಪ ಕಸವಾಳ, ರಾಜೇಂದ್ರ ಬಸೇನಾಯ್ಕರ್, ಸೇರಿದಂತೆ ಮತ್ತಿತರ, ಗಣ್ಯರು ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳು,  ಮುಖಂಡರು ಹಿಂದುಳಿದ ವರ್ಗಗಳ ನೂರಾರು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು ನೂರಾರು ಕಾರ್ಯಕರ್ತರು ಬಿಜೆಪಿಗೆ ಅಧಿಕೃತವಾಗಿ ಸೇರೆ​‍್ಡಗೊಂಡರು. 


ಸುದ್ದಿ ಓದಿ